ಜಾತಿಯಿಂದ ಶ್ರೀಮಂತಿಕೆ ಅಸಾಧ್ಯ : ಮುಖ್ಯಮಂತ್ರಿ ಸಿದ್ಧರಾಮಯ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.10: ರಾಜ್ಯ ಅಥವಾ ಹೊರದೇಶಕ್ಕೆ ಹೋದಾಗಗಲೇ ತಮ್ಮತನದ ಅಭಿಮಾನ ಸಹಜವಾಗಿ ಹೆಚ್ಚುತ್ತದೆ. ಸ್ವನಾಡಿನ ಅಭಿಲಾಷೆಯೂ ಜಾಸ್ತಿ ಆಗುತ್ತದೆ. ಹೊರನಾಡಿನ ಜನತೆಗೆ ಒಳನಾಡ ಅಭಿಮಾನ ಸ್ವಾಭಾವಿಕವಾದದ್ದು. ಆದರೆ ಕನ್ನಡಿಗರಿಗೆ ಕನ್ನಡ ಮೊದಲು ಆಮೇಲೆ ಜಾತಿಯ ವ್ಯಾಮೋಹ ಎನ್ನುವುದೇ ಅಭಿನಂದನೀಯ. ಕನಕದಾಸ, ಬಸವಣ್ಣ, ಅನೇಕ ಸಂತರು, ಮಹಾತ್ಮರು, ಕುವೆಂಪು, ಇವೆಲ್ಲರೂ ಸಮಾಜದಲ್ಲಿ ಬದಲಾವಣೆ ಬಯಸಿದ ಮಹಾತ್ಮರು. ಸಂತರೂ, ಶರಣರೂ, ದಾಸರು, ಸಾಧುಗಳು ಸಮಾಜದಲ್ಲಿ ಬದಲಾವಣೆ ಬಯಸಿದ ಚೇತನರು. ಇಂತಹ ಮಹಾತ್ಮತ ಮಾನವೀಯ ಮೌಲ್ಯಗಳಿಂದ ಜಾತಿ ವ್ಯವಸ್ಥೆಗೆ ಕಡಿವಾಣ ಸಾಧ್ಯವಾಗಿದೆ. ಇಲ್ಲವಾದರೆ ಯಾವುದೇ ಧರ್ಮ ನಿಂತ ನೀರಾಗುತ್ತಿತ್ತು. ಜಾತೀಕರಣದಲ್ಲಿ ಜಡತ್ವ ಇರುತ್ತಿತ್ತು ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಉಪನಗರದ ಚೆಂಬೂರು ಇಲ್ಲಿನ ಜವಾಹರ್ ಮೈದಾನದಲ್ಲಿ ಕುರುಬರ ಸಂಘ ಮಹಾರಾಷ್ಟ್ರ ಸಂಸ್ಥೆಯು ಆಯೋಜಿಸಿದ್ದ `530ನೇ ಕನಕ ಜಯಂತ್ಯೋತ್ಸವ' ಸಮಾರಂಭ ಉದ್ಘಾಟಿಸಿ ಸಿದ್ಧರಾಮಯ್ಯ ಮಾತನಾಡಿ ಮುಖ್ಯಮಂತ್ರಿ ಆದ ಮೇಲೆ ಇದೇ ಮೊದಲಬಾರಿ ಮುಂಬಯಿಗೆ ಬಂದೆ. ಈ ಹಿಂದೆ ಬರಬೇಕಾದ ಸಂದರ್ಭಗಳೂ ಒದಗಿಲ್ಲ. ಅವಕಾಶಕ್ಕಾಗಿ ಸಂಘಟಕರ ಮತ್ತು ಆಹ್ವಾನಿತ ಕನ್ನಡಿಗರ ಅಭಿಮಾನಕ್ಕೆ ವಂದಿಸುವೆ. ಸ್ವಾಥಿರ್üಗಳಿಂದ ಜಾತಿಗಳು ಸೃಷ್ಟಿಯಾಗಿದೆ. ಧರ್ಮಗಳು ಮೊದಲು ಮಾನವ ಧರ್ಮಗಳಾಗಬೇಕೇ ಹೊರತು ಜಾತೀಕರಣದಿಂದ ದ್ವೇಷಿಸುವಂತೆ ಆಗಬಾರದು. ಜಾತಿಯಿಂದ ಯಾವನದ್ದೂ ಶ್ರೀಮಂತಿಕೆ ಅಸಾಧ್ಯ. ನಮ್ಮ ಸದ್ಗುಣ ನಡುವಳಿಕೆಯಿಂದ ಮಾತ್ರ ಶ್ರೀಮಂತರಾಗಲು ಸಾಧ್ಯ. ಆದುದರಿಂದ ರಾಜಕಾರಣದಲ್ಲಿ ಧರ್ಮ ಮಾಡಬೇಕೆ ಹೊರತು ಧರ್ಮದಿಂದ ರಾಜಕಾರಣ ಸಲ್ಲದು ಎಂದೂ ಅಭಿಪ್ರಾಯ ವ್ಯಕ್ತ ಪಡಿಸಿದರು.
ದ್ವೇಷದ ಜಾತೀಕರಣ ತಿರಸ್ಕರಿಸಿದ್ದ ಕನಕದಾಸರು ಭಕ್ತಿ ವ್ಯವಸ್ಥೆಗೆ ಸೀಮಿತರಾಗಿರಲಿಲ್ಲ. ಆದುದರಿಂತ ಇಂತಹ ಮಹಾನುಭವಿಗಳ ಜೀವನ ನಡೆ ಮೈಗೂಡಿಸಿರಿ. ಇಂತಹ ಉತ್ಸವÀಗಳನ್ನು ವೈಭವೀಕರಿಸದಿರಿ. ಅವರ ವಿಚಾರಗಳನ್ನು ಅರಿತು ನಡೆಯುವುದೇ ಅವರಿಗೆ ಕೊಡುವ ಗೌರವ. 200 ವರ್ಷಗಳ ಇತಿಹಾಸದ ಕನ್ನಡ ಭಾಷೆಯನ್ನು ಮರೆಯದಿರಿ. ಮಹಾರಾಷ್ಟ್ರದಲ್ಲಿದ್ದರೂ ವ್ಯವಾಹರಿಕೆ, ಪ್ರಾದೇಶಿಕ ಭಾಷೆ ಜೊತೆಗೆ ಮಕ್ಕಳಲ್ಲಿ ಕನ್ನಡಾಭ್ಯಾಸವನ್ನು ರೂಢಿಸಿ. ಮಕ್ಕಳಿಗೆ ಮಾತೃಭಾಷಾ ಜೊತೆ ಸ್ವಸಂಸ್ಕೃತಿಯೊಂದಿಗೆ ಮುನ್ನಡೆಸಿ, ಕನ್ನಡವನ್ನು ಕೈಗೆತ್ತಿ ಕೊಂಡರೆ ಬದುಕು ಕಲ್ಪವೃಕ್ಷವಾಗುವುದು. ಬರುವ ಎಪ್ರಿಲ್-ಮೇನಲ್ಲಿ ಕರ್ನಾಟಕ ಚುನಾವಣೆÉ ಸಿದ್ಧವಾಗಿದೆ. ತಾವು ತಮ್ಮ ಆಯಾ ಊರಿಗೆ ಹೋಗಿ ನಮ್ಮನ್ನು ಆಶೀರ್ವಾದ ಮಾಡಿರಿ ಎಂದು ಪರೋಕ್ಷವಾಗಿ ಮತದಾನಕ್ಕೆ ಕರೆಯಿತ್ತರು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನಾವಿಸ್ ಅವರಿಗೆ ಪತ್ರ ಬರೆದು ಒಂದು ಸೈಟು ನೀಡುವರೇ ಕೋರುತ್ತಾ ಕುರುಬರ ಭವನ, ಕನ್ನಡ ಶಾಲೆಗೆ ಜಾಗ ಕೊಡಿಸುವ ಪ್ರಯತ್ನ ಮಾಡುವೆ. ಜಾಗ ಸಿಕ್ಕಿದ್ದರೇ ದುಡ್ಡೂ ಕೊಡ್ತಿನಿ. ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡೋಣ. ನಿಮ್ಮ ಪ್ರೀತಿ ಅಭಿಮಾನ ಆಶೀರ್ವಾದ ಸದಾ ಹಿಂಗೇ ಇರಲಿ ಎಂದು ಸಿದ್ಧರಾಮಯ್ಯ ತಿಳಿಸಿದರು.
ಕುರುಬರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಮಂಜೇ ಚಿಕ್ಕೇಗೌಡರ ಘನಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಕಾಮನಕೇರಿ ಅರಳಿಚಂಡಿ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ ಶ್ರೀ ಪರಮಾನಂದ ಮಹಾರಾಜ ಮತ್ತು ಶನೀಶ್ವರ ದೇವಸ್ಥಾನ ಚೆಂಬೂರು ಇದರ ಧರ್ಮಾಧಿಕಾರಿ ಕೆ.ಎಂ ರಾಮಸ್ವಾಮಿ ಉಪಸ್ಥಿತರಿದ್ದು ಅನುಗ್ರಹಿಸಿದರು. ಕರ್ನಾಟಕದ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಕನಕದಾಸರ ಭಾವಚಿತ್ರ ಅನಾವರಣ ಗೊಳಿಸಿದರು.
ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಶಾಸಕರುಗಳಾದ ಚೆಲುವರಾಯ ಸ್ವಾಮಿ, ಡಾ| ನಾರಾಯಣ ಆರ್. ಗೌಡ, ಸಿ.ಎನ್ ಬಾಲಕೃಷ್ಣ, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಕುರುಬರ ಸಮಾಜದ ಕೆ.ಆರ್ ರಮೇಶ ಚನ್ನರಾಯಪಟ್ಟಣ, ಸಂಗಮೇಶ ಪಿ.ಓಲೇಕಾರ ಬಾಗೇವಾಡಿ, ಒಕ್ಕಲಿಗರ ಸಮಾಜದ ಮುಂದಾಳುಗಳಾದ ರಾಮಚಂದ್ರ ಗೌಡ ಬೆಂಗಳೂರು, ರಂಗಪ್ಪ ಸಿ.ಗೌಡ, ಜಿತೇಂದ್ರ ಎಲ್.ಗೌಡ, ಮೋಹನಕುಮಾರ್ ಜೆ.ಗೌಡ, ವಿಕಾಸಕುಮಾರ್ ಗೌಡ, ಸಿದ್ದಣ್ಣ ಎಸ್.ಮೇಟಿ ಗೋವಾ, ಪುಟ್ಟ್ಟಸ್ವಾಮಿ ಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನಗೈದರು. ಸಂಘದ ಪದಾಧಿಕಾರಿಗಳು ಅತಿಥಿüಗಳಿಗೆ ಸ್ಮರಣಿಕೆ, ಪುಷ್ಫಗುಪ್ಚವನ್ನಿತ್ತು ಶಾಲು ಹೊದಿಸಿ ಸನ್ಮಾನಿಸಿದರು.
ಕುರುಬರ ಸಂಘ ಮಹಾರಾಷ್ಟ್ರದ ಉಪಾಧ್ಯಕ್ಷ ಯೋಗೀಶ್ ಸಣ್ಣಪ್ಪ ಗೌಡ, ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ, ಕೋಶಾಧಿಕಾರಿ ಉಚ್ಚೇಗೌಡ ನಂಜಪ್ಪ ಗೌಡ, ಜೊತೆ ಕಾರ್ಯದರ್ಶಿ ಶಿವೇ ಪುಟ್ಟೇ ಗೌಡ, ಜೊತೆ ಕೋಶಾಧಿಕಾರಿ ಗಂಗಾಧರ ಕಾಳೇ ಗೌಡ, ಸಲಹೆಗಾರ ರವಿ ರಾಜು ಗೌಡ ವೇದಿಕೆಯಲ್ಲಿ ಆಸೀನರಾಗಿದ್ದರು.
