Sunday 11th, May 2025
canara news

ನಮ್ಮ ಗ್ರಾಮ ನಮ್ಮ ಮಕ್ಕಳು ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮಾಹಿತಿ ಶಿಬಿರ-2017

Published On : 14 Dec 2017   |  Reported By : Bernard D'Costa


ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಗಳು ಸದಾಕಾಲ ಪ್ರತಿಯೊಂದು ಕ್ಷಣವನ್ನು ಉಪಯುಕ್ತ ರೀತಿಯಲ್ಲಿ ಆಸ್ವಾದಿಸುತ್ತಲೇ ಬೆಳೆಯತ್ತಾರೆ ಅವರ ತಿಳುವಳಿಕೆ, ಜ್ಞಾನ ಮುಂತಾದ ಅಂಶಗಳು ಜೀವನ ಉದ್ದಕ್ಕೂ ಅನ್ಯರಿಗಷ್ಟೆ ಅಲ್ಲ ಸ್ವತ ತಮಗೂ ಪಾಠಗಳಾಗಿರುತ್ತದೆ ಅದನ್ನು ಇತರರು ವಿವೇಚಿಸುವ ಮತ್ತು ಅಳವಡಿಸಿ ಆಚರಣೆಗೆ ತರುವ ಗುಣ ರೂಡಿಸಿಕೊಂಡರೆ ಅಂತವರÀ ಬದುಕು ಎಲ್ಲರಿಗೂ ಮಾದರಿಯಾಗಿ ಆದರ್ಶಪ್ರಾಯವಾಗಿ ಸಮ್ರದ್ದವಾಗಿರುತ್ತದೆ ಎಂದು ಶ್ರೀ ಹರೀಶ್ ಮೇಸ್ತ ಅದ್ಯಕ್ಷರು ಗುಜ್ಜಾಡಿ ಗ್ರಾಮ ಪಂಚಾಯತ್ ಗುಜ್ಜಾಡಿ ಇವರು ಹೇಳಿದರು.

ಅವರು ಇತ್ತೀಚೆಗೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಅಭಿವೃದ್ದಿ ಸಂಸ್ಥೆ(ರಿ) ಬಾಳ್ಕುÀ್ಕದ್ರು ಹಂಗಾರಕಟ್ಟೆ ಗುಜ್ಜಾಡಿ ಗ್ರಾಮ ಪಂಚಾಯತ್ ಗುಜ್ಜಾಡಿ ಹಾಗೂ ಎಂ.ಬಾಸ್ಕರ ಪೈ ಸರಕಾರಿ ಪ್ರೌಢಶಾಲೆ ಗುಜ್ಜಾಡಿ ಬೈಂದೂರು ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿ ನಡೆದ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿv ಮಾಹಿತಿ ಶಿಬಿರ 2017ಉದ್ಘಾಟಿಸಿ ಮಾತಾಡಿದರು.

