Sunday 11th, May 2025
canara news

ಭವಾನಿ ಫೌಂಡೇಶನ್‍ನ ಸಂಸ್ಥಾಪಕ ಕುಸುಮೋದರ ಡಿ.ಶೆಟ್ಟಿ ಮತ್ತಿತರ ಸಾಧಕರಿಗೆ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Published On : 09 Dec 2017   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಡಿ.09: ಕರ್ನಾಟಕದಾದ್ಯಂತ ಇರುವ ಸುದ್ದಿ ಮಾಧ್ಯಮಗಳಾದ ದಿನಪತ್ರಿಕೆಗಳು, ಪಾಕ್ಷಿಕ, ಮಾಸಿಕ, ಟಿ.ವಿ ಚಾನೆಲ್, ಆಕಾಶವಾಣಿ, ಆನ್‍ಲೈನ್ ಚಾನೆಲ್ಸ್‍ಗಳ ಸಂಘಟನಾ ಸಂಸ್ಥೆ ದಿ.ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯು ಪತ್ರಿಕೋದ್ಯಮದ ಇತಿಹಾಸದಲ್ಲೇ ಇದೇ ಪ್ರಪ್ರಥಮವಾಗಿ 62ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಕಳೆದ ಭಾನುವಾರ (ನ.30) ಬೆಂಗಳೂರು ಕುಮಾರ ಸ್ವಾಮಿ ಬಡಾವಣೆಯಲ್ಲಿರುವ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜು ಸಭಾಗೃಹದಲ್ಲಿ ಆಯೋಜಿಸಿತ್ತು.

ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ವರ್ಣರಂಜಿತ ಸಮಾರಂಭದಲ್ಲಿ ಬೆಂಗಳೂರು ದೂರದರ್ಶನದ ನಿಕಟಪೂರ್ವ ಮಹಾ ನಿರ್ದೇಶಕ ಡಾ| ಮಹೇಶ್ ಜೋಶಿ, ಮಾಜಿ ಕ್ರಿಕೆಟ್ ಪಟು ಗುಂಡಪ್ಪ ವಿಶ್ವನಾಥ್, ರಾಜ್ಯ ಮಹಿಳಾ ಅಯೋಗದ ನಾಗಲಕ್ಷ್ಮೀ ಬಾಯಿ, ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರೆ ಮುಖ್ಯ ಅತಿಥಿsಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿರುವ ಹೊರನಾಡ ಮುಂಬಯಿಯ ಸಾಧಕ, ಮುಂಬಯಿ ಉದ್ಯಮಿ, ಸಮಾಜ ಸೇವಕ, ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ ಇವರಿಗೆ `ಪತ್ರಿಕೋದ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2017' ಪ್ರದಾನಿ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ಮರಣಿಕೆ, ಸ್ವರ್ಣಪದಕ ಪ್ರದಾನಿಸಿ ಸನ್ಮಾನಿಸಿದರು.
ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಡಿಸಿಪಿ ರೂಪಾ (ಐಪಿಎಸ್), ಮಾಜಿ ಕ್ರಿಕೆಟಿಗ ಜಿ.ಆರ್ ವಿಶ್ವನಾಥ್, ನಟಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಸಾಧು ಕೋಕಿಲ, ರಚಿತಾ ರಾಮು ಮತ್ತಿತರ ಚಿತ್ರರಂಗದ ಗಣ್ಯರಿಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here