Thursday 25th, April 2024
canara news

ಏಕಕಾಲಕ್ಕೆ ಬಿಡುಗಡೆಗೊಂಡ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು

Published On : 17 Dec 2017   |  Reported By : Rons Bantwal


ಜೋಕಟ್ಟೆ ಸೃಜನಶೀಲ ಬರಹಗಾರರಾಗಿದ್ದಾರೆ: ವಿಕ್ರಾಂತ್ ಉರ್ವಾಳ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.17: ರಾಷ್ಟ್ರದ ಸಾಹಿತ್ಯಕ್ಕೆ ಜೋಕಟ್ಟೆ ಸಾಹಿತಿಕ ಕೊಡುಗೆ ಅಪಾರವಾದದ್ದು. ಜೋಕಟ್ಟೆ ಓರ್ವ ಮಾದರಿ ಬರಹಗಾರರಾಗಿದ್ದಾರೆ. ಜೋಕಟ್ಟೆಯವರಲ್ಲಿ ಸೃಜನ ಶೀಲತೆಯಿದ್ದು ಕನ್ನಡ ಸಾಹಿತ್ಯ ಲೋಕದ ಹಿರಿಮೆಯ ಬರಹಗಾರರಾಗಿದ್ದಾರೆ. ಇವರಿಂದ ಇನ್ನಷ್ಟು ಸರಸ್ವತಿ ಸೇವೆ ಮಾಡಲಿ ಎಂದು ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಳ್ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹÀದಲ್ಲಿ ನಾಡಿನ ಹಿರಿಯ ಲೇಖಕ, ಚಿಂತಕ ಸಿ.ಎಸ್ ದಿನೇಶ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕೃತಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಬೃಹನ್ಮುಂಬಯಿ ಅಲ್ಲಿನ ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ 29ನೇ ಕೃತಿ ಸಾಧನಾ ಪಬ್ಲಿಕೇಷನ್ಸ್ ಬೆಂಗಳೂರು ಪ್ರಕಟಿತ `ಒತ್ತಿ ಬರುವ ಕತ್ತಲ ದೊರೆಗಳು' ಲೇಖನ ಸಂಕಲನ ಬಿಡುಗಡೆ ಗೊಳಿಸಿ ಉರ್ವಾಳ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿದ್ದ ಶ್ರೀ ಉಮಾಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಎಸ್.ಎನ್ ಉಡುಪ ಅವರು 28ನೇ ಕೃತಿ ಸುಂದರ ಪ್ರಕಾಶನ ಬೆಂಗಳೂರು ಪ್ರಕಟಿತ ಕಥಾ ಸಂಕಲನ `ಬಂಗ್ಲೆ ಮನೆಯ ಪ್ರಭು' ಮತ್ತು ಮಹಾನಗರದ ಹಿರಿಯ ಸಮಾಜ ಸೇವಕ, ಕನ್ನಡದ ಸೇನಾನಿ ಎಸ್.ಕೆ ಸುಂದರ್ ಅವರು 29ನೇ ಕೃತಿ ಶ್ರೀರಾಮ ಪ್ರಕಾಶನ ಮಂಡ್ಯ ಪ್ರಕಟಿತ ಕವನ ಸಂಕಲನ `ಊರಿಗೊಂದು ಆಕಾಶ' ಬಿಡುಗಡೆ ಗೊಳಿಸಿದರು. ಸೋಮಯ್ಯ ಕಾಲೇಜ್‍ನ ನಿವೃತ್ತ ಪ್ರಾಂಶುಪಾಲ ಡಾ| ಎಸ್.ಕೆ ಭವಾನಿ, ಹೆಸರಾಂತ ಕಥೆಗಾರ ರಾಜೀವ ನಾರಾಯಣ ನಾಯಕ, ಪ್ರಸಿದ್ಧ ಕವಿ ಶರದ್ ಸೌಕೂರ್ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು.

