Sunday 11th, May 2025
canara news

ಡಿ.25: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಸಂಸ್ಥೆಯ ದ್ವಿದಶಕ ವಾರ್ಷಿಕೋತ್ಸವ

Published On : 22 Dec 2017   |  Reported By : Rons Bantwal


ಸಾಂಸ್ಕೃತಿಕ-ಸನ್ಮಾನ ಕಾರ್ಯಕ್ರಮ `ಜಿನ ಭಕ್ತೆ ಆಗ್ನಿಲೆ' ಯಕ್ಷಗಾನ ಪ್ರದರ್ಶನ

ಮುಂಬಯಿ, ಡಿ.21: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಸಂಸ್ಥೆ ತನ್ನ ದ್ವಿದಶಕ ವಾರ್ಷಿಕೋತ್ಸವವು ಇದೇ ಡಿ.25ರ ಸೋಮವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇ ಶನ್‍ನ ಸಭಾಗೃಹÀದಲ್ಲಿ ಅದ್ದೂರಿ ಯಾಗಿ ಸಂಘದ ಅಧ್ಯಕ್ಷ ಬಿ.ಮುನಿರಾಜ್ ಜೈನ್ ಅಜಿಲ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಂಭ್ರಮಿಸಲಿದೆ ಎಂದು ಉಪಾಧ್ಯಕ್ಷ ಉದಯ ಅಥಿüಕಾರಿ ತಿಳಿಸಿದ್ದಾರೆ.

        

Mahaveer B.Jain                                M J Praveen Bhat                            Dinesh K. Kargal

            

 B. Muniraj Jain                             Pawanaojay Ballal

ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬರೋಡಾ ಅಲ್ಲಿನ ಜಿಎಸ್‍ಟಿ ವಿಭಾಗದ ಮೇಲ್ವಿಚಾರಕ (ಸೂಪರಿನ್ಟೆಂಡೆಂಟ್) ಮಹಾವೀರ್ ಬಿ.ಜೈನ್, ಗೌರವ ಅತಿಥಿüಗಳಾಗಿ ಪ್ರಸಿದ್ಧ ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಮತ್ತು ದಿನೇಶ್ ಇಂಜಿನೀಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ದಿನೇಶ್ ಕೆ.ಕರ್ಗಲ್ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಸನತ್‍ಕುಮಾರ್ ಜೈನ್, ನಾಟಕ ರಚನೆಕಾರ ಮತ್ತು ನಿರ್ದೇಶಕ, ನಿವೃತ್ತ ಶಿಕ್ಷಕ ಜಯರಾಜ್ ಎನ್.ಜೈನ್, ನ್ಯೂ ಪನ್ವೇಲ್‍ನ ಪಿಳ್ಳೈ ಶಿಕ್ಷಣ ಸಮೂಹದ ನಿರ್ದೇಶಕಿ ಡಾ| (ಶ್ರೀಮತಿ) ನಿವೇದಿತಾ ಶ್ರೇಯಂಸ್ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾ| ಶ್ರೇಯಸ್ ಆರ್.ಹೆಗ್ಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಕೋಶಾಧಿಕಾರಿ ಪಿ. ಅನಂತರಾಜ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9.00 ಗಂಟೆಗೆ ನಮೋಕರ್ ಮಂತ್ರ ಮತ್ತು ಪ್ರಾರ್ಥನೆ, ಬಳಿಕ ಸಂಘದ ಸದಸ್ಯರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 2.00 ಗಂಟೆಗೆ ಸಭಾಕಾರ್ಯಕ್ರಮ, ಸನ್ಮಾನ 3.30 ಗಂಟೆಗೆ ಸಂಘದ ಕಲಾ ವಿಭಾಗದ ಶ್ರೀ ವೀರ ಯಕ್ಷಕಲಾ ಬಳಗÀದ ಕಲಾವಿದರಿಂದ `ಜಿನ ಭಕ್ತೆ ಆಗ್ನಿಲೆ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಜಯಮಾಲ ಕೋರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ವಿಕ್ರಾಂತ್ ಅಥಿüಕಾರಿ ತಿಳಿಸಿದ್ದಾರೆ.

ಈ 20ನೇ ವಾರ್ಷಿಕ ಉತ್ಸವದಲ್ಲಿ ಸಂಘದ ಎಲ್ಲಾ ಸದಸ್ಯರು, ಜೈನ ಬಂಧುಗಳು, ಶ್ರವಕ ಶ್ರವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಮತ್ತು ಪದಾಧಿಕಾರಿಗಳು ಈ ಮೂಲಕ ವಿನಂತಿಸಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here