Sunday 11th, May 2025
canara news

ಅರುಣೋದಯ ಕಲಾನಿಕೇತನದ 59ನೇ ವಾರ್ಷಿಕೋತ್ಸವ ಸಮಾರಂಭ

Published On : 08 Dec 2017   |  Reported By : Ronida Mumbai


(ಚಿತ್ರ/ವರದಿ: ರೊನಿಡಾ ಮುಂಬಯಿ)

ಮುಂಬಯಿ, ಡಿ.08: ಮಹಾನಗರ ಮುಂಬಯಿ ಅಲ್ಲಿನ ಪ್ರತಿಷ್ಠಿತ ಕಲಾ ಸಂಸ್ಥೆ ಅರುಣೋದಯ ಕಲಾನಿಕೇತನ ಮುಂಬಯಿ ಇದರ 59ನೇ ವಾರ್ಷಿಕೋತ್ಸವ ಸಮಾರಂಭ ಇಂದಿಲ್ಲಿ ಶುಕ್ರವಾರ ದಾದರ್ ಪಶ್ಚಿಮದ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲ್ಪಟ್ಟಿತು.

ಸಂಸ್ಥೆಯ ನಿರ್ದೇಶಕಿ ನೃತ್ಯಗುರು ಡಾ| ಮಿನಾಕ್ಷೀ ರಾಜು ಶ್ರೀಯನ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಉದ್ಯಮಿ ನಾಗರಾಜ ಪಡುಕೋಣೆ ಹಾಗೂ ಆಗಮಿಸಿದರು. ಪ್ರಧಾನ ಅಭ್ಯಾಗತರುಗಳಾಗಿ ಮುಂಬಯಿ ಉಚ್ಛ ನ್ಯಾಯಾಲಯದ ನ್ಯಾಯಧೀಶ ಸೆಲ್ವ ಕುಮಾರ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಸಂಸ್ಥೆಯ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಸಮಾಜ ಸೇವಕಿ ಯಶೋದಾ ಎನ್.ಪೂಜಾರಿ, ಸಮಾಜ ಸೇವಕರಾದ ಶ್ರೀನಿವಾಸ ಸಾಫಲ್ಯ, ಗೋವಿಂದ ಬಾಬು ಪೂಜಾರಿ, ಸಂಜೀವ ಸಾಲ್ಯಾನ್, ಸುರೇಶ್ ಆರ್.ಕಾಂಚನ್, ರಾಜು ಶ್ರೀಯಾನ್ ಉಪಸ್ಥಿತರಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಾಧಕ ಅನಿವಾಸಿ ಭಾರತೀಯ ಸಮಾಜ ಸೇವಕ ಲೀಲಾಧರ ಬೈಕಂಪಾಡಿ ಅವರನ್ನು ಅತಿಥಿsಗಳು ಸನ್ಮಾನಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ವಿವಿಧ ಶಾಖೆಯ ವಿದ್ಯಾಥಿರ್sಗಳು ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ನಿರ್ದೇಶನದಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ ಸಂಸ್ಕಾರಗಳ ನೃತ್ಯ ವೈವಿಧ್ಯ, ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here