Sunday 11th, May 2025
canara news

ಕುಸುಮೋದರ ಡಿ.ಶೆಟ್ಟಿ ಅವರಿಗೆ ಮಾತೃ ಸಂಸ್ಥೆಯ ಅಭಿನಂದನಾ ಗೌರವ

Published On : 10 Dec 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.09: ಭವಾನಿ ಫೌಂಡೇಶನ್ (ರಿ.) ಮುಂಬಯಿ ಸಂಸ್ಥೆಯ ವಿಶೇಷ ಸಭೆಯು ಕಳೆದ ಶುಕ್ರವಾರ ಸಂಜೆ ನವಿಮುಂಬಯಿ ಅಲ್ಲಿನ ಸಿಬಿಡಿ ಬೇಲಾಪುರದ ವಿ.ಟೈಮ್‍ಸ್ಕ್ವೇರ್‍ನ ಭವಾನಿ ಕಛೇರಿಯ ಸಮಾಲೋಚ ನಾ ಸಭಾಗೃಹದಲ್ಲಿ ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ-ಕಾರ್ಯಾಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ (ಕೆ.ಡಿ ಶೆಟ್ಟಿ) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

ದಿ.ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯ `ಪತ್ರಿಕೋದ್ಯಮ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2017'ಗೆ ಭಾಜನರಾದ ಕುಸುಮೋದÀರ ಡಿ.ಶೆಟ್ಟಿ ಅವರಿಗೆ ಸಭೆಯಲ್ಲಿ ಮಾತೃ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ಫೌಂಡೇಶನ್‍ನ ವಿಶ್ವಸ್ಥ ಸದಸ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಅವರು ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು.

ಕೆ.ಡಿ ಶೆಟ್ಟಿ ಮಾತನಾಡಿ, ಇದು ಭವಾನಿ ಫೌಂಡೇಶನ್ ಸಂಸ್ಥೆಗೆ ಸಂದ ಗೌರವ. ಈ ಮಾನ್ಯತೆ, ಘನತೆಗೆ ತಮ್ಮೆಲ್ಲರ ಶ್ರಮವಿದೆ. ಸದಾ ಸಮಾಜ ಚಿಂತಕರಾಗಿ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಈ ಸಂಸ್ಥೆ ಇನ್ನೂ ಅನೇಕನೇಕ ಸೇವೆಗಳಲ್ಲಿ ಸಕ್ರೀಯರಾಗುವ ಉದ್ದೇಶ ನಮ್ಮದಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಯ ಕಣ್ಣೀರೊರೆಸುವ ಕನಿಷ್ಠ ಸೇವೆಯಲ್ಲಾದರೂ ನಾವು ತೊಡಗಿಸಿ ಕೊಳ್ಳುವ ಅಗತ್ಯವಿದೆ. ಸಂಸ್ಥೆಯು ಮಾಸಿಕವಾಗಿ ಅನೇಕರಿಗೆ ಆಥಿರ್üಕ ನೆರವು ನೀಡುತ್ತಾ ಅವರ ಬಾಳಿಗೆ ಪ್ರೇರೆಪಿಸುತ್ತಿದೆ. ಭವಿಷ್ಯತ್ತಿನ ದಿನಗಳಲ್ಲಿ ಇನ್ನಷ್ಟು ಸೇವೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಎಲ್ಲರೂ ಮುಕ್ತ ಮನಸ್ಸಿನಿಂದ ಸಹಕರಿಸಬೇಕು. ಆವಾಗಲೇ ನಮ್ಮ ಸೇವೆ ಫಲಪ್ರದವಾಗುವುದು ಎಂದರು.

ಸಭೆಯಲ್ಲಿ ಭವಾನಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಂಡಿತ್ ನÀವೀನ್‍ಚಂದ್ರ ಆರ್.ಸನೀಲ್, ನವೀನ್ ಎಸ್.ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ, ಕರ್ನೂರು ಮೋಹನ್ ರೈ, ಚೈತಾಲಿ ಪೂಜಾರಿ, ಸುರೆ ಪವಾರ್, ಜಿಜೊ ಔಸೆಫ್, ಕರುಣಾಕರ ವಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಯಗಾಢ ಜಿಲ್ಲಾ ಪರಿಷದ್ ಪ್ರಾಥಮಿಕ ಶಾಲಾ(ರಾಜಿಪ) ಶಿಕ್ಷಕ ಶಿಕ್ಷಕ ತಸ್ಶೊಡೆ ಪರ್ಸುರಾಮ್ ಮತ್ತು ಶಿಕ್ಷಕ ಸಂಘದ ಅಧ್ಯಕ್ಷ ಶಶಿಕಾಂತ್ ಠಾಕ್ರೆ ಅವರೂ ಉಪಸ್ಥಿತರಿದ್ದು ಕೆ.ಡಿ ಶೆಟ್ಟಿ ಅವರಿಗೆ ಪುಷ್ಪಗುಪ್ಚವನ್ನಿತ್ತು ಶುಭಾರೈಸಿದರು.

ಫೌಂಡೇಶನ್‍ನ ಉಪಾಧ್ಯಕ್ಷ ಜೀಕ್ಷಿತ್ ಕೆ.ಶೆಟ್ಟಿ ಸ್ವಾಗತಿಸಿದರು. ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು ಪ್ರಶಸ್ತಿ ಬಗ್ಗೆ ತಿಳಿಸಿ ಅಭಿನಂದನಾ ನುಡಿಗಳನ್ನಾಡಿದರು. ಫೌಂಡೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಗತ ಸಭೆಯ ವರದಿ ತಿಳಿಸಿ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here