Sunday 11th, May 2025
canara news

ರೋನ್ಸ್ ಬಂಟ್ವಾಳ್ ಪರಿವಾರಕ್ಕೆ ಸೇರಿಕೊಂಡ ಅಳಿಲುಗಳು..!

Published On : 20 Dec 2017


Pics By Rons Bantwal

ಹಕ್ಕಿಗಳು ಇಂದು ಗಣನೀಯ ಪಮಾಣದಲ್ಲಿ ಕಡಿಮೆಯಾಗುತ್ತಿರುವ ಪ್ರಸಕ್ತ ಕಾಲದಲ್ಲೂ ಮಹಾನಗರದಲ್ಲಿನ ಕಾಂಕ್ರೇಟ್ ಕಾಡುಗಳ ಮಧ್ಯೆಯೂ ಪ್ರಾಣಿ, ಪಕ್ಷಿಪ್ರಿಯರ ಪೋಷಣಾ ಮನೋಭಾವದಿಂದ ಲಕ್ಷಾಂತರ ಪ್ರಾಣಿಪಕ್ಷಿಗಳು ಅರಸರಂತೆ ಜೀವಿಸುತ್ತಿವೆ.

 

ಮುಂಬಯಿ ಮಹಾನಗರದ ಅಂಧೇರಿ ಪೂರ್ವದಲ್ಲಿ ವಾಸವಾಗಿರುವ ಪತ್ರಕರ್ತ ರೋನ್ಸ್ ಬಂಟ್ವಾಳ್ ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ಕಿರು ಪುಷ್ಪಉದ್ಯಾನ ರಚಿಸಿ ಗುಬ್ಬಚ್ಚಿ, ಗಿಳಿಗಳು, ಪಾರಿವಾಳ, ಕಾಗೆಗಳು ಎಂದು ನೂರಾರು ಪಕ್ಷಿಗಳ ಪೋಷಣೆಗೈಯುತ್ತಿದ್ದಾರೆ. ಅವುಗಳಿಗೆ ಕ್ಯಾಲ್ಸಿಯಂ ಆಹಾರ, ಜೋಕಾಲಿ, ನೀರು-ಆಹಾರ ಪೊಟ್ಟಣಗಳನ್ನಿರಿಸಿ ಸಾಕುತ್ತಾರೆ. ಇವುಗಳ ಆಸರೆ ಪಡೆದ ಹಕ್ಕಿಗಳು ಸ್ವತಂತ್ರವಾಗಿ ಓಡಾಡಿಕೊಂಡು ಚಿಂವ್-ಚಿಂವ್.... ಕಾ..ಕ್ಹಾ.... ಎನ್ನುತ್ತಾ ವಿವಿಧ ಪ್ರಭೇದದ ಪಕ್ಷಿಗಳು... ತಮ್ಮದೇ ಭಾಷೆಯಲ್ಲಿ ಸಂಗೀತಮಯವಾಗಿ ಓಡಾಡುತ್ತಿರುತ್ತವೆ.

ಮುಂಜಾನೆ ಸುರ್ಯೋದ ಯದಿಂದ ಸಂಜೆ ಸೂರ್ಯೋಸ್ತಮದ ವರೇಗೆ ಇಲ್ಲಿ ಪಕ್ಷಿಗಳು ಮುದ್ದಾಗಿ ಅಡ್ಡಾಡಿ ನರ್ತಿಸುತ್ತಿರುತ್ತಿದ್ದಂತೆಯೇ ಅನಿರೀಕ್ಷಿತವಾಗಿ ಅಳಿಲುವೊಂದು ಬಂಟ್ವಾಳ್ ಅವರ ಪರಿವಾರಕ್ಕೆ ಅತಿಥಿಯಾಗಿ ಆಗಮಿಸಿತ್ತು. ಆ ಅಳಿಲನ್ನೂ ಸದಾ ಗಮನಿಸಿ ಅದಕ್ಕೆ ಬೇಕಾದ ಆಹಾರ ತಿಳಿದು ನೆಲಕಡಲೆ ಸೇರಿದಂತೆ ವಿವಿಧ ಫಲ, ಕಾಯಿಪಲ್ಲೆಗಳನ್ನು ಇಟ್ಟು ಸಾಕುತ್ತಿದ್ದಂತೆಯೇ ಇತ್ತೀಚಿನ ದಿನಗಳಲ್ಲಿ ಈ ಅಳಿಲು ಮತ್ತೊಂದು ಅಳಿಲನ್ನು ಕರೆದುಕೊಂಡು ಬಂದು ಅತ್ತಿತ್ತ ಓಡಾಡಿ, ಆಟವಾಡಿ ನೆಮ್ಮದಿಯಾಗಿ ಕಾಲ ಕಳೆಯುತ್ತಿರುವುದನ್ನು ಕಂಡು ಬಂಟ್ವಾಳ್ ಪರಿವಾರ ಸಂತಸ ಪಡುತ್ತಿದೆ. ಆ ಅಳಿಲುಗಳು ಇಂದು ಹಾಯಾಗಿ ಕಾಲ ಕಳೆದ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನಿಂದ ರೋನ್ಸ್ ಬಂಟ್ವಾಳ್ ಸೆರೆಯಿಡಿದ ಕ್ಷಣಗಳು...... ತಾವೇ ನೋಡಿ ಆನಂದಿಸಿ....




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here