Saturday 5th, July 2025
canara news

ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂಬಯಿಗೆ ಭೇಟಿ

Published On : 10 Dec 2017   |  Reported By : Rons Bantwal


ಬೃಹನ್ಮುಂಬಯಿಗೆ ಸ್ವಾಗತ ಕೋರಿದ ಮುಂಬಯಿ ಕನ್ನಡಾಭಿಮಾನಿಗಳು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.10: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಾಸಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಂದಿಲ್ಲಿ ಭಾನುವಾರ ರಾಷ್ಟ್ರದ ಆಥಿ೯ಕ ರಾಜಧಾನಿ ಬೃಹನ್ಮುಂಬಯಿಗೆ ಆಗಮಿಸಿದರು. ಸಿದ್ಧರಾಮಯ್ಯ ಅವರನ್ನು ಬೃಹನ್ಮುಂಬಯಿಯಲ್ಲಿನ ಕನ್ನಡಿಗ ಭಕ್ತಾಭಿಮಾನಿಗಳು ಆದರಪೂರ್ವಕ ಸ್ವಾಗತ ಕೋರಿದರು.

ಸಂಜೆ ಖಾಸಾಗಿ ವಿಮಾನ ಮೂಲಕ ಮುಂಬಯಿ ಸಾಂತಕ್ರೂಜ್‍ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಲೀನಾದ ಟರ್ಮಿನಲ್‍ಗೆ ಆಗಮಿಸಿದ ಸಿದ್ಧರಾಮಯ್ಯ ಅವರನ್ನು ಶನೀಶ್ವರ ದೇವಸ್ಥಾನ ಚೆಂಬೂರು ಇದರ ಧರ್ಮಾಧಿಕಾರಿ ಕೆ.ಎಂ ರಾಮಸ್ವಾಮಿ, ಕುರುಬರ ಸಂಘ ಮಹಾರಾಷ್ಟ್ರದ ಉಪಾಧ್ಯಕ್ಷ ಯೋಗೀಶ್ ಸಣ್ಣಪ್ಪ ಗೌಡ, ಎಂಎಸ್‍ಐಎಲ್ ಉನ್ನತಾಧಿಕಾರಿ ಪ್ರಶಾಂತ್ ಶೆಟ್ಟಿ, ಮಹಾರಾಷ್ಟ್ರದ ಪೆÇ್ರೀಟೊಕಾಲ್ ಅಧಿಕಾರಿ ಪ್ರಶಾಂತ್ ಡೋಕೆ, ಮತ್ತಿತರರ ಗಣ್ಯರು ಉಪಸ್ಥಿತರಿದ್ದು ಪುಷ್ಫಗೌರವವನ್ನಿತ್ತು ಮಹಾನಗರಕ್ಕೆ ಬರಮಾಡಿದರು.

ಮುಂಖ್ಯಮಂತ್ರಿಗಳ ಜೊತೆಗೆ ಕರ್ನಾಟಕದ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ, ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ, ಕೆ.ಆರ್ ಪೇಟೆ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಮಿರ್ಜಾ ಮಹ್ದಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಜಿತೇಂದ್ರ ಎಲ್.ಗೌಡ, ಎಲ್.ದೇವರಾಜ ಮಂಡ್ಯ, ಉಮೇಶ್ ರಾಜೇ ಗೌಡ, ನಂಜೇ ಶೆಟ್ಟಿ, ಸುರೇಶ್ ಕೆ. ರಾಮಸ್ವಾಮಿ ಚೆಂಬೂರು ಮತ್ತಿತರರು ಹಾಜರಿದ್ದರು.

ವಿಮಾನ ನಿಲ್ದಾಣನಿಂದ ನೇರವಾಗಿ ಉಪನಗರದ ಚೆಂಬೂರು ಇಲ್ಲಿನ ಜವಾಹರ್ ಮೈದಾನಕ್ಕೆ ತೆರಳಿದ ಮುಖ್ಯಮಂತ್ರಿಗಳು ಕುರುಬರ ಸಂಘ ಮಹಾರಾಷ್ಟ್ರ ಸಂಸ್ಥೆಯು ಆಯೋಜಿಸಿದ್ದ `ಕನಕ ಜಯಂತ್ಯೋತ್ಸವ' ಸಮಾರಂಭದಲ್ಲಿ ಪಾಲ್ಗೊಂಡು ರಾತ್ರಿಯೇ ಬೆಂಗಳೂರುಗೆ ನಿರ್ಗಮಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here