Sunday 11th, May 2025
canara news

ಹಗೆತನ ತ್ಯಜಿಸಿ, ತ್ಯಾಗಮಯಿಗಳಾಗೋಣ ಕ್ರಿಸ್ಮಸ್ ಸುಖ ಶಾಂತಿ ಪ್ರೀತಿಯ ಹಬ್ಬವಾಗಲಿ - ಬಿಷಪ್ ಜೆರಾಲ್ಡ್ ಲೋಬೊ

Published On : 11 Dec 2017   |  Reported By : Bernard J Costa


ಕುಂದಾಪುರ, ಡಿ.11: ‘ಹಗೆತನ ತ್ಯಜಿಸಿ, ತ್ಯಾಗಮಯಿಗಳಾಗೋಣ ಕ್ರಿಸ್ಮಸ್ ಸುಖ ಶಾಂತಿ ಪ್ರೀತಿಯ ಹಬ್ಬವಾಗಲಿ’ ಕಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಎರ್ಪಡಿಸಿದ ಕ್ರಿಸ್ಮಸ್ ಸೌಹಾರ್ದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ| ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ‘ಅಸತ್ಯವನ್ನು ಅಳಿಸಿ ಸತ್ಯವನ್ನು ಉಳಿಸಲು, ಪಾಪದ ಅಂದಕಾರವನ್ನು ಒಡಿಸಿ ನೀತಿ ಜ್ಯೋತಿಯನ್ನು ಬೆಳಗಿಸಲು ಎಸು ಕ್ರಿಸ್ತರು ಈ ಧರೆಗೆ ಬಂದರು. ದಯೆ ಶಾಂತಿ ಪ್ರೀತಿ ಸಹೋದರತೆಯೆ ಕ್ರಿಸ್ಮಸ್ ಸಂದೇಶವಾಗಿದೆ. ನಾವು ಎಲ್ಲರೋಡನೆ ಪ್ರೀತಿಯ ಸಂಬಂಧಗಳನ್ನು ಬೆಳೆಸಿ ದಯೆ ಪ್ರೀತಿ ಕರುಣೆ ತೋರಿಸಿ ಶಾಂತಿಯ, ಒಳ್ಳೆಯ ಸಮಾಜವನ್ನು ಕಟ್ಟೋಣ’ ತಮ್ಮ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ|ರಾಜೇಂದ್ರ ಎಸ್. ನಾಯಕ್, ಮಾತಾಡಿ ‘ಸೌಹಾರ್ದತೆ ಎಂಬ ಪದ ನಮ್ಮ ಹ್ರದಯಗಳು, ಮನಸ್ಸುಗಳು ಅಂತಕರಣದಲ್ಲಿ ಒಂದಾಗಿ ಸಹೋದರತೆಯಿಂದ ಬಾಳಾ ಬೇಕು ಎಂಬ ಕಾಳಜಿಯನ್ನು ತೋರಿಸುತ್ತದೆ. ಒಬ್ಬರನೊಬ್ಬರು ದ್ವೇಷದ ಭಾವನೆಯಿಂದ ಬದುಕುತ್ತಿರುವ ಈ ಸಮಯದಲ್ಲಿ ಕ್ರಿಸ್ಮಸ್ ಹಬ್ಬ ಸಮಾಜದ ಎಲ್ಲರನ್ನು ಪ್ರೀತಿ ಶಾಂತಿ ಸಮಾಧಾನದಿಂದ ಬಾಳಾಬೇಕೆಂದು ಸಂದೇಶ ನೀಡುತ್ತದೆ’ ಎಂದು ತಮ್ಮ ಸಂದೇಶದಲ್ಲಿ ನುಡಿದರು. ಮತ್ತೊರ್ವ ಮುಖ್ಯ ಅತಿಥಿ ಇಬ್ರಾಯಿಮ್ ಸಾಹೇಬ್ ‘ದ್ವೇಷ ಅಶಾಂತಿ ಗಲಬೆ ಹಿಂಸೆಗಳ ಬಾಗಿಲುಗಳನ್ನು ನಾವು ಸದಾ ಮುಚ್ಚುವ, ಪ್ರೀತಿ ಶಾಂತಿ ಮಮತೆಯ ಬಾಗಿಲುಗಳನ್ನು ನಾವು ಸದಾ ತೆರೆದಿಡೋಣ, ಕ್ರೂರತೆ ಮರೆತು ಮಾನವೀಯತೆಯನ್ನು ಬೆಳೆಸಿಕೊಂಡು, ಸಹೋದರತೆಯಿಂದ ಬಾಳಿದರೆ ಮಾತ್ರ ಸೌಹಾರ್ದಕ್ಕೆ ಬೆಲೆ ಬರುತ್ತದೆ’ ಎಂದು ಸಂದೇಶ ನೀಡಿದರು.

ಕಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಧರ್ಮಗುರು ವಂ|ಅನಿಲ್ ಡಿಸೋಜಾ ಬೆಲುನುಗಳನ್ನು ಹಾರಿಸಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಕುಂದಾಪುರ ವಲಯದ ಅಧ್ಯಕ್ಷ ಜೇಕಬ್ ಡಿಸೋಜಾ ಸ್ವಾಗತಿಸಿದರು. ತೊಮಸ್ ಮಾಸ್ಟರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ವಾಲೇರಿಯನ್ ಫೆರ್ನಾಂಡಿಸ್, ಕುಂದಾಪುರ ವಲಯ ಕಾರ್ಯದರ್ಶಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಆಲ್ವಿನ್ ಕ್ವಾಡ್ರಸ್ ವಂದನೆಗಳನ್ನು ಅರ್ಪಿಸಿದರು. ಫ್ಲಾಯ್ವನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರದಲ್ಲಿ ಹಲವಾರು ಧರ್ಮಗುರುಗಳು, ಭಗಿನಿಯರು, ರಾಜಾಕಾರಣಿಗಳು, ಸಮಾಜದ ಸೇವಕರು, ಮುಖಂಡರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕುಂದಾಪುರ, ಬೈಂದೂರು, ಬಸ್ರೂರು, ಪಡುಕೋಣೆ, ಪಿಯುಸ್ ನಗರ್, ಕೋಟೆಶ್ವರ ರೋಮನ್ ಕಾಥೊಲಿಕ್ ಚರ್ಚ್, ಕುಂದಾಪುರ, ಬಸ್ರೂರು ಸಿ,ಎಸ್.ಐ. ಚರ್ಚ್, ಮುದ್ದುರು ಜಟ್ಕಲ್ ಸೀಲೊ ಮಲ್ಬಾರ್ ಚರ್ಚುಗಳ ಪ್ರಜೆಗಳು ಭಾಗವಹಿಸಿ ಅವರವರ ಚರ್ಚಗಳ ಪರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನೀಡಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here