Sunday 11th, May 2025
canara news

ನಾಪತ್ತೆಯಾದ ಪ್ರಿಯಾಂಕ ಪ್ರಕರಣ- ಆಕೆಯ ಹೆಸರಲ್ಲಿ ಬಂತು ಪತ್ರ..!

Published On : 19 Dec 2017   |  Reported By : canaranews network


ಮಂಗಳೂರು: ಮೂಡಬಿದಿರೆಯ ದರೆಗುಡ್ಡೆಯಿಂದ ನಾಪತ್ತೆಯಾಗಿದ್ದ ಪ್ರಿಯಾಂಕಾ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಆಕೆಯ ಹೆಸರಿನಲ್ಲಿ ಮನೆಗೊಂದು ಪತ್ರ ತಲುಪಿದೆ. ತನ್ನ ಅಮ್ಮನನ್ನು ಉದ್ದೇಶಿಸಿ ಪ್ರಿಯಾಂಕಾ ಪತ್ರ ಬರೆದಂತಿದ್ದರೂ ಈ ಪತ್ರ ತನ್ನ ಮಗಳದ್ದಲ್ಲ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.

ನಾನು ಇನ್ನೋಳಿಯ ಹೈದರ್ನೊಂದಿಗೆ ಸ್ವ ಇಚ್ಛೆಯಿಂದ ತೆರಳಿದ್ದೇನೆ. ಪ್ರಿಯಕರನೊಂದಿಗೆ ಸುಖವಾಗಿದ್ದೇನೆ. ಕ್ಷಮಿಸಿ, ಹುಡುಕುವ ಪ್ರಯತ್ನ ಮಾಡಬೇಡಿ. ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ಈ ಬಗ್ಗೆ ಜಿಲ್ಲಾ ಹಾಗೂ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳಿಗೂ ಪತ್ರ ಬರೆಯುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ತಮಗೆ ಬಂದಿರುವ ಪತ್ರದ ಬಗ್ಗೆ ಮನೆಯವರು ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಈ ಪತ್ರ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದಂತು ಸುಳ್ಳಲ್ಲ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here