Sunday 11th, May 2025
canara news

ಕುಂದಾಪುರ ಕಥೊಲಿಕ್ ಸಭಾದಿಂದ ಸಾಂಸ್ಕ್ರತಿಕ ಸಂಜೆ - ಲೇಖಕರಿಗೆ ಸನ್ಮಾನ

Published On : 02 Dec 2017   |  Reported By : Bernard J Costa


ಕುಂದಾಪುರ, ಡಿ.1: ಕುಂದಾಪುರ ಕಥೊಲಿಕ್ ಸಭಾ ಘಟಕದ ನೇತ್ರತ್ವದಲ್ಲಿ ಕುಂದಾಪುರ ರೋಜರಿ ಮಾತೆಯ ವಾರ್ಷಿಕ ಮಹಾ ಹಬ್ಬದಂದು ಚರ್ಚಿನ ಸಹಯೋಗದಲ್ಲಿ ಸಾಂಸ್ಕ್ರತಿಕ ಸಂಜೆ ಎರ್ಪಡಿಸಿದ್ದರು. ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ವಲಯದ ಕಥೊಲಿಕ್ ಸಭಾದ ನೀಯೊಜಿತ ಅಧ್ಯಕ್ಷ ಮೈಕಲ್ ಪಿಂಟೊ ಆಗಮಿಸಿ ಭಾಷಣ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿ ಕಥೊಲಿಕ್ ಸಭೆಯ ಕಾರ್ಯ ವೈಖರಿಯ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಅಧ್ಯಕ್ಷತೆಯನ್ನು ಇಗರ್ಜಿಯ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ವಹಿಸಿ ಕಥೊಲಿಕ್ ಸಭಾದ ಕಾರ್ಯಕ್ರಮಗಳನ್ನು ಶ್ಲಾಗಿಸಿ ಸಾಂಸ್ಕ್ರತಿಕ ಸಂಜೆಗೆ ಶುಭ ಕೋರಿ ಆಶಿರ್ವಚನವನ್ನು ನೀಡಿದರು.

 

 

ಕೊಂಕಣಿ ಕನ್ನಡ ಸಾಹಿತಿ ಬರ್ನಾಡ್ ಡಿಕೋಸ್ತಾ ಇವರನ್ನು ಕಥೊಲಿಕ್ ಸಭಾ ಮತ್ತು ಇಗರ್ಜಿಯ ಪರವಾಗಿ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಮತ್ತು ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಸನ್ಮಾನಿಸಿದರು. ಬಳಿಕ ಅವರು ರಚಿಸಿ ನಿರ್ದೇಶಿಸಿದ ‘ಹಾಂವ್ ಆಂಕ್ವಾರ್‍ಗೊ ಸಾಯ್ಬಿಣಿ’ ನೂತನ ನಾಟಕವನ್ನುವನ್ನು ಕಲಾವಿದರು ಪ್ರದರ್ಶನ ನೀಡಿದರು. ಈ ನಾಟಕದ ಬಗ್ಗೆ ಎಲ್ಲರೂ ಪ್ರಶಂಸೆ ನೀಡಿದ್ದು ವೀಶೆಸವಾಗಿತ್ತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ವಾಯ್ಲೆಟ್ ತಾವ್ರೊ, ಸಂತ ಜೋಸೆಫ್ ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ಕೀರ್ತನ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ, ಕಥೊಲಿಕ ಸಭಾದ ಕಾರ್ಯದರ್ಶಿ ಉಪಸ್ಥಿತರಿದ್ದರು. ಪಾಲನ ಮಂಡಳಿ ಉಪಾಧ್ಯಕ್ಷ, ಕಥೊಲಿಕ್ ಸಭಾ ಕುಂದಾಪುರ ಘಟಕ ಹಾಗೂ ವಲಯದ ಅಧ್ಯಕ್ಷ ಜೇಕಬ್ ಡಿಸೋಜಾ ಸ್ವಾಗತಿಸಿದರು. ಕಥೊಲಿಕ್ ಸಭೆಯ ನೀಯೊಜಿತೆ ಶೈಲಾ ಡಿಆಲ್ಮೇಡಾ ವಂದಿಸಿದರು. ಶಾಂಇತ್ ಬಾರೆಟ್ಟೊ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here