Saturday 10th, May 2025
canara news

ಗಾಣಿಗ ಸಮಾಜ ಮುಂಬಯಿ ಸಂಸ್ಥೆಯಿಂದ ಬಿಲ್ಲವರ ಭವನದಲ್ಲಿ

Published On : 26 Nov 2017   |  Reported By : Ronida Mumbai


ಧರ್ಮಾರ್ಥ ರಕ್ತದಾನ-ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.26: ಗಾಣಿಗ ಸಮಾಜ ಮುಂಬಯಿ ಸಂಸ್ಥೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.

ಗಾಣಿಗ ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಮತ್ತು ಸಂಸ್ಥೆಯ ಪದಾಧಿಕಾರಿಗಳ ಮುಂದಾಳುತ್ವದಲ್ಲಿ ಮಧ್ಯಾಹ್ನ ತನಕ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಗೋರೆಗಾಂ ಪಶ್ಚಿಮದ ಸಿದ್ಧರ್ಥ್ ಮುನ್ಸಿಪಾಲ್ ಆಸ್ಪತೆ ಇಲ್ಲಿ ಸೇವಾ ನಿರತ ಪ್ರ್ರಬೋಧನ್ ಗೋರೆಗಾಂ ಆಡಳಿತ್ವದ ವಿೂನಾಕ್ಷಿ ಠಾಕ್ರೆ ಬ್ಲಡ್ ಬ್ಯಾಂಕ್ ಸಂಸ್ಥೆ ರಕ್ತದಾನ ಮತ್ತು ರಕ್ತ ಪರೀಕ್ಷೆ ನಡೆಸಿದ್ದು ಡಾಕ್ಟರ್'ಸ್ ಪ್ಲಾನೆಟ್ ಮತ್ತು ಶೋಭಾ ಮೆಡಿಕೋಸ್ ಥಾಣೆ ಇದರ ಮುಖ್ಯಸ್ಥ ರತ್ನಾಕರ್ ಎ.ಶೆಟ್ಟಿ ಸಹಯೋಗದಲ್ಲಿ ಡಾ| ಶೈಲೇಶ್, ಡಾ| ಹೃಷಿಕೇಶ್ ಮತ್ತು ಡಾ| ಸುಷ್ಮಾ ಮತ್ತು ಸಿಬಂದಿ ವರ್ಗ ಅವರ ವೈದ್ಯಕೀಯ ತಂಡವು ನೂರಾರು ಜನರ ವಿವಿಧ ತರದ ಆರೋಗ್ಯ ತಪಾಸಣಾ ಶಿಬಿರ ಹಾಗು ರಕ್ತದಾನ ಶಿಬಿರ ನಡೆಸಿತು. ಸ್ವಸಮಾಜ ಬಾಂಧವರು ಮತ್ತಿತರರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಉಪಾಧ್ಯಕ್ಷರುಗಳಾದ ಭಾಸ್ಕರ ಎಂ.ಗಾಣಿಗ ಮತ್ತು ಶಂಕರ್ ಹನೆಹಳ್ಳಿ, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಎನ್.ಭಟ್ಕಳ್, ಯುವ ವಿಭಾಗ ಕಾರ್ಯಾಧ್ಯಕ್ಷ ಗಣೀಶ್ ಆರ್.ಕುತ್ಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಯು.ಬಾಲಕೃಷ್ಣ ಕಟಪಾಡಿ, ಸದಾನಂದ ಕಲ್ಯಾಣ್ಪುರ, ರಾಜೇಶ್ ಕುತ್ಪಾಡಿ, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ, ಮಮತಾ ದೇವೆಂದ್ರ ರಾವ್, ದಿನೇಶ್ ರಾವ್ ಟಿ.ಎಸ್, ದೇವೆಂದ್ರ ರಾವ್, ನರೇಂದ್ರ ರಾವ್, ವಿನಾಯಕ ಭಟ್ಕಳ, ದಿನೇಶ್ ಗಾಣಿಗ ಭಯಂದರ್, ಗಂಗಾಧರ ಎನ್.ಗಾಣಿಗ, ಮತ್ತಿತರರು ಹಾಜರಿದ್ದು ಅವಳಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.

ರತ್ನಾಕರ್ ಎ.ಶೆಟ್ಟಿ , ಡಾ| ಶೈಲೇಶ್ ಡಾ| ಹೃಷಿಕೇಶ್ ಮತ್ತು ಡಾ| ಸುಷ್ಮಾ ಅವರನ್ನು ಶಾಲು ಹೊದಿಸಿ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಬಿ.ವಿ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here