Thursday 18th, April 2024
canara news

ಕನ್ನಡ ಮಾಧ್ಯಮ ಹಳೆ ವಿದ್ಯಾಥಿರ್s ಸಂಘ ಮುಂಬಯಿ ವತಿಯಿಂದ ಜ.28: ಮುಲುಂಡ್ ಪಶ್ಚಿಮದಲ್ಲಿ ಕನ್ನಡ ಕಬಡ್ಡಿ ಲೀಗ್ ಸ್ಪರ್ಧೆ

Published On : 07 Dec 2017   |  Reported By : Rons Bantwal


ಮುಂಬಯಿ, ಡಿ.06: ಕನ್ನಡ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಆಗಸ್ಟ್ 2016ರಲ್ಲಿ ಸ್ಥಾಪನೆಗೊಂಡ ಕನ್ನಡ ಮಾಧ್ಯಮ ಹಳೆ ವಿದ್ಯಾಥಿರ್s ಸಂಘ (ಕೆಎಂಇಎಸ್‍ಎ) ಮುಂಬಯಿಯು ಸಂಸ್ಥೆಯು ಉದ್ಯಮಿ ಸುರೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಮತ್ತು ರಮೇಶ್ ಹರಿಯನ್ ಇವರ ಸಹಯೋಗದೊಂದಿಗೆ ಇದೇ ಬರುವ 28 ಜನವರಿ 2018 ರವಿವಾರ ಕನ್ನಡ ಶಾಲೆಯ ಮಕ್ಕಳಿಗಾಗಿ ಹಾಗೂ ಕನ್ನಡ ಸಂಘ ಸಂಸ್ಥೆಗಳ ತಂಡಗಳಿಗಾಗಿ ಕಬಡ್ಡಿ ಸ್ಪರ್ಧೆಯನ್ನು 2018ನೇ ಜನವರಿ 28ನೇ ಭಾನುವಾರ ಪ್ರಿಯದರ್ಶಿನಿ ಇಂದಿರಾ ಗಾಂಧಿ ಬ್ಯಾಡ್ಮಿಂಟನ್ ಕೋರ್ಟ್, ಕಾಳಿದಾಸ ನಾಟ್ಯಗೃಹ, ಮುಲುಂಡ್ ಪಶ್ಚಿಮ ಇಲ್ಲಿ ಏರ್ಪಡಿಸಿದೆ.

 

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುಂಬಯಿ ಕನ್ನಡ ಶಾಲಾ (17ರ ಒಳ ವಿಭಾಗದ) ತಂಡಗಳಿಗೆ ಧರ್ಮಾರ್ಥ ಪ್ರವೇಶ ಕಲ್ಪಿಸಲಾಗಿದೆ. ಆದರೆ ಕನ್ನಡ ಸಂಘ-ಸಂಸ್ಥೆಗಳ ತಂಡಗಳು 15,000 ರೂಪಾಯಿ ಸ್ಪರ್ಧಾ ಶುಲ್ಕ ಭರಿಸ ಬೇಕಾಗುವುದು. ಈ ಸಂಗ್ರಹಿಸಿದ ಮೊತ್ತವನ್ನು ಕನ್ನಡ ವಿದ್ಯಾಥಿರ್sಗಳ ವಿಧ್ಯಾಭ್ಯಾಸ ಹಾಗೂ ಅವರ ಸರ್ವಾಂಗೀಣ ವಿಕಾಸಕ್ಕಾಗಿ ವಿನಿಯೋಗಿಸಲಾಗುವುದು.

ಮಹಿಳಾ ಕಬಡ್ಡಿ ಸ್ಪರ್ಧೆಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಸ್ನೇಹಭರಿತ ಮಹಿಳಾ ಸ್ಪರ್ಧೆಯೊಂದಿಗೆ ಬೆಳಿಗ್ಗೆ 7.00 ಗಂಟೆಯಿಂದ ಕಬಡ್ಡಿ ಲೀಗ್ 2018 ಪ್ರಾರಂಭಗೊಳಿಸಲಾಗುವುದು. ನಂತರ ಬೆಳಿಗ್ಗೆ 8.00 ಗಂಟೆಯಿಂದ ಪೂರ್ವಾಹ್ನ 11.00 ಗಂಟೆ ವರೆಗೆ ಕನ್ನಡ ಶಾಲಾ ಮಕ್ಕಳ ಕಬಡ್ಡಿ ಸ್ಪರ್ಧೆ ಹಾಗೂ ಪೂರ್ವಾಹ್ನ 11.00 ಗಂಟೆಯಿಂದ ಸಂಜೆ 3.00 ಗಂಟೆ ತನಕ ಕನ್ನಡ ಸಂಘ ಸಂಸ್ಥೆಗಳ ತಂಡಗಳ ಕಬಡ್ಡಿ ಸ್ಪರ್ಧೆ ನಡೆಯಲಿರುವುದು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಪ್ಛಿಸುವ ತಂಡಗಳು ತಮ್ಮ ಹೆಸರನ್ನು ಇದೇ ಡಿ.31 ಕೊನೆಯ ದಿನಾಂಕದ ಒಳಗಾಗಿ ನೊಂದಾಯಿಸ ತಕ್ಕದ್ದು. ವಿವರಗಳಿಗಾಗಿ ವೈಬ್‍ಸೈಟ್‍ನಲ್ಲಿ ಮಾಹಿತಿ ಪಡೆಯ ಬಹುದು. Websiಣe: ತಿತಿತಿ.ಞmesಚಿm.iಟಿ ಹೆಚ್ಚಿನ ಮಾಹಿತಿಗಾಗಿ ದೀಪಕ್ ಶೆಟ್ಟಿ (9969044871), ಲಕ್ಷ್ಮಣ್ ಶಹಾಪುರ್ (9870157631), ಮಧುಕರ್ ದೇವಾಡಿಗ (9819700663), ದಿಲಿಪ್ ಶೆಟ್ಟಿ (9821356580) ಇವರನ್ನು ಸಂಪರ್ಕಿಸಬಹುದು.

ಸಂಸ್ಥೆಯ ಗೌರವ ಅಧ್ಯಕ್ಷ ಸುರೇಶ್ ನಾರಾಯಣ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ರಾಮಚಂದ್ರ ಶಹಾಪುರ್, ಗೌರವ ಕೋಶಾಧಿಕಾರಿ ಮಹೇಶ್ ಜಯಕರ ಶೆಟ್ಟಿ ಮತ್ತಿತರ ಪದಾಧಿಕಾರಿಗಳ ಮುಂದಾಳುತ್ವದಲ್ಲಿ ಕನ್ನಡ ಮಕ್ಕಳು ಕಲಿಯುವ ಪಾಠ... ಆಡುವ ಬನ್ನಿ ಕಬಡ್ಡಿ ಆಟ... ಧ್ಯೇಯನ್ನಿರಿಸಿ ನಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂಪಾಯಿ 5,001, ನಗದು ಮತ್ತು ಟ್ರೋಫಿ, ದ್ವಿತೀಯ ರೂಪಾಯಿ 3,001, ನಗದು ಮತ್ತು ಟ್ರೋಫಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಆಟಗಾರನಿಗೆ ವಿಶೇಷವಾಗಿ ಗೌರವಿಸಲಾಗುವುದು

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here