ಮುಖ್ಯ ಅತಿಥಿಯಾಗಿ ಶ್ರೀ ಸುಧಾಕರ ಆಚಾರ್ಯ ಉದ್ಯಮ ತ್ರಾಸಿ ಇವರು ಮಾತಾಡುತ್ತಾ ಇಂತಹ ಅಭೂತಪೂರ್ವ ಕರಕುಶಲ ವಸ್ತು ಪ್ರಾತ್ಯಾಕ್ಷಿತೆಯಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಅದರಲ್ಲಿ ಮುಖ್ಯವಾಗಿ ಎಂಬೊಸಿಂಗ್ ಪೈಂಟ್, ಹೂದಾನಿತಯಾರಿ, ಪ್ಲಾಸ್ಟಿಕ್ ಮುಕ್ತ ವಸ್ತುಗಳಾದ, ಬಟ್ಟೆಚೀಲ, ಕಾಗದದಿಂದ ಚೀಲ, ಪೇಪರ್‍ಮುಖವಾಡ, ಬಣ್ಣದಕಾಗದದಿಂದಹೂಗುಚ್ಚ, ಸ್ಪಂಜಿನಿಂದಗೊಂಬೆ, ಇವುಗಳ ತಯಾರಿಕೆಯಿಂದ ಮಕ್ಕಳಲ್ಲಿ ಕಲಿಯುವ ತವಕ ಮತ್ತು ತನ್ಮಯತೆ ಹೆಚ್ಚುತ್ತದೆ ಗುಂಪು ನಿರ್ವಹಣಾ ಕೌಶಲ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಭಾದ್ಯಕ್ಷತೆಯನ್ನು ತಾಲೂಕು ಪಂಚಾಯತ್ ಸದಸ್ಯರು ಹಾಗೂ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾದ್ಯಕ್ಷರಾದ ಶ್ರೀ ರಾಜು ದೇವಾಡಿಗ ಇವರು ಮಾತಾಡುತ್ತಾ ಜಾಗತೀಕರಣದಿಂದ ನಮ್ಮ ಸಾÀಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ವ್ಯಕ್ತಿವ್ಯಕ್ತಿಯಿಂದಸಂಬಂಧದ ಮೌಲ್ಯಗಳು ಗುರು ಹಿರಿಯರ ಪ್ರೀತಿ ಅಜ್ಜ ಅಜ್ಜಿಯರ ಮಮತೆ ಮಾರ್ಗದರ್ಶನ ನಮ್ಮ ಮಕ್ಕಳಿಗೆ ಮರೀಚಿಕೆಯಾಗಿದೆ ಅಂಕ ಗಳಿಸುವುದೆ ಶಿಕ್ಷಣದ ಉದ್ದೇಶವಾಗಿರಬಾರದು ಮಕ್ಕಳಲ್ಲಿ ನೈತಿಕ ಶಿಕ್ಷಣದ ಕೊರತೆ ನೀಗಿಸುವ ಇಂತಹ ಪ್ರಯತ್ನಗಳು ಅಭಿನಂದರ್ಹವಾದದು ಈ ಒಂದು ದಿನದಲ್ಲಿ ಕಲಿಯುವ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಪುನರಪಿ ಕಲಿತು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇನ್ನೊರ್ವ ಮುಖ್ಯ ಅತಥಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶೀಲ ನಾಯಕ್ ಮಾತಾಡಿ ಮಕ್ಕಳಲ್ಲಿ ಇಂತಹ ಕೌಶಲ್ಯಗಳು ಹದಿ ಹರೆಯದಲ್ಲಿ ಅನಾವರಣಗೊಂಡಾಗ ಮುಂದೆ ಅವರಿಗೆ ಅದುವೇ ಬದುಕಿಕೆ ಆಶ್ರಯವಾಗಬಹುದೆಂದರು. ಸಭೆಯಲ್ಲಿ ಶ್ರೀ ಹರೀಶ್ ಮೇಸ್ತ, ಶ್ರೀಮತಿ ಜಯಶೀಲ ನಾಯಕ್ ಶ್ರೀ ಸುಧಾಕರ ಆಚಾರ್ಯ ತ್ರಾಸಿ, ಶ್ರೀ ರಾಜು ದೇವಾಡಿಗ, ಶ್ರೀ ಮಂಜು ಬಿಲ್ಲವ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜ್ಯೋತಿ ಬಾಳ್ಕುದ್ರು, ಶ್ರೀಮತಿ ಕುಸುಮ ಕಾಮತ್ ಅಲೆವೂರು, ಶ್ರೀಮತಿ ಅನಿತಾ ಉಡುಪಿ, ಶ್ರೀರಾಜ್ ಎಸ್ ಆಚಾರ್ಯ ವಕ್ವಾಡಿ, ಶ್ರೀ ರಮೇಶ್ ವಕ್ವಾಡಿ, ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಶ್ರಿಮತಿ ಕುಸುಮ ಕಾಮತ್ ಅಲೆವೂರು ಇವರು ನಿರೂಪಿಸಿ ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ ಸ್ವಾಗತಿಸಿದರು. ಶ್ರೀರಾಜ್‍ಎಸ್‍ಆಚಾರ್ಯ ವಕ್ವಾಡಿ ವಂದಿಸಿದರು ಸುಮಾರು 116 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here