Saturday 5th, July 2025
canara news

ರೋಜರಿ ಕಿನ್ನರ್ ಗಾರ್ಟನ್ ಚಿಣ್ಣರ ಕ್ರಿಡೋತ್ಸವ

Published On : 16 Dec 2017   |  Reported By : Bernard D'Costa


ಕುಂದಾಪುರ, ಡಿ. 16: ‘ಎಳೆವೆಯಿಂದಲೇ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಹೊಮ್ಮಲು ರೋಜರಿ ಕಿನ್ನರ್ ಗಾರ್ಟನ್ ಶಾಲೆಯ, ಎಲ್.ಕೆ.ಜಿ, ಯು.ಕೆ.ಜಿ. ಹಾಗೂ ನರ್ಸರಿ ಮಕ್ಕಳು ಮತ್ತು ಹೆತ್ತವರಿಗಾಗಿ ಕ್ರಿಡೋತ್ಸವನ್ನು ರೋಜರಿ ಚರ್ಚ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕ್ರಿಡೋತ್ಸವವನ್ನು ಕ್ರಾಸ್ಟೊ ಇಂಜಿನಿಯರ್ ಪಾಲುದಾರ ವಿನೋದ್ ಕ್ರಾಸ್ಟೊ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ವ್ಯವಸ್ಥಾಪಕರಾದ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ವಂ| ಅನಿಲ್ ಡಿಸೋಜಾ ‘‘ಎಳೆವೆಯಿಂದಲೇ ಮಕ್ಕಳಲ್ಲಿ ಆಟ ಮತ್ತು ಪಾಠಗಳಲ್ಲಿ ಆಸಕ್ತಿ ಹೊಮ್ಮಲು ಕೋಲಿ ರೋಜರಿ ಕಿನ್ನರ್ ಗಾರ್ಟನ್ ಶಾಲೆ ಶ್ರಮಿಸುತ್ತದೆ’ ಎಂದು ಈ ಕ್ರಿಡೋತ್ಸವವನ್ನು ಹಮ್ಮಿಕೊಂಡಿದ್ದೆವೆ ಶುಭ ಕೋರಿದರು. ಸಹಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಉಪಸ್ಥಿತರಿದ್ದರು.

ಶಿಕ್ಷಕಿ ಆನ್ನಾ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮುಖ್ಯೊಪಾಧ್ಯಾನಿ ಶೈಲಾ ಲೂವಿಸ್ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಆಟೋಟ ಸ್ಪರ್ಧೆಗಳನ್ನು ನೆಡೆಸಿಕೊಟ್ಟರು..




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here