Saturday 10th, May 2025
canara news

ಸುಬ್ರಹ್ಮಣ್ಯದಲ್ಲಿ ಬ್ರಹ್ಮ ರಥೋತ್ಸವದೊಂದಿಗೆ ಚಂಪಾಷಷ್ಠಿ ಮುಕ್ತಾಯ

Published On : 25 Nov 2017   |  Reported By : Canaranews network   |  Pic On: Photo credit-The Hindu


ಮಂಗಳೂರು : ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯು ಮಹಾರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಧನುರ್ ಲಗ್ನದಲ್ಲಿ ನಿನ್ನೆ ಮುಂಜಾನೆ 8.37 ರ ಮುಹೂರ್ತದಲ್ಲಿ ಸುಬ್ರಹ್ಮಣ್ಯ ಆದಿಯಾಗಿ ಉಮಾಮಹೇಶ್ವರ ದೇವರಿಗೆ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು.

ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಹದಿನಾರು ದಿನಗಳ ಕಾಲ ನಡೆಯುವ ಜಾತ್ರೋತ್ಸವದ ಕಾರ್ಯಕ್ರಮಗಳಲ್ಲಿ ಕ್ಷೇತ್ರದಲ್ಲಿ ಮೂರು ದಿನಗಳ ಆಚರಣೆಗಳು ವಿಶಿಷ್ಟವಾಗಿರುತ್ತದೆ.

ಚೌತಿ,ಪಂಚಮಿ ಹಾಗೂ ಷಷ್ಠಿ ಯಂದು ಇಲ್ಲಿ ವಿಶೇಷ ಸೇವೆಯಾದ ಎಡೆಮಡೆಸ್ನಾನದ ಜೊತೆಗೆ ಕ್ಷೇತ್ರಾಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಉಮಾಮಹೇಶ್ವರ ದೇವರಿಗೆ ರಥೋತ್ಸವವೂ ನಡೆಯುತ್ತದೆ.ಇಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿಶಿಷ್ಟ ಮಹತ್ವವೂ ಇದೆ. ರಾಜ್ಯದ ಅತ್ಯಂತ ದೊಡ್ಡ ರಥಗಳಲ್ಲಿ ಸುಬ್ರಹ್ಮಣ್ಯ ರಥವೂ ಒಂದಾಗಿದೆ.

ಚಂಪಾ ಷಷ್ಠಿಯ ದಿನದಂದು ಈ ರಥೋತ್ಸವ ನಡೆಯುತ್ತಿದ್ದು, ಈ ಬಾರಿ ಧನುರ್ ಲಗ್ನದ 8.37 ರ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here