Sunday 11th, May 2025
canara news

`ರಾಷ್ಟ್ರೀಯ ಗೌರವ ಪ್ರಶಸ್ತಿ'ಗೆ ಭಾಜನರಾದ ಡಾ| ರವಿರಾಜ್ ಶೆಟ್ಟಿ ಗುರುಪುರ

Published On : 13 Dec 2017   |  Reported By : Rons Bantwal


ಮುಂಬಯಿ, ಡಿ.13: ಮಂಗಳೂರು ಹೊರ ವಲಯದ ಗುರುಪುರ ಕಾರಮೊಗರು ಅಲ್ಲಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯದ ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ವಿಭಾಗದ ಮೆಕ್ಯಾನಿಕಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಳೆದ 15 ವರ್ಷದಿಂದ ಪೆÇ್ರಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ| ರವಿರಾಜ್ ಶೆಟ್ಟಿ (ಗುರುಪುರ) ಇವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಗಾಗಿ ದಿಲ್ಲಿಯ ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯಾ ಇಂಟರ್‍ನ್ಯಾಶನಲ್ ಫ್ರೆಂಡ್‍ಶಿಪ್ ಸೊಸೈಟಿಯ `ರಾಷ್ಟ್ರೀಯ ಗೌರವ ಪ್ರಶಸ್ತಿಗೆ' ಆಯ್ಕೆ ಆಗಿದ್ದಾರೆ.

ಪೆÇ್ರಫೆಸರ್ ರವಿರಾಜ್ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ 75ಕ್ಕೂ ಹೆಚ್ಚು ಅಂತಾರಾಷ್ಟ್ರೀಯಪ್ರಬಂಧ ಬರೆದಿದ್ದು, 400ಕ್ಕೂ ಹೆಚ್ಚು ಉಲ್ಲೇಖ ಗೌರವಕ್ಕೆ ಪಾತ್ರರಾಗಿದ್ದಾರೆ.

ಡಿ.20ರಂದು ದಿಲ್ಲಿಯ ಇಂಡಿಯಾ ಇಂಟರ್‍ನ್ಯಾಶನಲ್ ಸೆಂಟರಿನಲ್ಲಿ ನಡೆಯಲಿರುವ `ಆಥಿರ್üಕ ಪ್ರಗತಿ ಮತ್ತು ರಾಷ್ಟ್ರೀಯ ಸಮಗ್ರತೆ' ವಿಚಾರಗೋಷ್ಠಿ ಸಮಾರಂಭದಲ್ಲಿ ಡಾ| ಶೆಟ್ಟಿ ಅವರಿಗೆ ಈ ಪ್ರಶಸ್ತಿ ಹಾಗೂ ಪ್ರಮಾಣಪತ್ರ ಪ್ರದಾನಿಸಿ ಗೌರವಿಸಲಾಗುವುದು ಎಂದು ಸೊಸೈಟಿ ಪ್ರಕಟಣೆಯೊಂದು ತಿಳಿಸಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here