Wednesday 6th, August 2025
canara news

ಡಿಸೆಂಬರ್ 12 ರಂದು 'ಸಾಮರಸ್ಯದ ನಡಿಗೆ'- ಸಚಿವ ರಮಾನಾಥ ರೈ

Published On : 03 Dec 2017   |  Reported By : Canaranews network


ಮಂಗಳೂರು:ದ.ಕ. ಜಿಲ್ಲೆಯಲ್ಲಿ ಶಾಂತಿ ,ಸೌಹಾರ್ದತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಡಿಸೆಂಬರ್ 12 ರಂದು ಮಂಗಳೂರು ಹೊರವಲಯದ ಫರಂಗಿಪೇಟೆಯಿಂದ ಮಾಣಿಯವರೆಗೆ 'ಸಾಮರಸ್ಯದ ನಡಿಗೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.ಮಂಗಳೂರಿನ ಮಿನಿ ಟೌನ್ ಹಾಲ್ ಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಮರಸ್ಯ ಉದ್ದೇಶದ ಈ ರ್ಯಾಲಿ ಫರಂಗಿಪೇಟೆಯಿಂದ ಆರಂಭಿಸಿ ಮಾಣಿಯಲ್ಲಿ ಕೊನೆಗೊಳ್ಳಲಿದೆ ಬಳಿಕ ಅಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯೂ ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ , ಆದರೆ ಕೆಲವು ಕೋಮುವಾದಿಗಳು ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸಾಮರಸ್ಯಜಿಲ್ಲೆ ಎಂಬ ಖ್ಯಾತಿಗೆ ದಕ್ಕೆ ತರುವ ಕೆಲಸ ನಡಿತಾ ಇದೆ ಎಂದರು . ಈ ಸಭೆಯಲ್ಲಿ ರಾಜ್ಯದ ಕೆಲವು ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದ್ದು , ಕೋಮುವಾದಿ ಸಂಘಟನೆಗಳನ್ನು ಸಾಮರಸ್ಯದ ನಡಿಗೆಯಿಂದ ಹೊರಗಿಡಲಾಗಿದೆ ಎಂದರು. ಇದೇ ವೇಳೆ ಸಾಮರಸ್ಯದ ನಡಿಗೆ ಕಾರ್ಯಕ್ರಮದ ಪೋಸ್ಟರ್ ಮತ್ತು ಲಾಂಛನ ಬಿಡುಗಡೆಗೊಳಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here