Sunday 11th, May 2025
canara news

ವಿದ್ಯಾರ್ಥಿ ಗಳಿಗಾಗಿ ಚಿತ್ರ ಕಲಾ ಸ್ಫರ್ಧೆ

Published On : 18 Dec 2017   |  Reported By : Rons Bantwal


ಮುಂಬಯಿ, ಡಿ.17: ಹೃದಯವಾಹಿನಿ ಕರ್ನಾಟಕ ಸಂಘಟನೆಯ ಆಶ್ರಯ ದಲ್ಲಿ ಕನ್ನಡ ಚಿಂತನ ಕಾರ್ಯಕ್ರಮದ ಪ್ರಯುಕ್ತ ಪ್ರಾಥಮಿಕ ಶಾಲೆ ಮತ್ತು ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ `ಕರುನಾಡ ಕರಾವಳಿಯ ನಿಸರ್ಗ ಮತ್ತು ಜಾನಪದ ' ಎಂಬ ವಿಷಯದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿಂಚನ (ಪ್ರಥಮ) ಅಕ್ಷಜ್ (ದ್ವಿತೀಯ)ಅನ್ವಿತ್ (ತೃತೀಯ ) ಉನ್ನತ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿಂಚನಾ ಸುಭಾಷ್ (ಪ್ರಥಮ) ಆಯುಷ್ಯ.ವೈ (ದ್ವಿತೀಯ ) ಪ್ರಣವ್ ಆದಿತ್ಯ (ತೃತೀಯ ) ಬಹುಮಾನ ಗಳಿಸಿದರು.

ವಿಜೇತರಿಗೆ ಹೃದಯವಾಹಿನಿ ಕರ್ನಾಟಕ ಮಂಗಳೂರು ಅಧ್ಯಕ್ಷ ಇಂ| ಕೆ.ಪಿ.ಮಂಜುನಾಥ ಸಾಗರ್ ಹಾಗೂ ಅತಿಥಿ ಗಣ್ಯರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು

ಅತಿಥಿಗಳಾದ, ಕನ್ನಡ ಸಂಘ ಬಹರೇನ್ ನ ಪೂರ್ವಾಧ್ಯಕ್ಷ ರಾಜ್ ಕುಮಾರ್. ಬಿ.,ಬೆಂಗಳೂರು ಮೈಕ್ರಾನ್ ಇಲೆಕ್ಟ್ರಿಕಲ್ಸ್ ನ ಯೋಜನಾ ನಿರ್ದೇಶಕ ಡಾ.ನಾಗರಾಜು,ಮಂಗಳೂರು ಎಂ.ಸಿ.ಎಫ್. ಇದರ ಸಹಾಯಕ ಪ್ರಬಂಧಕ ಜಯರಾಂ ಕಾರಂದೂರು, ತುಳು ಅಕಾಡೆಮಿ ಸದಸ್ಯ,ಸಾಹಿತಿ ಲಯನ್ ಚಂದ್ರಶೇಖರ ಬೋಳೂರು ಕೊಟ್ಟಾರು ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನವೀನ್ ಚಂದ್ರ ಶ್ರೀಯಾನ್ ರಿಗೆ ಧಾರ್ಮಿಕ ಕ್ಷೇತ್ರದ ಸೇವೆಗಾಗಿ ಹಾಗೂ ದಕ್ಷಿಣಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಸರಗೋಡು ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಹೃದಯವಾಹಿನಿ ಕರ್ನಾಟಕ ಮಂಗಳೂರು ಇದರ ಅಧ್ಯಕ್ಷ ಇಂ.ಕೆ.ಪಿ.ಮಂಜುನಾಥ ಸಾಗರ್ ಅಧ್ಯಕ್ಷತೆ ವಹಿಸಿದರು. ರಾಕೇಶ್ ಕಾರ್ಯಕ್ರಮ ನಿರೂಪಿಸಿದರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here