Sunday 11th, May 2025
canara news

ಮುಂಬಯಿ ಕನ್ನಡ ಸಂಘದಿಂದ ನಡೆಸಲ್ಪಟ್ಟ ದತ್ತಿ ಉಪನ್ಯಾಸಗಳು

Published On : 18 Dec 2017   |  Reported By : Rons Bantwal


ರಾತ್ರಿ ಶಾಳೆಗಳು ಸಾವಿರಾರು ಜನತೆಗೆ ಕಲ್ಪವೃಕ್ಷವಾಗಿದೆ : ಬಿ.ಹೆಚ್ ಕಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.18: ಮುಂಬಯಿ ಕನ್ನಡ ಸಂಘವು ವಾರ್ಷಿಕವಾಗಿ ನಡೆಸುತ್ತಿರುವ ದತ್ತಿ ಉಪನ್ಯಾಸಗಳನ್ನು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗ ಪೂರ್ವದ ಭಾವುದಾಜಿ ರಸ್ತೆಯ ವೆಂಕಟೇಶ ನಿವಾಸದಲ್ಲಿನ ಸಂಘದ ಕಚೇರಿಯಲ್ಲಿ ಇಂದಿಲ್ಲಿ ಸಂಜೆ ನಡೆಸಿತು. ನವಿಮುಂಬಯಿ ಅಲ್ಲಿನ ಕನ್ನಡ ಸಂಘ ವಾಶಿ ಇದರ ಅಧ್ಯಕ್ಷ ಬಿ.ಹೆಚ್ ಕಟ್ಟಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ವಾರ್ಷಿಕ ದತ್ತಿ ಉಪನ್ಯಾಸಗಳಿಗೆ ಚಾಲನೆಯನ್ನಿತ್ತರು.

ರಾತ್ರಿಶಾಲೆಗಳು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿವೆ. ಅದರಲ್ಲೂ ಹೊಟೇಲು ಮಾಲಿಕರ ಶ್ರಮ, ದೇಣಿಗೆ ಅನುಪಮವಾದದ್ದು. ಇವೆಲ್ಲರೂ ರಾತ್ರಿ ಶಾಲಾ ಮಕ್ಕಳ ಜ್ಞಾನಾರ್ಜನೆಗೆ ಅನುಕೂಲಕ ವಾತಾವರಣ ನಿರ್ಮಿಸಿ ಸುಶಿಕ್ಷಿತರನ್ನಾಗಿಸಿದೆ. ರಾತ್ರಿ ಶಾಲೆ ಓದಿದವರೇ ಇಂದು ಶ್ರೇಷ್ಠ ಸಾಲಿಗೆ ಸೇರಿ ವಿಶ್ವದಾದ್ಯಂತ ನೆಲೆಯಾಗಿ ಉತ್ತಮ ನಾಗರಿಕರಾಗಿರುವುದು ಅಭಿನಂದನೀಯ. ಮುಂಬಯಿನ ಲೇಖಕ-ಲೇಖಕರಿಯರಿಗೂ ಈ ಶಾಲೆಗಳು ಕಲ್ಪವೃಕ್ಷವಂತಾಗಿವೆ ಎಂದು ಬಿ.ಹೆಚ್ ಕಟ್ಟಿ ತಿಳಿಸಿದರು.

ಹಿರಿಯ ಸಾಹಿತಿ ಡಾ| ದಾಕ್ಷಾಯಿಣಿ ಯಡವಳ್ಳಿ ಅವರು ಮುಂಬಯಿಯಲ್ಲಿ ಕನ್ನಡ ಲೇಖಕಿಯರ ಸಿದ್ಧ ಸಾಧನೆ ಬಗ್ಗೆ ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ಪ್ರಾಯೋಜಕತ್ವದ ದತ್ತಿ ಉಪನ್ಯಾಸವನ್ನು ಹಾಗೂ ಮುಂಬಯಿ ಕನ್ನಡ ರಾತ್ರಿ ಶಾಲೆಗಳ ಸ್ಥಿತಿಗತಿ ವಿಚಾರಿತ ದಿ| ಜಿ.ವಿ ರಂಗಸ್ವಾಮಿ ಪ್ರಾಯೋಜಕತ್ವದ ದತ್ತಿ ಉಪನ್ಯಾಸವನ್ನು ಶಿಕ್ಷಕ, ಕವಿ ಹಾಗೂ ಲೇಖಕ ಮಲ್ಲಿಕಾರ್ಜುನ ಬಡಿಗೇರ ನಡೆಸಿದರು.

ಡಾ| ಸುನೀತಾ ಎಂ.ಶೆಟ್ಟಿ ದತ್ತಿ ಉಪನ್ಯಾಸದ ಬಗ್ಗೆ ತಿಳಿಸಿ ಸದ್ಯದ ಮೊತ್ತದಲ್ಲಿ ಉಪನ್ಯಾಸಕರಿಗೆ ಇಷ್ಟೊಂದು ಕೆಡಿಮೆ ಮೊತ್ತ ನೀಡುವುದು ಸರಿಯಲ್ಲ ಎಂದು ಖಾಲ್ಸಾ ಕಾಲೇಜು ಕನ್ನಡ ಹಳೆ ವಿದ್ಯಾಥಿರ್üಗಳಿಂದ ಹೆಚ್ಚುವರಿ 25,000 ಮೊತ್ತವನ್ನು ನೀಡಿದರು.

ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಸುಖಾಗಮನ ಬಯಸಿದರು. ಪ್ರಾಸ್ತಾವಿಕ ಭಾಷಣಗೈದರು. ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಉಪಸ್ಥಿತರಿದ್ದು ಎಸ್.ಕೆ ಪದ್ಮನಾಭ್ ಪ್ರಾರ್ಥನೆ ಹಾಡಿದರು. ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ.ಪೈ ಅತಿಥಿsಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಧಾಕರ ಸಿ.ಪೂಜಾರಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here