Saturday 10th, May 2025
canara news

ಶ್ರೀ ರಜಕ ಸಂಘ ಮುಂಬಯಿ ಮಧ್ಯ ಪ್ರಾದೇಶಿಕ ಸಮಿತಿಯಿಂದ ವಿಕ್ರೋಲಿಯಲ್ಲಿ ಸಂಭ್ರಮಿಸಲ್ಪಟ್ಟ `ಸೆಂಟ್ರಲ್ ದ ರಜಕೋತ್ಸವ'

Published On : 29 Nov 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.29: ಶ್ರೀ ರಜಕ ಸಂಘ ಮುಂಬಯಿ ಇದರ ಮಧ್ಯ ಪ್ರಾದೇಶಿಕ ಸಮಿತಿಯು ಇಂದಿಲ್ಲಿ ಭಾನುವಾರ ಸಂಜೆ ವಿಕ್ರೋಲಿ ಪೂರ್ವದ ಕನ್ನಂವರ್ ನಗರ್ ಅಲ್ಲಿನ ಕಾಮ್ಗಾರ್ ಕಲ್ಯಾಣ್ ಸಭಾಗೃಹದಲ್ಲಿ ಸೆಂಟ್ರಲ್ ದ ರಜಕೋತ್ಸವ ಸಂಭ್ರಮಿಸಿದ್ದು, ಚಂದ್ರಶೇಖರ ಪಾಲೆತ್ತಾಡಿ ಮತ್ತು ಥಾಣೆ ಮಹಾನಗರ ಪಾಲಿಕೆಯ ಮಹಾಪೌರೆ (ಮೇಯರ್) ವಿೂನಾಕ್ಷಿ ಶಿಂಧೆ ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆಯನ್ನೀಡಿದರು.

ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ರಜಕೋತ್ಸವದಲ್ಲಿ ಮುಖ್ಯ ಅತಿಥಿüಯಾಗಿ ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಮತ್ತು ಗೌರವ ಅತಿಥಿüಗಳಾಗಿ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮಸುಂದರ್ ಶೆಟ್ಟಿ, ಕಾರ್ಯದರ್ಶಿ ಉದಯ ಎಲ್.ಶೆಟ್ಟಿ ಹಾಗೂ ಉದ್ಯಮಿ ಮನೀಷ್ ಸೇಥಿü ಉಪಸ್ಥಿತರಿದ್ದು ಶುಭಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ವಿೂನಾಕ್ಷಿ ಶಿಂಧೆ, ಚಂದ್ರಶೇಖರ ಪಾಲೆತ್ತಾಡಿ ಮತ್ತು ಕುಸುಮಾ ಚಂದ್ರಶೇಖರ ಪಾಲೆತ್ತಾಡಿ (ದಂಪತಿಯನ್ನು) ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮುಖ್ಯ ಪ್ರಾಯೋಜಕರುಗಳಾದ ಹರೀಶ್ ಸಾಲ್ಯಾನ್, ಪ್ರಭಾಕರ ಸಾಲ್ಯಾನ್, ದಿನೇಶ್ ಕುಂದರ್, ರಾಜು ಸಾಲ್ಯಾನ್ ಅವರನ್ನು ಫಲಕ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರುಗಳಾದ ಪಿ.ಎಂ ಸಾಲ್ಯಾನ್, ಎಲ್.ಕೆ ಕುಂದರ್, ಪಿ.ಕೃಷ್ಣ ಸೇರಿದಂತೆ ಸೇವೆ ನೀಡಿದ ಹಿರಿಯ ಸಂಘದ ಕಾರ್ಯಕರ್ತರಿಗೆ ಹಾಗೂ ನಿಧನ ಹೊಂದಿದ ಸದಸ್ಯರ ಕುಟುಂಬದವರಿಗೆ ಸನ್ಮಾನಿಸಲಾಯಿತು. ಮುಂಬಯಿ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಫಲಕ ನೀಡಿ ಶಾಲು ಹೊದಿಸಿ ಗೌರವಿಸಿದರು.

