Sunday 11th, May 2025
canara news

ಟ್ರ್ಯಾಕ್ಟರಿಗೆ ಬಸ್ ಡಿಕ್ಕಿ : ಚಾಲಕ ಪ್ರಾಣಪಾಯದಿಂದ ಪಾರು

Published On : 07 Dec 2017   |  Reported By : Canaranews network


ಮಂಗಳೂರು: ಬಸ್ ಹಾಗೂ ಟ್ರ್ಯಾಕ್ಟರ್ ನಡುವಿನ ಅಪಘಾತದಲ್ಲಿ ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಪಾಯದಿಂದ ಪಾರಾದ ಘಟನೆ ಮಂಗಳೂರು ಹೊರವಲಯದ ಬೊಂದೆಲ್ ಚರ್ಚ್ ಮುಂಭಾಗ ರ ಗುರುವಾರ ಬೆಳಿಗ್ಗೆ ನಡೆದಿದೆ.

ಪದವಿನಂಗಡಿಯಿಂದ ಬಂದ ಟ್ರ್ಯಾಕ್ಟರ್ ಪಚ್ಚನಾಡಿ ಕಡೆಗೆ ಹೋಗಲು ತಿರುವು ತೆಗೆದುಕೊಳ್ಳುತಿದ್ದಂತೆ ಬೊಂದೇಲಿನಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಚಾಲಕ ಶಿವಾನಂದ(30) ಸಣ್ಣಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆ.

ಗಾಯಗೊಂಡ ಶಿವಾನಂದ ಅವರನ್ನು ಖಾಸಗಿ ಆಸ್ಪತ್ರೆಗೆ ಖಲಿಸಲಾಗಿದೆ.ಅಪಘಾತದಿಂದಾಗಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ,ಕದ್ರಿ ಟ್ರಾಫಿಕ್ ಪೋಲಿಸರು ಸ್ಥಳಕ್ಕಾಗಮಿಸಿ ಅಪಘಾತಕ್ಕೊಳಗಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here