Sunday 11th, May 2025
canara news

ಕವಿಗೋಷ್ಠಿ ಸಾಹಿತ್ಯ ಸೌಹಾರ್ದತೆಯ ನೆಲೆಗಟ್ಟು: ಆಕೃತಿ ಭಟ್

Published On : 10 Dec 2017   |  Reported By : Rons Bantwal


ಮುಂಬಯಿ, ಡಿ.10: ಮಂಗಳೂರುನ ಹೃದಯವಾಹಿನಿ ಕರ್ನಾಟಕ ಮತ್ತು ಮಂಜುನಾಥ ಎಜ್ಯುಕೇಶನ್ ಟ್ರಸ್ಟ್ (ರಿ.) ಇವರ ಸಂಯುಕ್ತ ಆಶ್ರಯ ದಲ್ಲಿ ಕನ್ನಡ ಚಿಂತನ ಕಾರ್ಯಕ್ರಮದ ಅಂಗವಾಗಿ ಉರ್ವಸ್ಟೋರ್ ನ ಯುವವಾಹಿನಿ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಿತು. ಕರ್ನಾಟಕ ಬ್ಯಾಂಕ್ ನ ಅಧಿಕಾರಿ ಕವಯಿತ್ರಿ ಆಕೃತಿ ಐ.ಎಸ್ ಭಟ್ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಹಿತ್ಯ ಕೃಷಿ ಮತ್ತು ಒಡನಾಟ ಸೌಹಾರ್ದತೆಯ ವಾತವರಣಕ್ಕೆ ದಾರಿ ಮಾಡಿಕೊಡಬಲ್ಲದು ಎಂದರು.

ಕವಿಗಳಾದ ವಿ.ಕೆ ಕಡಬ, ಗಣೇಶ್ ಅದ್ಯಪಾಡಿ, ಫೆಲ್ಸಿ ಲೋಬೋ, ಎಂ.ಎನ್ ವೆಂಕಟೇಶ ಗಟ್ಟಿ, ಉಷಾ ಕಿನ್ನಿಗೋಳಿ ಸ್ವರಚಿತ ಕವನ ವಾಚಿಸಿದರು.

ಕಾರ್ಯಕ್ರಮದ ಗಣ್ಯರಾದ ಬೆಂಗಳೂರಿನ ಮೈಕ್ರಾನ್ ಇಲೆಕ್ಟ್ರಿಕಲ್ಸ್ ಯೋಜನಾ ನಿರ್ದೇಶಕ ಡಾ| ನಾಗರಾಜು ಮತ್ತು ಹೃದಯವಾಹಿನಿ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಕವಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here