Saturday 10th, May 2025
canara news

ಕುಂದಾಪುರ ತೆರಾಲಿ ಹಬ್ಬ - ದೇವರ ವಾಕ್ಯದ ಭಕ್ತಿ ಸಂಭ್ರಮ

Published On : 29 Nov 2017   |  Reported By : Bernard J Costa


ಕುಂದಾಪುರ,ನ.29: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ವಾರ್ಷಿಕ ಮಹಾ ಹಬ್ಬದ ಪ್ರಯುಕ್ತ ಮಂಗಳವಾರಂದು ದೇವರ ವಾಕ್ಯದ ಪೂಜಾ ವಿಧಿಯನ್ನು ಬಹಳ ಭಕ್ತಿ ಪೂರ್ವಕವಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು 

 

 

 

 

“ದೇವರ ವಾಕ್ಯವು, ನನ್ನ ಜೀವನಕ್ಕೆ ದೀಪವು” ಎಂಬ ಧ್ಯೇಯ ವಾಕ್ಯದ ಈ ಪೂಜಾ ವಿಧಿಯನ್ನು ಕಟ್ಕರೆ ಬಾಲಾ ಯೇಸುವಿನಾ ಆಶ್ರಮದ ಪ್ರಧಾನರಾದ ತಲ್ಲೂರು ಇಗರ್ಜಿಯ ಧರ್ಮಗುರು ವಂ| ಎಲಿಯಾಸ್ ಡಿಸೋಜಾ ನೆಡೆಸಿ ಕೊಟ್ಟು, “ನಿನಗೆ ಹಾಲು ಉಣಿಸಿದ ತಾಯಿ ಭಾಗ್ಯಳೆ ಸರಿ ಎಂದು ನಾವು ಮರಿಯಳನ್ನು ಕೊಂಡಾಡುತ್ತೇವೆ, ಆದರೆ ಯೇಸು ಹೇಳುತ್ತಾರೆ ದೇವರ ವಾಕ್ಯ ಯಾರು ಕೇಳುತ್ತಾರೊ ಅವರೇ ಭಾಗ್ಯರು, ದೇವರ ವಾಕ್ಯ ಕೇಳಿ ಅದರಂತೆ ನೆಡೆಯುವರು ನೀಜವಾಗಿಯೂ ಭಾಗ್ಯರು, ನನ್ನ ವಾಕ್ಯ ಯಾರು ಕೇಳುತ್ತಾರೊ, ಹಾಗೆ ಅದರಂತೆ ನೆಡೆಯುವರೇ ನನ್ನ ತಾಯಂದಿರು, ನನ್ನ ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದ್ದಿರು, ಎಂದು ಹೇಳಿದ್ದಾರೆ, ಹಾಗಾಗಿ ನಾವು ಜೀವಿತದಲ್ಲಿ ದೇವರ ವಾಕ್ಯವನ್ನು ದೀಪದಂತೆ ನಮ್ಮ ಬಾಳಿಗೆ ಉಪಯೋಗಿಸಿಕೊಳ್ಳಣ’ ಎಂದು ಅವರು ಸಂದೇಶ ನೀಡಿದರು 

ದೇವರ ವಾಕ್ಯದ ಭಕ್ತಿ ಸಂಭ್ರಮದ (ವೆಸ್ಪ್‍ನ್ನು) ವಿಧಿಯಲ್ಲಿ ಕುಂದಾಪುರ ಇಗರ್ಜಿಯ ಹಾಗೂ ವಲಯ ಪ್ರಧಾನರಾದ ವಂ|ಅನಿಲ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಹೆಚ್ಚಿನ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲುಗೊಂಡರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಭೇದ ಭಾವ ಮರೆತು ಎಲ್ಲಾ ಧರ್ಮ ಭಾಂದವರು ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಭಾವೈಕತೆ ಮೆರೆದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here