Sunday 11th, May 2025
canara news

ಆಳ್ವಾಸ್ ನಲ್ಲಿ ನಾಲ್ಕನೇ ಬಾರಿಯ ಸಿ.ಎನ್.ಸಿ. ತಾಂತ್ರಿಕ ಕಾರ್ಯಾಗಾರ

Published On : 21 Dec 2017   |  Reported By : Gurudatt Somayaji


ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ ವಿ ಸುರೇಶ್ ರವರು ಕಳೆದ ಬಾರಿಯ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಈ ತರಬೇತಿಯು ಹೇಗೆ ಉದ್ಯೋಗಾವಕಾಶ ಒದಗಿಸಿದೆ ಏಂದು ತಿಳಿಸಿದರು. ಈ ಕಾರ್ಯಾಗಾರದಲ್ಲಿ ಪ್ರೊ. ಹೇಮಂತ್ ಸುವರ್ಣ, ಪ್ರೊ. ಪ್ರಮೋದ್ ಕುಮಾರ್ ಎನ್. ಹಾಗೂ ಪ್ರೊ. ಶ್ರೀನಿವಾಸರವರು ಉತ್ತಮವಾಗಿ ತರಬೇತಿಯನ್ನು ಕೊಟ್ಟಿರುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಬೇಕು ಎಂದು ತಿಳಿಸಿದರು. "ಕೈಗಾರಿಕೆಗಳಲ್ಲಿ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಸಿ.ಎನ್.ಸಿ. ಆಪರೇಟರಗಳ ಅವಶ್ಯಕತೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಹೊರತಾಗಿ ಸಿ.ಎನ್.ಸಿ.ಯೇ ಮೊದಲಾದ ಸಹ ಪಠ್ಯ ವಿಷಯಗಳಲ್ಲೂ ತಮ್ಮ ಜ್ಞಾನವನ್ನು ವಿಸ್ತರಿಸಬೇಕು. ಈ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೋಸ್ಕರ ವಸತಿ ವ್ಯವಸ್ಥೆಯ ಜೊತೆಗೆ ಕನಿಷ್ಠ ಶುಲ್ಕದೊಂದಿಗೆ ಇಂತಹ ತರಬೇತಿಯನ್ನು ನೀಡಲಾಗುತ್ತದೆ" ಎಂದು ತಿಳಿಸಿದರು.

ಸಿವಿಲ್ ಮತ್ತು ಮೆಕ್ಯಾನಿಕಲ್ ಶೈಕ್ಷಣಿಕ ವಿಭಾಗಗಳ ಡೀನ್ ಪ್ರೊ. ದುರ್ಗಾಪ್ರಸಾದ್ ಬಾಳಿಗಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ. ಹೇಮಂತ್ ಸುವರ್ಣ ವಂದನಾರ್ಪಣೆಯನ್ನು ನೆರವೇರಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here