Saturday 10th, May 2025
canara news

ಶೋಭಾ ಕರಂದ್ಲಾಜೆ ಜನರ ಹಾದಿ ತಪ್ಪಿಸುತ್ತಿದ್ದಾರೆ - ಸಚಿವ ಖಾದರ್

Published On : 28 Nov 2017   |  Reported By : canaranews network


ಮಂಗಳೂರು: ಸಂವಿಧಾನದ ದಿನದ ಜಾಹೀರಾತಿನಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಚಿತ್ರವನ್ನು ಸೇರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಶೋಭಾ ಕರಂದ್ಲಾಜೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನ ಸಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಉತ್ತಮ ಆಡಳಿತವನ್ನು ನೀಡಿದೆ.ಅಲ್ಲದೆ, ಜನಸ್ನೇಹಿ ಯೋಜನೆ ನೀಡಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಲು ಬೇರೆ ಕಾರಣಗಳಿಲ್ಲದೆ ಇಲ್ಲ ಸಲ್ಲದ ಕಾರಣ ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು. ವಿಪಕ್ಷ ವಾದ ಬಿಜೆಪಿಯವರು ಕೆ. ಜೆ ಜಾರ್ಜ್ ಮತ್ತು ವಿನಯ್ ಕುಲಕರ್ಣಿ ಅವರ ರಾಜೀನಾಮೆ ಕೇಳುವ ನೆಪದಲ್ಲಿ ಬೆಳಗಾವಿ ಅಧಿವೇಶಕ್ಕೆ ಅಡ್ದಿ ಪಡಿಸಿದ್ದಾರೆ. ಈ ರೀತಿ ಗೊಂದಲಗಳನ್ನು ಸೃಷ್ಟಿಸುವ ಬದಲು ಬಿಜೆಪಿ ಜನಪರ ಕೆಲಸ ಮಾಡಲಿ ಸಲಹೆ ನೀಡಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here