ಎಸ್.ಕೆ ಸುಂದರ್ ಮಾತನಾಡಿ ಬರಹಗಳಲ್ಲಿ ಬಂಡಾಯದ ಗುಣಗಳಿದ್ದರೂ 29ರ ಕೃತಿಗಳು ಸ್ತುತ್ಯರ್ಹ. ಎರಡೂ ಕೈಗಳಲ್ಲಿ ಬರೆಯುವ ಲೇಖಕರೋನ್ನುವುದು ಅನುಮಾನಿಸುತ್ತಿದೆ. ಓರ್ವ ಒಳ್ಳೆಯ ವಿಮರ್ಶಕರಾಗಿದ್ದು, ಸಾಹಿತ್ಯ ರಂಗದಲ್ಲಿ ದೊಡ್ಡ ಗುಣದ ಸೌಮ್ಯ ಸ್ವಭಾವದ ಜೋಕಟ್ಟೆ ಶೀಘ್ರವೇ ಶತಕೃತಿಗಳು ಅವರಿಂದ ಹೊರ ಹಿಮ್ಮಲಿ ಎಂದು ನುಡಿದರು.

ಡಾ| ಎಸ್.ಕೆ ಭವಾನಿ ಮಾತನಾಡಿ ನಾನೊಬ್ಬ ಕ್ರೈಂ ವರದಿಗಾರನಲ್ಲ ಆದರೂ ಜೋಕಟ್ಟೆ ಅತ್ಮೀಯತೆಗೆ ಮಾರುಹೋಗಿ ಬಂದಿರುವೆ. ಅವರೊಬ್ಬ ವಿನೀತ ಪತ್ರಕರ್ತ, ಬರಹಗಾರ. ಅವರ ಪೆÇ್ರೀತ್ಸಾಹ ನನ್ನಂತವರ ಕರ್ತವ್ಯ ಆಗಿದೆ. ದುಷ್ಕೃತ್ಯಗಳ ಅರಿವು ಮೂಡಿಸಿ ಅಪರಾಧಿಕ ವಿಚಾರಗಳನ್ನು ನಮ್ಮ ಭಾಷೆಯಲ್ಲಿ ವಸ್ತುನಿಷ್ಠೆಯಾಗಿ ಬರವಣಿಗೆ ಅರಿವಿನಲ್ಲಿ ರಚಿಸಿದ ಕೃತಿ ಓದುಗರಲ್ಲಿ ಜಾಗೃತಿಕರ ಆಗಲಿ ಎಂದರು.

ಎಸ್.ಎನ್ ಉಡುಪ ಮಾತನಾಡಿ ಮುಂಬಯಿ ಮಹಾನಗರದಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಜೋಕಟ್ಟೆ ಅವರು ತೊಡಗಿಸಿಕೊಂಡಿರುವ ರೀತಿ ತುಂಬಾ ಮೆಚ್ಚುವಂತಾದ್ದು. ಸಮಾಜ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಾಹಿತ್ಯದ ಪಾಲು ದೊಡ್ಡದು. ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಪ್ರೀತಿ ವಿಶ್ವಾಸ ಬಹಳ ಮುಖ್ಯ. ಸಮಾಜದ ಜನತೆಗೆ ಜನಪರವಾಗಿ ವಿಚಾರ ಚಿಂತನ ಮಾಡುವಂತಹ ಅವರ ಲೇಖನಗಳು ಓದುಗರನ್ನು ಬೆಂಗು ಉಂಟು ಮಾಡುವುದು ನಾವೆಲ್ಲ ಅಭಿಮಾನ ಪಡುವ ಸಂಗತಿ ಎಂದು ತಿಳಿಸಿದರು.

ಸಿ.ಎಸ್ ದಿನೇಶ್ ಅಧ್ಯಕ್ಷೀಯ ಭಾಷಣಗೈದು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಪುಸ್ತಕಗಳನ್ನು ಬರೆಯುವುದು ದೊಡ್ಡ ಸಾಧನೆ. ಅದರಲ್ಲೂ ಅವರ ಶ್ರೀಮತಿ ಅವರ ಸಹಯೋಗ ಸ್ಮರಣೀಯ. ನಾನು ಅವರನ್ನು ಹೊಗಳುವುದಿಲ್ಲ ಬದಲಾಗಿ ತತ್ವ ಸಿದ್ಧಾಂತಗಳನ್ನು ತಿಳಿಯಪಡಿಸುತ್ತೇನೆ. ಇದೆಲ್ಲಾ ಪ್ರರದ್ಧ, ಕರ್ಮ ಫಲವಾಗಿದೆ. ಗೋಳಾಟ ಮೀರಿದವರೇ ಕರ್ಮಯೋಗಿಗಳು. ಅವರಲ್ಲಿ ಒಬ್ಬರು ಜೋಕಟ್ಟೆಯವರು ಎಂದು ನುಡಿದರು.

ಕೃತಿಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ ನಿಮ್ಮೆಲ್ಲರ ಉಪಸ್ಥಿತಿ ನಮ್ಮ ಅಭಿಮಾನ. ತಮ್ಮೆಲ್ಲರ ಪೆÇ್ರೀತ್ಸಾಹವೇ ಇಷ್ಟೊಂದು ಕೃತಿಗಳ ರಚನೆಗೆ ಕಾರಣವಾಗಿದೆ. ಎಸ್.ಕೆ ಉರ್ವಾಳ್ ಅವರಿಂದ ಒಂದು ಕೃತಿ ಬಿಡುಗಡೆಗೊಳಿಸುವ ಆಶೆಯಿತ್ತು. ನನ್ನ ಬೆಳವಣಿಗೆಗೆ ಅವರ ಸಹಯೋಗವೂ ಬಹಳಷ್ಟಿದೆ. ಲೇಖಕರಿಗೆ ತಮ್ಮಂತಹ ಸಾಹಿತ್ಯಭಿಮಾನಿಗಳೇ ವರದಾನ ಎಂದರು.

ಡಾ| ಕರುಣಾಕರ್ ಎನ್.ಶೆಟ್ಟಿ, ಅಶೋಕ್ ಎಸ್.ಸುವರ್ಣ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಮೋಹನ್ ಮಾರ್ನಾಡ್, ಡಾ| ಭರತ್‍ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ದುರ್ಗಪ್ಪ ಯು.ಕೋಟಿಯವರ್, ಸುಶೀಲಾ ಎಸ್.ದೇವಾಡಿಗ, ಅನಿತಾ ಪಿ.ಪೂಜಾರಿ, ಅರವಿಂದ ಬಳ್ಳಾಲ್, ಡಾ| ಶಿವ ಬಿಲ್ಲವ, ರೊನಿ ಒಲಿವೆರಾ, ಕಮಲಾಕ್ಷ ಸರಾಫ್, ಸುರೇಶ್ ಎಸ್.ದೇವಾಡಿಗ, ಹೇಮಾ ಎಸ್.ಅಮೀನ್, ನ್ಯಾ| ಅಮೀತಾ ಬಾಗ್ವತ್, ಗುರ್‍ಜಿತ್ ಸಿಂಗ್, ಡಾ| ಈಶ್ವರ ಅಲೆವೂರು, ಪೇಟೆಮನೆ ಪ್ರಕಾಶ್ ಶೆಟ್ಟಿ, ಆರ್.ಎಲ್ ಭಟ್, ಜಯಕರ ಡಿ.ಪೂಜಾರಿ, ಪ್ರೇಮಾ ಬಿ.ರಾವ್, ರವಿ ಸುವರ್ಣ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು ಜೋಕಟ್ಟೆ ಅವರ ಸಾಹಿತ್ಯಾಭಿ ಮಾನ ಹಾಗೂ ಸರಸ್ವತಿ ಸೇವೆಯನ್ನು ಪ್ರಶಂಸಿಸಿ ಅಭಿನಂದಿಸಿದರು.

ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷ್ಮೀ ಎಸ್.ಜೋಕಟ್ಟೆ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಜೋಕಟ್ಟೆ ಅವರ ಕವನ ವಾಚನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹೆಸರಾಂತ ನಾಟಕಗಾರ, ರಂಗ ನಿರ್ದೇಶಕ, ಕವಿ ಸಾ.ದಯಾ (ದಯಾನಂದ ಸಾಲ್ಯಾನ್) ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here