Saturday 10th, May 2025
canara news

ಕುಂದಾಪುರಲ್ಲಿ ತೆರಾಲಿ ಪೂರ್ವಭಾವಿಯಾಗಿ ಭವ್ಯ ಮೆರವಣಿಗೆಯೊಂದಿಗೆ ಪರಮ ಪ್ರಸಾದದ ಆರಾಧನೆ

Published On : 27 Nov 2017   |  Reported By : Bernard J Costa


ಕುಂದಾಪುರ,ನ.27: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ, “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ‘ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ’ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ಭಾನುವಾರದಂದು ನೆಡೆಯಿತು.

 

ಪವಿತ್ರೆ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ, ಮತ್ತು ಅನೇಕ ಧರ್ಮ ಭಗಿನಿಯರೊಡನೆ ಉರಿಯುವ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳಡೊನೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.

ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ನೆಡೆಸಿದ ಶಿವಮೊಗ್ಗ ಧರ್ಮ ಪ್ರಾಂತ್ಯದ ‘ನಗರ’ ಪಟ್ಟಣದ ಚರ್ಚಿನ ಪ್ರಧನ ಧರ್ಮಗುರು ವಂ|ಪಿಯುಸ್ ಡಿಸೋಜಾ ‘ಯೇಸು ಕ್ರಿಸ್ತರು ಈ ಧರೆಯಲ್ಲಿ ಜನ್ಮ ವೆತ್ತಿದ್ದು ಪಾಪಿಗಳನ್ನು ಹುಡುಕಿಕೊಂಡು, ಕಶ್ಟ ಪಟ್ಟು ಬೆಂಡಾಗಿ ಬಸವಳಿದವರಿಗೆ ಚೈತನ್ಯ ತುಂಬಲು, ರೋಗಿಗಳಿಗೆ ಒಷಧಿ ನೀಡಿ ಗುಣ ಪಡಿಸಲು, ಅನಾಥ ಬಡ ಬಗ್ಗರಿಗೆ ರಕ್ಷಣೆ ನೀಡಲು ಯೇಸು ಬಂದಿದ್ದರು, ನಮ್ಮಗೆ ಪುಡ್ಡು, ದುಡ್ಡು, ಬೆಡ್ಡು ಇಸ್ಟಿದ್ದರೆ ನಾವು ಸಮಾಧಾನದಿಂದ ಇರುತ್ತೇವೆ ಎಂದು ನಾವು ನಂಬಿದ್ದೆವೆ, ಆದರೆ ಕೊನೆಗೆ ಅದರಲ್ಲೂ ಸಮಾಧಾನ ಇರುವುದಿಲ್ಲಾ, ನೀಜವಾದ ಸಮಾಧಾನ ನೀಡುವನು ಯೇಸು ಮಾತ್ರ, ಇತರರಿಗೆ ಕ್ಷಮಿಸಿ ಬಾಳುವುದೇ ನೀಜವಾದ ಜೀವನ, ನೀಜವದ ಸಮಾಧಾನ, ದೇವರು ಪ್ರೀತಿ ಸ್ವರೂಪಿ ಆತನು ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನು ಅನುಗ್ರಹಿಸುತ್ತಾನೆ’ ಎಂದು ಅವರು ಸಂದೇಶ ನೀಡಿ ಪರಮ ಪ್ರಸಾದದ ರೂಪದಲ್ಲಿರುವಯೇಸುವಿನ ಆಶಿರ್ವಾದವನ್ನು ನೀಡಿದರು.

ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ವ|ಅನೀಲ್ ಡಿ’ಸೋಜಾ ಹಾಜರಿದ್ದು ಅವರು ಎಲ್ಲರನ್ನು ವಂದಿಸಿದರು ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಹಲವು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ ಸದಸ್ಯರು, ವಾಡೆಯ ಗುರಿಕಾರರು, ಕಾರ್ಯಕ್ರಮದ ಪೆÇೀಷಕಿ ಆಪೆÇೀಲಿನ್ ಡಿಸಿಲ್ವಾ ಮತ್ತು ಕುಟುಂಬದ ಸದಸ್ಯರು ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಈ ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here