ಕರ್ನಾಟಕದ ಪಕ್ಕದ ಸುಮಾರು ಐದುರಾಜ್ಯಗಳಲ್ಲೂ ನಮ್ಮವರು ಇದ್ದರೂ ಮಹಾರಾಷ್ಟ್ರದಲ್ಲಿ ನೆಲೆಯಾಗಿರುವ ನಮ್ಮವರು ಸಂಘಟಿಸಿರುವ ಈ ಅಭೂತಪೂರ್ವ ಸುಂದರ ಕಾರ್ಯಕ್ರಮ ಪ್ರಶಂಸನೀಯ. ಈ ಮೂಲಕ ಮುಖ್ಯಮಂತ್ರಿಗಳ ಮತ್ತು ನಮ್ಮೆಲ್ಲರ ಮನ ಪ್ರಸನ್ನವಾಗಿದೆ. ಆದುದರಿಂದ ಸಮಾಜದ ಮುಖಂಡರ ಶ್ರಮ ಫಲದಾಯಕವಾಗಿದೆ. ಕರ್ಮಭೂಮಿಯಲ್ಲಿ ದುಡಿಯೋಕೆ ಬಂದವರು ಸಂಘಟನೆಯಲ್ಲೂ ಶ್ರೀಮಂತರಾಗಿರುವ ಂತಿದೆ. ತಮ್ಮೆಲ್ಲರ ಆಶಯದ ಕನಕ ಭವನ ಶೀಘ್ರವೇ ನಿರ್ಮಾಣವಾಗಲಿ ಎಂದು ಹೆಚ್.ಎಂ ರೇವಣ್ಣ ಮಾತನಾಡಿ ಆಶಯ ವ್ಯಕ್ತಪಡಿಸಿದರು.
ಶಾಸಕ ಚೆಲುವರಾಯ ಮಾತನಾಡಿ ಮಾನವೀಯ ಧರ್ಮಕ್ಕೆ ಹೆಚ್ಚು ಆದ್ಯತೆ ಮತ್ತು ಪೆÇ್ರೀತ್ಸಾಹ ಕೊಟ್ಟ ಕನಕದಾಸರ ಜೀವನ ನಮ್ಮೆಲ್ಲರಿಗೂ ಮಾದರಿ. ಆದುದರಿಂದ ದಾಸರ ಬದುಕು ರೂಡಿಸಿಕೊಳ್ಳಿರಿ. ಜೊತೆಗೆ ಕನ್ನಡಾಂಭೆಯ ಮಾನ್ಯತೆಗೆ ಪಾತ್ರರಾಗಿರಿ ಎಂದರು. ಜೊತೆಗೆ ಮುಖ್ಯಮಂತ್ರಿಗಳ ಕಾರ್ಯನಿರ್ವಾಹಣೆಯ ಬಗ್ಗೆಯೇ ಪ್ರಧಾನವಾಗಿ ಪ್ರಶಂಸಿದರು.
