Sunday 11th, May 2025
canara news

ಪ್ರತಿಯೊಬ್ಬನಲ್ಲೂ ತನ್ನ ಪ್ರತಿಬಿಂಬ ನೋಡುವ ಮನೋಭಾವ ಬದುಕಿನ ಯಶಸ್ವಿಗೆ ಕಾರಣ-ಕುಂಬೋಳ್ ತಂಙಳ್

Published On : 22 Dec 2017   |  Reported By : Rons Bantwal


ಕುಂಬಳೆ: ಪ್ರತಿಯೊಬ್ಬನ ಅಂತರ್ಯದಲ್ಲಿರುವ ಮಾನವಿಯತೆ, ವಿಶಾಲ ಹೃದಯ ಶ್ರೀಮಂತಿಕೆಯನ್ನು ತೋರ್ಪಡಿಸುವಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಸಮಾಜದಲ್ಲಿ ಆರ್ತರಿಗೆ ನೀಡುವ ಕೈಲಾಸ ಸಹಾಯ ಸಂಕಪ್ಟದಲ್ಲಿರುವವರಿಗೆ ಮರುಹುಟ್ಟು ಮಾತ್ರವಲ್ಲದೆ ಇತರರಿಗೆ ಮಾಡಿತೋರಿಸಬಹುದಾದ ನೈಜ ಸೇವೆ ಎಂದು ಹಿರಿಯ ಧಾರ್ಮಿಕ ಮುಖಂಡ ಕುಂಬೋಳ್ ಸಯ್ಯಿದ್ ಮೊಹಮ್ಮದ್ ಶಮೀಮ್ ತಂಙಳ್ ಶ್ಲಾಘನೆ ವ್ಯಕ್ತಪಡಿಸಿದರು.

ಅಪಘಾತದಲ್ಲಿ ನಿಧನರಾದ ಪತ್ರಕರ್ತ ಮುತ್ತಲಿಬ್ ರ ನಿರ್ಗತಿಕ ಕುಟುಂಬಕ್ಕೆ ಕುಂಬಳೆಯ ಪತ್ರಕರ್ತರ ಸಂಘಟನೆ ಫ್ರೆಸ್‍ಪೋರಂ ವತಿಯಿಂದ ನಿರ್ಮಿಸಲಾಗುವ ನೂತನ ಗೃಹಕ್ಕೆ ಭಾನುವಾರ ಸಂಜೆ ಭೂಮಿಪೂಜೆ ನಿರ್ವಹಿಸಿ, ಶುಭಹಾರ್ಯಸಿ ಅವರು ಮಾತನಾಡಿದರು.

ಪ್ರತಿಯೊಬ್ಬನಲ್ಲೂ ತನ್ನ ಪ್ರತಿಬಿಂಬವನ್ನು ಕಾಣುವ ಮನೋಭಾವ ಬದುಕಲ್ಲಿ ಯಶಸ್ವಿಗೆ ಕಾರಣವಾಗುತ್ತದೆ ಎಂದು ತಿಳಿಸಿದ ಅವರು ಸಾಮಾಜಿಕ ಪರಿವರ್ತನೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಪತ್ರಕರ್ತರು ಅನುಭವಿಸುತ್ತಿರುವ ಸಂಕಷ್ಟಗಳು ಸಮಾಜದಲ್ಲಿ ಯಾರ ಕಣ್ಣಿಗೂ ಭಾರದಿರುವುದು ದುರ್ದೈವಕರ ಎಂದು ತಿಳಿಸಿದರು. ಸಹವರ್ತಿಗಳು, ಅವರ ಕುಟುಂಬ ಅನುಭವಿಸುವ ಸಂಕಷ್ಟಗಳಿಗೆ ಧ್ವನಿಯಾಗಿ ಪತ್ರಕರ್ತರ ಸಂಘಟನೆ ನೆರವು ನೀಡಲು ಮುಂದೆ ಬಂದಿರುವುದು ಇತರೆಡೆಗಳಿಗೆ ಉತ್ತಮ ಮಾರ್ಗದರ್ಶಿ ಎಂದು ಅವರು ಶ್ಲಾಘಿಸಿದರು.

ಕುಂಬಳೆ ಪ್ರೆಸ್‍ಪೋರಂ ಅಧ್ಯಕ್ಷ ಸುರೇಂದ್ರನ್ ಕೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಲತೀಫ್ ಕುಂಬಳೆ, ಕೆ.ಎಂ.ಎ.ಸತ್ತಾರ್, ಇಬ್ರಾಹಿಂ ಐ, ಮೊಹಮ್ಮದ್ ರಫೀಕ್, ಧನರಾಜ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here