Sunday 11th, May 2025
canara news

‘ದೇವರು ಮತ್ತು ನಮ್ಮ ನಡುವಿನ ಅಂತರ ಕಡಿಮೆಯಾಯ್ತು’ ಕುಂದಾಪುರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮದ ಆಚರಣೆ

Published On : 25 Dec 2017   |  Reported By : Bernard D'Costa


ಕುಂದಾಪುರ, ಡಿ,25: ‘ಯೇಸುವಿನ ರೂಪದಲ್ಲಿ ದೇವರು ಈ ಪ್ರಪಂಚದಲ್ಲಿ ಜನಿಸಿ ದೇವರು ಮತ್ತು ಮನುಷ್ಯರ ಅಂತರ ಬಹಳ ಕಡಿಮೆಯಾಯ್ತು, ಚಾರಿತ್ರಿಕ ಹಿನ್ನೆಲೆಯುಳ್ಳ ಕುಂದಾಪುರದ ಹೋಲಿ ರೋಜರಿ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬದ ಬಲಿಪೂಜೆಯನ್ನು ಅರ್ಪಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ‘ದೇವ ಕುಮಾರ ಯೇಸು ಮನುಷ್ಯನ ರೂಪದಲ್ಲಿ ಕುಂದಾಪುರ ವಲಯದ ಪ್ರಧಾನರಾದ ವಂ|ಅನಿಲ್ ಡಿಸೋಜಾರವರು ಸಂದೇಶ ನೀಡಿದರು. ‘ದೇವ ಕುಮಾರ ಯೇಸು ಮನುಷ್ಯನ ರೂಪದಲ್ಲಿ ಈ ಪ್ರಪಂಚದಲ್ಲಿ ಜನಿಸಿ, ತನ್ನ ವಿನಯವನ್ನು ತೊರ್ಪಡಿಸಿ, ದೇವರ ಪ್ರೀತಿ, ಗೆಳೆತನ ನೀಡಲು, ನಮ್ಮ ಕಷ್ಟಕ್ಕೆ ನೆರವಾಗಲು, ದಯೆ ನೀಡಲು, ನಮ್ಮನ್ನು ಸನ್ಮಾರ್ಗದಲ್ಲಿ ನೆಡೆಸಿ, ಸ್ವರ್ಗರಾಜ್ಯದ ಹಾದಿಯನ್ನು ತೋರಿಸಲು ಬಂದ ಹಬ್ಬವೆ ಕ್ರಿಸ್ಮಸ್, ಹಾಗಾಗಿ ಯೇಸುವು ಬರೆ ಗೋದಲಿಯಲ್ಲಿ ಹುಟ್ಟುವುದನ್ನು ಸಂಭ್ರಮಿಸುದಲ್ಲಾ, ಸನ್ಮಾರ್ಗದಲ್ಲಿ ನೆಡೆದು ನಮ್ಮ ನಮ್ಮ ಹ್ರದಯದಲ್ಲಿ ಹುಟ್ಟುವುದಕ್ಕೆ ಆಸ್ಪದ ನೀಡೊಣ’ ಎಂದು ಅವರು ನುಡಿದರು.

 

 

ಧರ್ಮಗುರು ವ| ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ವ|ಸಂದೀಪ್ ಜೆರಾಲ್ಡ್ ಕ್ರಿಸ್ಮಸ್ ಸಂಭ್ರಮದ ದಿವ್ಯ ಬಲಿ ಪೂಜೆಯಲ್ಲಿ ಪಾಲುಗೊಂಡರು. ಪೂಜೆಯ ಮೊದಲು ಗಾಯನ ಮಂಡಳಿ ಕೆರೊಲ್ ಗೀತೆಗಳನ್ನು ಹಾಡಿತು.

ಪೂಜೆಯ ನಂತರ ಐ.ಸಿ.ಯ.ಎಮ್ ಸಂಘಟನೆ ಚರ್ಚ್ ವಾಡೆಗಳಲ್ಲಿನ ಅದ್ರಷ್ಟ ಕುಟುಂಬಗಳ ಡ್ರಾ ಮತ್ತು ಹೌಸಿ ಹೌಸಿ ಅಟದ ಕಾರ್ಯಕ್ರಮ ಎರ್ಪಡಿಸಿತ್ತು. ಈ ಕ್ರಿಸ್ಮಸ್ ಹಬ್ಬದ ಬಲಿ ಪೂಜೆಯಲ್ಲಿ ಹಲವಾರು ಧರ್ಮ ಭಗಿನಿಯರು ಮತ್ತು ಭಕ್ತಾದಿಗಳು ಪಾಲ್ಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here