ವೇದಿಕೆಯಲ್ಲಿ ರಾಜು ಸಾಲ್ಯಾನ್, ಪ್ರಭಾಕರ ಸಾಲ್ಯಾನ್, ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷ ಸಂಜೀವ ಎಕ್ಕಾರ್, ಉಪಾಧ್ಯಕ್ಷ ಭಾಸ್ಕರ್ ಕುಂದರ್, ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್, ಯುವ ವಿಭಾಗದ ಅಧ್ಯಕ್ಷ ಮನೀಷ್ ಕುಂದರ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ.ಕುಂದರ್, ಮಧ್ಯ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷೆ ಕು| ಶ್ರೀನಿಧಿ ಸಿ.ಸಾಲ್ಯಾನ್ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರು ಮತ್ತು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಯುವ ವಿಭಾಗದ ಸದಸ್ಯರಿಂದ ಮುಂಬಯಿ ಕಾ ಏಕ್ ನಜ್ಹರ್ ಕಾರ್ಯಕ್ರಮ, ಪ್ರಭಾಕರ್ ಸಾಲ್ಯಾನ್ ರಚಿಸಿ ನಿರ್ದೇಶಿಸಿದ, ಸಹ ದಿಗ್ದರ್ಶಕಿ ದಿವ್ಯಾ ಪುತ್ರನ್, ನೃತ್ಯ ಸಂಯೋಜಕ ನೀಶಾ ಗುಜರನ್, ಸೌಂಡ್ ಮತ್ತು ಲೈಟಿಂಗ್ ಸ್ಪರ್ಷ್ ಸಾಲ್ಯಾನ್ ಅವರ ಸಹಯೋಗದೊಂದಿಗೆ ಏರೆಗ್ ಏರ್ಲಾ ಇಜ್ಜಿ ತುಳು ಸಾಮಾಜಿಕ ನಾಟಕ ಇತ್ಯಾದಿಗಳು ಪ್ರದರ್ಶಿಸಲ್ಪಟ್ಟವು.

ಕಾರ್ಯಕ್ರಮದಲ್ಲಿ ರಜಕ ಸಂಘ ಮುಂಬಯಿ ಇದರ ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಸಿಎ| ವಿಜಯ್ ಕುಂದರ್, ಸುಭಾಷ್ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತಾ ಡಿ.ಸಾಲ್ಯಾನ್, ಶಶಾಂಕ್ ಸಾಲ್ಯಾನ್, ಭಾಸ್ಕರ್ ಕುಂದರ್, ಪ್ರಕಾಶ್ ಕೆ.ಗುಜರನ್, ಮಧ್ಯ ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಮಹಿಳಾಧ್ಯಕ್ಷೆÀ ಶಾಂತಿ ಆರ್.ಸಾಲ್ಯಾನ್, ಮತ್ತಿತರ ಪದಾಧಿಕಾರಿಗಳು, ನೂರಾರು ಸದಸ್ಯರು ಸೇರಿದಂತೆ ಅಪಾರ ರಜಕ ಬಂಧುಗಳು ಪಾಲ್ಗೊಂಡಿದ್ದರು.

ಪೂಜಾ ಸಾಲ್ಯಾನ್ ಸ್ವಾಗತಿಸಿದರು. ಮಧ್ಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರತ್ನಾಕರ ಎಸ್.ಕುಂದರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಸರೋಜಿನಿ ಕುಂದರ್, ಶೀಲಾ ಸಾಲ್ಯಾನ್, ಜ್ಯೋತಿ ಸಾಲ್ಯಾನ್, ಶಾಂತಿ ಸಾಲ್ಯಾನ್ ಮತ್ತು ಶ್ರೀಷ್ ಸಾಲ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಮಲ್ಲಿಕಾ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಪುತ್ರನ್ ವಂದನಾರ್ಪಣೆಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here