Sunday 11th, May 2025
canara news

ಮದುವೆಗೂ ಮುಂಚೆ ವಧು ಪರಾರಿ

Published On : 11 Dec 2017   |  Reported By : canaranews network


ಮಂಗಳೂರು: ಹಸೆಮಣೆಗೆ ಏರಬೇಕಾಗಿದ್ದ ನವವಧು ರಾತ್ರಿ ಮನೆಯಿಂದಲೇ ಪರಾರಿಯಾದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡಬಿದ್ರೆಯ ದರೆಗುಡ್ಡೆ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಯುವತಿ ನಾಪತ್ತೆಯಾಗಿರುವ ಈ ಪ್ರಕರಣ 'ಲವ್ ಜಿಹಾದ್' ಎಂದು ಆರೋಪಿಸಲಾಗಿದೆ.ದರೆಗುಡ್ಡೆ ನಿವಾಸಿ ಪ್ರಿಯಾಂಕ ಅವರಿಗೆ ಸೋಮವಾರ (ಡಿ.೧೧)ರಂದು ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಮುನ್ನವೇ ವಧು ಪರಾರಿಯಾಗಿದ್ದಾಳೆ.

ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್, ವಸ್ತ್ರದೊಂದಿಗೆ ಪ್ರಿಯಾಂಕ ಪರಾರಿಯಾಗಿದ್ದು ಮನೆ ಮಂದಿ ಕಂಗಾಲಾಗಿದ್ದಾರೆ.ಪ್ರಿಯಾಂಕ ಅವರ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದರು. ಈಗ ಮಗಳು ಏಕಾ ಏಕಿ ಮನೆಯಿಂದ ನಾಪತ್ತೆಯಾಗಿರುವುದರಿಂದ ತಾಯಿ ಕಂಗಾಲಾಗಿದ್ದಾರೆ.

ಇದೆಲ್ಲದರ ನಡುವೆ ಪ್ರಕರಣ ಲವ್ ಜಿಹಾದ್ ತಿರುವನ್ನು ಪಡೆಯುತ್ತಿದೆ.ಪ್ರಿಯಾಂಕ ಕೆಲ ತಿಂಗಳ ಹಿಂದೆಯಿಂದ ಮಂಗಳೂರು ಹೊರವಲಯದ ಫರಂಗಿಪೇಟೆಯ ಹೈದರ್ ಎಂಬವರೊಂದಿಗೆ ಸಂಪರ್ಕದಲ್ಲಿದ್ದಳು. ಹೀಗಾಗಿ ಆತನೊಂದಿಗೆ ಪರಾರಿಯಾಗಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ.ಮೂಡುಬಿದ್ರೆ ಠಾಣೆಯಲ್ಲಿ ಈ ಕುರಿತು ಪರಾರಿ ಪ್ರಕರಣ ದಾಖಲಾಗಿದೆ. ಹಿಂದು ಸಂಘಟನೆಗಳ ಮುಖಂಡರು ಪ್ರಿಯಾಂಕ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು ಪ್ರತಿಭಟನೆಗೆ ಸಿದ್ಧತೆ ನಡೆದಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here