Friday 29th, March 2024
canara news

ಚೆಂಬೂರು ಕರ್ನಾಟಕ ಸಂಘದಿಂದ ಜರುಗಿಸಲ್ಪಟ್ಟ 62ನೇ ವಾರ್ಷಿಕ ಮಹಾಸಭೆ

Published On : 18 Dec 2017   |  Reported By : canaranews network


ಮಕ್ಕಳು ಸದೃಡರಾದಾಗಲೇ ಜೀವನ ಸುಗಮಸಾಧ್ಯ :ಹೆಚ್.ಕೆ ಸುಧಾಕರ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.18: ಜಾಗತೀಕರಣದ ಈ ಕಾಲದಲ್ಲಿ ಸಾಮಾನ್ಯ ಶಿಕ್ಷಣವು ಮಹತ್ವ ಕಳೆದುಕೊಳ್ಳುತ್ತಿದ್ದು ಬಹುತೇಕರು ಉದ್ಯೋಗವಾವಕಾಶ ಪಡೆಯಲು ಉನ್ನತ ಪದವಿ ಪಡೆಯಲಿಪ್ಛಿಸುತ್ತಾರೆ. ಆ ನಿಟ್ಟಿನಲ್ಲಿ ಸಂಘವೂ ಮನವರಿಸಿ ಉನ್ನತ ಶಿಕ್ಷಣ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಸದೃಡರಾದಾಗಲೇ ತಮ್ಮ ಜೀವನ ಸುಗಮವಾಗಿಸಿ ಸಾಗಿಸಲುಸಾಧ್ಯ. ಭವಿಷ್ಯತ್ತಿನ ಮಕ್ಕಳ ಸರ್ವತೋನ್ಮುಖ ಏಳಿಗೆಗೆ ಬದ್ಧರಾಗಿ ಸಂಸ್ಥೆ ಮುನ್ನಡೆಯುತ್ತಿದೆ. ವಿದ್ಯಾಥಿರ್üಗಳ ಭವಿಷ್ಯ ಉಜ್ವಲ ಆಗಬೇಕೆಂಬ ಮನೋಭಾವನೆಯಿಂದ ಇನ್ನೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಇವನ್ನೆಲ್ಲ ಪ್ರಾಮಾಣಿಕವಾಗಿಯೇ ಕೊನೆಗಾಣಿಸುತ್ತೇವೆ. ಕನ್ನಡ ಮಾತೃಭಾಷಾಭಿಮಾನಿಗಳು, ಶಿಕ್ಷಣ ಪ್ರಿಯರು ಮತ್ತು ಸಹೃದಯಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ನಮ್ಮ ಹಲವಾರು ಘನಕಾರ್ಯಗಳು ಪೂರ್ಣಗೊಂಡಿವೆ. ಸಂಸ್ಥೆಯ ಕನಸಿನ ಯೋಜನೆಗಳು ರೂಪುಗೊಂಡಾಗ ಮಹಾನಗರದಲ್ಲಿ ನಮ್ಮ ಸಂಸ್ಥೆಯು ಬೃಹತ್ ಹೆಮ್ಮರವಾಗಿ ಬೆಳೆಯ ಬಹುದು ಎಂದು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ತಿಳಿಸಿದರು.

ಚೆಂಬೂರು ಕರ್ನಾಟಕ ಸಂಘ ತನ್ನ 62ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಚೆಂಬೂರು ವಿದ್ಯಾಸಾಗರ ಸಂಕೀರ್ಣದ ವಿದ್ಯಾಸಾಗರ ಸಂಕೀರ್ಣದಲ್ಲಿ ಜರುಗಿಸಿದ್ದು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನೀಡಿ ಸಭೆಯ ಅಧ್ಯಕ್ಷತೆ ವಹಿಸಿ ಸುಧಾಕರ ಮಾತನಾಡಿದರು.

ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಜೊತೆ ಗೌರವ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್, ಮಾಜಿ ಅಧ್ಯಕ್ಷ ಜಯ ಎನ್.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ರಂಜನ್‍ಕುಮಾರ್ ಆರ್.ಅಮೀನ್ ಸ್ವಾಗತಿಸಿ ಗತವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಶಾಲಾ ವಿದ್ಯಾಥಿರ್üನಿಯರಾದ ಕು| ಸೌಮ್ಯ ಆಚಾರ್ಯ ಮತ್ತು ಕು| ವೃದ್ಧಿ ಆಚಾರ್ಯ ಪ್ರಾರ್ಥನೆಯನ್ನಾಡಿದರು. ನಂತರ 2017-2020ರ ಅವಧಿಗೆ ಕಾರ್ಯಕಾರಿ ಸಮಿತಿಗೆ ಗುಣಾಕರ್ ಹೆಚ್.ಹೆಗ್ಡೆ, ವಿಶ್ವನಾಥ ಎಸ್.ಶೇಣವ, ಮೋಹನ್ ಎಸ್.ಕಾಂಚನ್, ಸುಧಾಕರ್ ಅಂಚನ್, ಅಶೋಕ್ ಸಾಲ್ಯಾನ್, ಚಂದ್ರಶೇಖರ್ ಸುಧಾಕರ್ ಅಂಚನ್ ಸೇರಿದಂತೆ ಆರು ಸದಸ್ಯರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಆಯ್ಕೆ ಪ್ರಕ್ರಿಯೆಗೆ ಚುನಾವನಾಧಿಕಾರಿಗಳಾಗಿ ಉಮೇಶ್ ಕೋಟ್ಯಾನ್, ಅಮಿತ್ ಅಂಚನ್ ಮತ್ತು ವಿಜಯಕುಮಾರ್ ಆರ್.ಅಮೀನ್ ಸಹಕರಿಸಿದ್ದರು.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರನ್ನೊಳಗೊಂಡು, ಸದಸ್ಯರುಗಳಾದ ಯೋಗೇಶ್ ವಿ.ಗುಜರನ್,
ಮಧುಕರ್ ಜಿ.ಬೈಲೂರು, ಸಹ ಸದಸ್ಯರುಗಳಾದ ಸುಧೀರ್ ಪುತ್ರನ್ ಮತ್ತು ಸಂಜೀವ ಎಸ್.ಶೆಟ್ಟಿ ಸೇರಿದಂತೆ ಸದಸ್ಯರನೇಕರು ಸಭೆಯಲ್ಲಿ ಹಾಜರಿದ್ದು ಸಭೆಯ ಆದಿಯಲ್ಲಿ ಸರಸ್ವತಿ ಮಾತೆಗೆ ಪೂಜೆ ನೆರವೇರಿದರು. ಗತ ಸಾಲಿನಲ್ಲಿ ಅಗಲಿದ ಶೀನ ಶೆಟ್ಟಿಗಾರ್, ಬಿ.ಎಸ್ ಕುರ್ಕಾಲ್, ರವಿ ರಾ.ಅಂಚನ್ ಮತ್ತಿತರ ಸದಸ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭಿಕರ ಪರವಾಗಿ ಗುಣಾಕರ್ ಹೆಚ್.ಹೆಗ್ಡೆ, ನ್ಯಾ| ಬಿ.ಮೊೈಯಿದ್ಧೀನ್ ಮುಂಡ್ಕೂರು, ಭಾಸ್ಕರ್ ಕರ್ನಿರೆ, ವಿ.ಎಂ.ಕಾಖಂಡಿ ಮಾತನಾಡಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ರಂಜನ್‍ಕುಮಾರ್ ಆರ್.ಅಮೀನ್ ಅಭಾರ ಮನ್ನಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here