Friday 26th, April 2024
canara news

ಐಐಟಿಸಿ ಸಂಸ್ಥೆಯಿಂದ `ಟ್ರಾವೆಲ್ ಎಂಡ್ ಟೂರಿಸಂ' ವಿಚಾರಿತ ಕಾರ್ಯಗಾರ ಪ್ರವಾಸೋದ್ಯಮ ರಂಗವು ವಿಶ್ವಮಾನ್ಯತೆಯ ಪ್ರತಿಷ್ಠಿತ ಕ್ಷೇತ್ರವಾಗಿದೆ

Published On : 12 Dec 2017   |  Reported By : Rons Bantwal


(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ಡಿ.11: ಪ್ರವಾಸೋದ್ಯಮ ರಂಗವು ವಿಶ್ವಮಾನ್ಯತೆಯ ಪ್ರತಿಷ್ಠಿತ ಕ್ಷೇತ್ರವಾಗಿದೆ. ಇಲ್ಲಿನ ಉದ್ಯಮ, ಸೇವೆ ಅಥವಾ ಉದ್ಯೋಗ ಸದಾಕಾಲ ನೆಮ್ಮದಿಯನ್ನು ನೀಡುವುದರ ಜೊತೆಗೆ ಜಾಗತಿಕ ಅರಿವನ್ನು ಮೂಡಿಸುತ್ತದೆ. ಆದುದರಿಂದ ಆಧುನಿಕ ಪ್ರವಾಸೋದ್ಯಮ ವಲಯವು ಹೆಚ್ಚು ಮಾನ್ಯತೆಯ ಹಾಗೂ ಗಳಿಕೆಯ ಉದ್ಯಮವಾಗಿ ಬೆಳೆಯುತ್ತಿದೆ ಎಂದು ಕೊನ್ಸುಲ್ ಜನರಲ್ ಆಫ್ ಇಟೆಲಿ ಸ್ಟೇಫನಿಯಾ ಕೊಸ್ಟನ್‍ಝ ತಿಳಿಸಿದರು.

ಇಂದಿಲ್ಲಿ ಸೋಮವಾರ ಪೂರ್ವಾಹ್ನ ಉಪನಗರ ಅಂಧೇರಿ ಪೂರ್ವದ ಸಹಾರ್‍ನಲ್ಲಿನ ಹೊಟೇಲ್ ಲೀಲಾ ಕೆಂಪೆನ್‍ಸ್ಕಿಯ ಬಾಲ್‍ರೂಮ್ ಸಭಾಗೃಹದಲ್ಲಿ ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು-ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆ 

ಇಂಟರ್‍ನೇಶನಲ್ ಇನ್‍ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯು ತನ್ನ ಟ್ರಾವೆಲ್ ಎಂಡ್ ಟೂರಿಸಂ ಹಾಗೂ ಐಎಟಿಎ (ಐಯಾಟ) ವಿದ್ಯಾಥಿರ್üಗಳಿಗಾಗಿ ಇಟಲಿಯನ್ ಕನ್ಸುಲೆಟ್ ಎಂಡ್ ದ ಇಟೆಲಿಯನ್ ಟೂರಿಸಂ ಬೋರ್ಡ್ ಸಹಯೋಗದೊಂದಿಗೆ ಆಯೋಜಿಸಿದ್ದ `ಪ್ರಯಾಣ ಮತ್ತು ಪ್ರವಾಸೋದ್ಯಮ' (ಟ್ರಾವೆಲ್ ಎಂಡ್ ಟೂರಿಸಂ) ವಿಚಾರಿತ ಕಾರ್ಯಗಾರ ನಡೆಸಿ ಸ್ಟೇಫನಿಯಾ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದರು.

ವೃತ್ತಿಪರ ಶಿಕ್ಷಣ ರಂಗದಲ್ಲಿ ಸುಮಾರು ನಿರಂತರ ಐದು ದಶಕದ ಅನುಭವಿ, ಗ್ಲೋಬಲ್ ಕರಿಯರ್ಸ್ ಐಐಟಿಸಿ ಸಂಸ್ಥೆಯ ಸ್ಥಾಪಕ ಆಡಳಿತ ನಿರ್ದೇಶಕ ಎಸ್.ಕೆ ಉರ್ವಾಲ್ ಅವರ ಸುದೀರ್ಘಾವಧಿ ಸೇವಾ ವೈಖರಿ ಪ್ರಶಂಸಿದರು.

ಸ್ಟೇಫನಿಯಾ ಕೊಸ್ಟನ್‍ಝ, ಇಟೆಲಿಯನ್ ರಾಜ್ಯದ ಇಎನ್‍ಐಟಿ ಪ್ರತಿನಿಧಿ ಸಲ್ವತೊರ್ ಇನ್ನಿಯಿಲ್ಲೊ, ರೈೀಲ್ ಯುರೋಪ್‍ನ ಪ್ರಾದೇಶಿಕ ವ್ಯವಸ್ಥಾಪಕ ಕುನಲ್ ಕೊಥರಿ, ಆ್ಯಕ್ಟಿವ್ ಹಾಲಿಡೇಸ್ ಸಂಸ್ಥೆಯ ನಿರ್ದೇಶಕಿ ಕು| ಗೌರಿ ಜಯರಾಮ್, ಎಂಎಸ್‍ಸಿ ಕ್ರೊಸಿಯಿರ್‍ನ ಪ್ರಧಾನ ಪ್ರಬಂಧಕ ಕುನಲ್ ಸಂಪತ್ ಅವರು ಭಾರತೀಯ ಹಾಗೂ ವಿಶ್ವದ ಪ್ರವಾಸೋದ್ಯಮ ಮತ್ತು ಉದ್ಯೋಗವಕಾಶಗಳು ಬಗ್ಗೆ ಮಾಹಿತಿಯನ್ನಿತ್ತರು.

ಕಾಂiÀರ್iಕ್ರಮದಲ್ಲಿ ಐಐಟಿಸಿ ನಿರ್ದೇಶಕರಾದ ವಿಕ್ರಾಂತ್ ಉರ್ವಾಲ್, ರೀನಾ ವಿ.ಉರ್ವಾಳ್, ಸಂಸ್ಥೆಯ ನಿಖಿಲ್ ಸಂಪತ್, ಶಂಕರ್ ಪಾಂಡೇ, ವಂದನ ಜೈನ್, ಸಭೀರ್ ಕೌರ್, ಜಾನ್ವಿ ಗೊರಾಡಿಯಾ, ಯಶ್ಮೀನ್ ಖಾನ್, ಪವಿತ್ರ ರೈ, ಪಾಲ್ಗುಣಿ ಮಿರಾಣಿ, ಸುನೀಲ್ ಶೆವಾಲೆ ಮತ್ತು ರವಿ ಸುವರ್ಣ ಘಾಟ್ಕೋಪರ್ ಮುಂತಾದವರು ಉಪಸ್ಥಿತರಿದ್ದರು.

ಫ್ಯಾಶನ್ ರಂಗದ ಪ್ರಾಚಾರ್ಯ ಪೆÇ್ರ. ಸೈರಸ್ ಗೋಂಡ ಸ್ವಾಗತಿಸಿದರು. ನಿರ್ದೇಶಕ ವಿಕ್ರಾಂತ್ ಉರ್ವಾಲ್ ಸಂಪನ್ಮೂಲ ವ್ಯಕ್ತಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಗುರ್ಜೀತ್ ಸಿಂಗ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here