ನಮ್ಮ ಹಿರಿಯರು ಮಹಾರಾಷ್ಟ್ರದಲ್ಲಿ ಶತಮಾನದಿಂದಲೂ ನೆಲೆಯಾಗಿದ್ದರು. ಕಾರ್ಮಿಕರಾಗಿ ದುಡಿಸಿಕೊಂದು ಇಂದು ಯಜಮಾನರಾಗಿ ಉನ್ನತಿ ಸಾಧಿಸಿದ ಮಂದಿಯೂ ನಮ್ಮಲ್ಲೀಗ ಇದ್ದಾರೆ. ಆ ಮೂಲಕ ಗುರುತರ ಸೇವೆಯಲ್ಲಿ ತೊಡಗಿಸಿಕೊಂಡು ಒಂದು ಸ್ಥಾನಮಾನಕ್ಕೆ ಬಂದಿರುವುದು ಸ್ತುತ್ಯಾರ್ಹ. ಶಕ್ತಿಮಿರಿ ಸಮಾಜಕ್ಕೆ ಶ್ರಮಿಸುತ್ತಿರುವ ಕುರಬರ ಸಂಘದ ಭವನಕ್ಕೆ ತನ್ನ ಅಮೂಲ್ಯವಾದ ಯೋಗದಾನ ನೀಡುವೆ ಎಂದು ಶಾಸಕ ನಾರಾಯಣ ಗೌಡ ತಿಳಿಸಿದರು.
ಇದು ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಸ್ವಸಮಾಜ ಬಾಂಧವರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ಕನಕದಾಸರಂತಹ ಮಹಾನುಭವರ ಜೀವನಕ್ಕೆ ಬದ್ಧರಾಗಿ ನಮ್ಮಲ್ಲಿನ ಏಕತೆಯನ್ನು ವೃದ್ಧಿಸಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಸೇವೆಯಾಗಿಗೆ ಎಂದು ಮಂಜೇ ಚಿಕ್ಕೇಗೌಡ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಸಂಘದ ಸದಸ್ಯರುಗಳಾದ ರಾಜು ನಂಜಪ್ಪ ಗೌಡ, ಉಮೇಶ್ ಕಾಳೇ ಗೌಡ, ದೇವರಾಜ ಬೀರೇ ಗೌಡÀ, ಉಮೇಶ್ ರಾಜೇ ಗೌಡ, ಮಂಜು ಚಿಕ್ಕೇ ಗೌಡ, ಮಂಜೇಗೌಡ ಕುಳ್ಳೆ ಗೌಡ ಮತ್ತಿತರರು ಉಪಸ್ಥಿತರಿದ್ದು ಅತಿಥಿüಗಣ್ಯರು ಸಂದರ್ಭೋಚಿತವಾಗಿ ಮಾತನಾಡಿ ಕುರುಬರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ ಆಯೋಜಿಸಿದ್ದ ಭವ್ಯ ಸಮಾರಂಭಕ್ಕಾಗಿ ಶುಭಾರೈಸಿದರು.
ಕನಕ ಜಯಂತ್ಯೋತ್ಸವ ನಿಮಿತ್ತ ಸಾಯಂಕಾಲ ಅರಿಶಿಣ ಕುಂಕುಮ ಕಾರ್ಯಕ್ರಮ ನೆರವೇರಿತು. ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮವಾಗಿ ಕಾಮಿಡಿ ಖಿಲಾಡಿ ಶಿವರಾಜ್ ಕೆ.ಆರ್ ಪೇಟೆ ಮತ್ತು ನಯನಾ ಬಳಗವು ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಕುರುಬರ ಸಂಘ ಮಂಡ್ಯ ಇದರ ಕಾರ್ಯದರ್ಶಿ ಎಲ್.ದೇವರಾಜ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿ.ಪಿ ವಿದ್ಯಾಶಂಕರ್ ನಾಡಗೀತೆಯನ್ನಾಡಿದರು. ರವೀಂದ್ರ ಎನ್.ಗೌಡ ಅತಿಥಿüಗಳನ್ನು ಪರಿಚಯಿಸಿದರು. ಕಲಾದೇಗುಲ ಶ್ರೀನಿವಾಸ್ ಮತ್ತು ಶೃತಿ ಬೆಂಗಳೂರು (ಕಾಲನಿರ್ಣಾಯ) ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ್ ಕಾಳೇಗೌಡ ವಂದನಾರ್ಪಣೆಗೈದರು.