Friday 15th, December 2017
canara news

ಮಂಗಳೂರಿನಲ್ಲಿ ಕೆಪಿಜೆಪಿ ಪಕ್ಷದ ಪ್ರಚಾರಕ್ಕಿಳಿದ ಉಪೇಂದ್ರ

Published On : 06 Dec 2017   |  Reported By : canaranews network   |  Pic On: Photo credit : The Hindu


ಮಂಗಳೂರು: "ರಾಜ್ಯದಲ್ಲಿ ಜನರ ಮಧ್ಯೆ ಕೆಲಸ ಮಾಡುವ 224 ಜನ ಸಿಎಂ ನನಗೆ ಬೇಕಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಂತೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು" ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸಂಸ್ಥಾಪಕ- ನಟ ಉಪೇಂದ್ರ ತಿಳಿಸಿದರು.ಕೆಪಿಜೆಪಿಯ ಪ್ರಚಾರದ ಸಲುವಾಗಿ ಮಂಗಳೂರಿಗೆ ಭೇಟಿ ನೀಡಿದ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಿರುವ ರಾಜಕೀಯ ವ್ಯವಸ್ಥೆಯ ವ್ಯತಿರಿಕ್ತವಾಗಿ ಕೆಪಿಜೆಪಿಯನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು.

ಒಬ್ಬ ಕಾರ್ಮಿಕನಾಗಿ ಜನರ ಮುಂದೆ ಹೋಗುತ್ತಿದ್ದೇನೆ. ನನ್ನ ಯೋಚನೆಗಳನ್ನು ಮುಂದಿಟ್ಟು ಅವರೊಂದಿಗೆ ಮಾತನಾಡುತ್ತಿದ್ದೇನೆ. ಸಮಾಜದಲ್ಲಿನ ಪ್ರಜ್ಞಾವಂತರು ಪಕ್ಷಕ್ಕೆ ಬನ್ನಿ ಎಂದು ಅವರು ಕರೆ ನೀಡಿದರು.ಎಲ್ಲಿ ಸತ್ಯ ಇರುತ್ತದೋ ಅಲ್ಲಿ ಧರ್ಮ ಇರುತ್ತದೆ. ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ನಮ್ಮಲ್ಲಿ ಇಲ್ಲದಂತಾಗಿದೆ. ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಉಚಿತವಾಗಿ ಸಿಕ್ಕಿದರೆ ಯಾರೂ ಭೃಷ್ಟಾಚಾರಿಗಳು ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಈ ದೇಶದಲ್ಲಿ ಶೇ 80ರಷ್ಟು ಒಳ್ಳೆಯವರಿದ್ದಾರೆ. ಆ 80ರಷ್ಟು ಜನರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ ಎಂದು ಹೇಳಿದರು.

 
More News

ಸಿ.ವಿ ಶೆಟ್ಟಿ  ನಿಧನ
ಸಿ.ವಿ ಶೆಟ್ಟಿ ನಿಧನ
ಬೃಹನ್ಮುಂಬಯಿಗೆ ಚಿತ್ತೈಸಿದ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ  ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ
ಬೃಹನ್ಮುಂಬಯಿಗೆ ಚಿತ್ತೈಸಿದ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ
ನಮ್ಮ ಗ್ರಾಮ ನಮ್ಮ ಮಕ್ಕಳು ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮಾಹಿತಿ ಶಿಬಿರ-2017
ನಮ್ಮ ಗ್ರಾಮ ನಮ್ಮ ಮಕ್ಕಳು ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮಾಹಿತಿ ಶಿಬಿರ-2017

Comment Here