Sunday 11th, May 2025
canara news

ಬಸ್ ಗಳ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು , ಹಲವರು ಗಂಭೀರ

Published On : 06 Dec 2017   |  Reported By : canaranews network


ಮಂಗಳೂರು:ಬಸ್ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು 10ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ಹಾಸನದ ಆಲೂರು ತಾಲೂಕಿನ ಹೆದ್ದುರ್ಗೆ ಗ್ರಾಮದಲ್ಲಿ ಡಿ. 5 ರ ಮಂಗಳವಾರ ಸುಮಾರು ನಸುಕಿನ ಜಾವ 3.30ಕ್ಕೆ ನಡೆದಿದೆ.ಫಾತಿಮಾ ಸಮೀರಾ(27) , ಯಶೋದಾ ಮೃತಪಟ್ಟ ದುರ್ದೈವಿಗಳು. ಇವರಲ್ಲಿ ಚೆಂಗಳದ ಫಾತಿಮಾ ಸಮೀರಾ ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು.ಕೆಎಸ್ಆರ್ಟಿಸಿ ವೋಲ್ವೊ ಬಸ್ ಹಾಗೂ ದುರ್ಗಾಂಬ ಬಸ್ಗಳ ನಡುವೆ ಈ ಅಪಘಾತ ಸಂಭವಿಸಿದೆ.

ಗ್ರಾಮ ಪಂಚಾಯತ್ ಸದಸ್ಯರಾದ ಚೆಂಗಳದ ಅಬ್ದುಲ್ ಸಲಾಂ(57), ಕದ್ರಿಯ ವಿದ್ಯಾ (50) ಪುತ್ತೂರು ಕಬಕದ ರವಿಕುಮಾರ್ (33) , ಬೊಮ್ಮಬೆಟ್ಟದ ನವೀನ್ ಪ್ರಕಾಶ್ (35), ಅತ್ತಾವರದ ಶಾನನ್(21). ಬೆಂಗಳೂರು ಮಲ್ಲೇಶ್ವರದ ನಾರಯಣ (40) ಇವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆಲೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here