Sunday 11th, May 2025
canara news

ಸಂತ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾಪನ ಸಮಾರಂಭದ ಆರೋಂತ್ಸವ – 6 ಲಕ್ಷ ವೆಚ್ಚದ ಶೌಚಾಲಯದ ಉದ್ಘಾಟನೆ

Published On : 22 Dec 2017   |  Reported By : Bernard J Costa


ಕುಂದಾಪುರ, ಡಿ.21: ಐದು ದಶಕಗಳ ಹಿಂದೆ ಕುಂದಾಪುರದ ಹ್ರದಯ ಭಾಗದಲ್ಲಿ ಜನ್ಮ ತಳೆದ ಸಂತ ಮೇರಿಸ್ ಪ್ರೌಢಶಾಲೆ, ಈ ವರ್ಷ ಸುವರ್ಣ ಮಹೋತ್ಸವನ್ನು ಆಚರಿಸುತ್ತದೆ, ಇಡೀ ವರುಷ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಆಚರಿಸಿ ಇದೀಗ ಸುವರ್ಣ ಮಹೋತ್ಸವ ಸಮಾಪನ ಸಮಾರಂಭದ ಎರಡು ದಿವಸಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಡಿಸೆಂಬರ್ 21 ರ ಬೆಳ್ಳಗೆ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ್ ಧ್ವಜಾ ರೋಹಣವನ್ನು ಮಾಡಿ ಕಾರ್ಯಕ್ರಮದ ಉದ್ಘಾಟೆನೆಯನ್ನು ಮಾಡಿ ‘ಈ ಶಾಲೆ ತಮ್ಮ ನೀತಿ ಶಿಸ್ತು, ಶಿಕ್ಷಣದಿಂದ ಪ್ರತಿಸ್ಠೆಯನ್ನು ಪಡೆದು ಕೊಂಡಿದೆ, ಇಲ್ಲಿ ವಿದ್ಯಾರ್ಥಿಳಿಗೆ ಒಂದು ಕುಟುಂಬದಂತೆ ಬೆರೆತು ಜೀವಿವಿಸಿ, ಜ್ಞಾನಾರ್ಧನೆಯನ್ನು ಪಡೆದುಕೊಳ್ಳುವ ಅವಕಾಶ ಇರುವ ಶಾಲೆ ಈ ಶಾಲೆಯಲ್ಲಿ ತಮ್ಮ ಮಕ್ಕಳು ಕಲಿತಿದ್ದಾಳೆಂದು ಹರ್ಷ ಪಟ್ಟು’ ಶಾಲಾ ಸುವರ್ಣ ಮಹೋತ್ಸವಕ್ಕೆ ಅವರು ಶುಭ ಕೋರಿದರು.

 ಪುರಸಭೆಯ ಆರ್ಥಿಕ ಸಹಾಯದಿಂದ ಶಾಲೆಗೆ ಆರು ಲಕ್ಷದ ವೆಚ್ಚದಿಂದ ಕಟ್ಟಿಕೊಟ್ಟ ಶೌಚಾಲಯವನ್ನು ಶೌಚಾಲಯವನ್ನು ಪುರಸಭಾ ಅಧಿಕಾರಿ ಗೋಪಾಲಕ್ರಷ್ಣ ಶೆಟ್ಟಿ ಉದ್ಘಾಟಿಸಿ ‘ನಾವು ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ, ಪರಿಸರದಲ್ಲಾಗಲಿ ನಾವು ಸ್ವಚ್ಚತೆಯನ್ನು ಕಾಪಾಡಿಕೊಳ್ಳ ಬೇಕು, ಇಂತಹ ಶೌಚಾಲಯಗಳು ಸ್ವಚ್ಚತೆಗೆ ಅಗತ್ಯವಾಗಿ ಬೇಕಾಗಿದೆ, ಅದೂ ಇಂತಹ ಪ್ರತಿಸ್ಠೆಯುಳ್ಳ ಶಾಲೆಗೆ ಶೌಚಾಲಯ ಕಟ್ಟಿಕೊಟ್ಟದು ನಮ್ಮ ಕರ್ತವ್ಯವಾಗಿದೆ, ಈ ಶಾಲೆಯ ಎಸ್ಟೊ ಮಕ್ಕಳು ದೊಡ್ಡ ದೊಡ್ಡ ಹುದ್ದೆ ಪಡೆಯಲು ಕಾರಣಾವಾಗಿದೆ, ಶಾಲೆ ಅಂದರೆ ಮನೆ, ಹಾಗೇ ಒಂದು ಊರು ಕೂಡ, ಹಾಗಾಗಿ ಈ ಶಾಲೆ ಮುಂದೆ ಇನ್ನೂ ಅಭಿವ್ರದ್ದಿ ಹೊಂದಲಿ ಎನ್ನುತ್ತಾ’ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ ಸಂತ ಮೇರಿಸ್ ಸಮೂಹ ಸಂಸ್ಥೆಗಳ ಸಂಚಾಲಕರಾದಾ ರೆ|ಫಾ|ಅನಿಲ್ ಡಿಸೋಜಾ ‘ಈ ಶಾಲೆಯಲ್ಲಿ ಶಿಸ್ತು, ನೀತಿ, ಜ್ಞಾನಾರ್ಧನೆ ಉತ್ತಮ ಮಟ್ಟದಲ್ಲಿ ನೀಡುತ್ತದೆಯೆಂದು ಎಲ್ಲರಿಗೂ ತಿಳಿದ ವಿಚಾರವೇ. ಇಸ್ಟು ವರ್ಷಗಳ ಕಾಲ ಈ ವಿದ್ಯಾ ದೇಗುಲ ಆರಂಭಿಸಿದ ತದ ನಂತರ ಕಟ್ಟಿ ಬೆಳಸುವಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕ್ರತ್ಞಜತೆ ಹೇಳುತ್ತಾ, ಸುವರ್ಣ ಮಹೋತ್ಸವ ಸಮಾಪನ ಸಮಾರಂಭದ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಹಾರೈಸಿದರು. ಸಮೂಹ ಸಂಪನ್ಮೂಲ ವ್ಯೆಕ್ತಿ ಶಂಕರ ಶೆಟ್ಟಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಆರ್ಥಿಕ ಸಮಿತಿಯ ಅಧ್ಯಕ್ಷೆ ಸಿಸಿಲಿಯಾ ಕೊಟ್ಯ್ಯಾನ್, ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಬಹುಮಾನ ವಿತರಿಸಿದರು. ಸಂತ ಮೇರಿಸ್ ಸಮೂಹ ಸಂಸ್ಥೆಗಳ ಮುಖ್ಯಸ್ತರಾದ, ರೆ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್, ಸಿಸ್ಟರ್ ಜೊಯ್ಸ್‍ಲಿನ್, ಡೋರಾ ಸುವಾರಿಸ್, ಶೈಲಾ ಆಲ್ಮೇಡಾ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲೂಯಿಸ್ ಜೆ.ಫೆರ್ನಾಂಡಿಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಶಾಲಾ ನಾಯಕಿ ಸ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಛೇತನಾ ಸ್ವಾಗತಿಸಿದರು, ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಭಾಸ್ಕರ ಗಾಣಿಗ, ಪ್ರೀತಿ ಪಾಯ್ಸ್, ಅಸುಂಪ್ತಾ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟರು, ಶಿಕ್ಷಕಿ ಸ್ಮಿತಾ ಧನ್ಯವಾದಗಳನ್ನು ಅರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here