Saturday 10th, May 2025
canara news

`ಮೇಲ್ತೆನೆ' ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

Published On : 26 Nov 2017   |  Reported By : Rons Bantwal


ಮಂಗಳೂರು, ನ.26: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ' ಸಂಘಟನೆಯು ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಬ್ಯಾರಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

 Ibrahim Bathish

 Mohd Nasir

Shameema Kuttar

ಇಬ್ರಾಹೀಂ ಬಾತಿಷ್ ಅವರ `ಒರು ಮಾದಿರಿ' ಕಥೆಗೆ ಪ್ರಥಮ, ಶಮೀಮಾ ಕುತ್ತಾರ್ ಅವರ `ಅರೆ ಪಿರಾಂದ' ಕಥೆಗೆ ದ್ವಿತೀಯ, ಮುಹಮ್ಮದ್ ನಾಸಿರ್ ರೆಂಜಾಡಿ ಅವರ `ಬ್ಯಾಂಡಾತೆ ಅವ' ಕಥೆಗೆ ಮೂರನೆ ಬಹುಮಾನ ಲಭಿಸಿದೆ.

ಬ್ಯಾರಿ ಭಾಷೆ, ಸಾಹಿತ್ಯ, ಕಲೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ `ಮೇಲ್ತೆನೆ' ಸಂಘಟನೆಯು ಮೊದಲ ಬಾರಿಗೆ ಹಮ್ಮಿಕೊಂಡ ಸ್ಪರ್ಧೆಗೆ 10 ಕಥೆಗಳು ಬಂದಿದ್ದವು. ಆ ಪೈಕಿ ಕಥೆಯ ವಸ್ತು, ಸ್ವರೂಪ, ಶೈಲಿ, ನಿರೂಪಣೆ ಇತ್ಯಾದಿಯನ್ನು ಅವಲೋಕಿಸಿ 3 ಕಥೆಗಳನ್ನು ತೀರ್ಪುಗಾರರು ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
`ಮೇಲ್ತೆನೆ' ಅಧ್ಯಕ್ಷ ಆಲಿಕುಂಞÂ ಪಾರೆಯ ಅಧ್ಯಕ್ಷತೆಯಲ್ಲಿ ಡಿ.16ರಂದು ಅಪರಾಹ್ನ 2 ಗಂಟೆಗೆ ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‍ನ ಸಭಾಂಗಣದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here