Sunday 11th, May 2025
canara news

ಹತ್ಯೆಯಾದ ಶರತ್ ಮಡಿವಾಳ, ಮಹಮ್ಮದ್ ಆಶ್ರಫ್ ಕುಟುಂಬಕ್ಕೆ 5 ಲಕ್ಷ ಪರಿಹಾರ - ಯು.ಟಿ ಖಾದರ್

Published On : 14 Dec 2017   |  Reported By : Canaranews network


ಮಂಗಳೂರು: ಬಂಟ್ವಾಳ ಸಮೀಪ ಕೆಲವು ತಿಂಗಳ ಹಿಂದೆ ಕೊಲೆಯಾಗಿರುವ ಶರತ್ ಮಡಿವಾಳ ಮತ್ತು ಮಹಮ್ಮದ್ ಆಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರ ೫ ಲಕ್ಷ ಪರಿಹಾರಧನ ಘೋಷಿಸಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆಹಾರ ಮತ್ತು ನಾಗರೀಕ ಸಚಿವ ಯು.ಟಿ ಖಾದರ್ ಅವರು ಪರಿಹಾರ ಮೊತ್ತವನ್ನು ಶೀಘ್ರವೇ ಜಿಲ್ಲಾ ಉಸ್ತುವರಿ ಸಚಿವ ಬಿ. ರಮಾನಾಥ ರೈ ಮೂಲಕ ವಿತರಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಇಬ್ಬರು ಅಮಾಯಕ ಹತ್ಯೆಯಾದಾಗಲೂ ಸರಕಾರದಿಂದ ಪರಿಹಾರ ಕೊಡಿಸುವ ಜವಬ್ದಾರಿ ನನ್ನದು ಎಂದಿದ್ದೆ. ಅದರಂತೆ ಸರಕಾರದೊಂದಿಗೆ ಮಾತುಕತೆ ನಡೆಸಿ ಕೊಟ್ಟ ಮಾತು ಉಳಿಸಿದ್ದೇನೆ ಎಂದರು.ಇದೇ ಸಂದರ್ಭ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ ಸಚಿವರು, ಕೇಂದ್ರ ಸರ್ಕಾರ ಯಾವುದೇ ಜನಸ್ನೆಹಿ ಯೊಜನೆ ಜಾರಿಗೆ ತಂದಿಲ್ಲ. ಈ ಹಿಂದೆ ಜಾರಿಗೆ ತಂದ ಜನ ಪರ ಯೋಜನೆಗಳನ್ನು ಕೂಡಾ ಬಿಜೆಪಿ ನೇತೃತ್ವ ದ ಸರ್ಕಾರ ನಿಲ್ಲಿಸಿದೆ.

ಎಲ್ಐಸಿಯೊಂದಿಗೆ ಬೆಸೆದುಕೊಂಡಿದ್ದ ಆಮ್ ಆದ್ಮಿ ಸ್ಕೀಮ್ ಯೋಜನೆಯನ್ನು ನಿಲ್ಲಿಸಿದೆ. ಸಹಜ ಸಾವಿನ ಸಂದರ್ಭದಲ್ಲಿ 30,000, ಆಕಸ್ಮಿಕ ಸಾವಿನ ಸಂದರ್ಭದಲ್ಲಿ 75,000 ರೂ ಮತ್ತು 9 ರಿಂದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ವರ್ಷಕ್ಕೆ 1,200 ರೂಪಾಯಿ ಸ್ಕಾಲರ್ ಶಿಫ್ ನೀಡಲಾಗುತ್ತಿತ್ತು. ಈಗ ಅದು ಕಳೆದ ಒಂದು ತಿಂಗಳಿಂದ ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here