ಮಂಗಳೂರು: ಮಂಗಳೂರಿನೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕ್ರಿಸ್ಮಸ್ ಪ್ರಯುಕ್ತ ಚರ್ಚ್ ಗಳಲ್ಲಿ ಬಲಿಪೂಜೆ, ವಿಶೇಷ ಪ್ರಾರ್ಥನೆಗಳು ನಡೆಯಿತು. ಪ್ರತಿಯೊಂದು ಮನೆಮನೆಗಳಲ್ಲಿ ಕ್ರೈಸ್ತ ಬಾಂಧವರು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಗೋದಲಿ ನಿರ್ಮಾಣ, ನಕ್ಷತ್ರ ದೀಪಗಳ ಅಲಂಕಾರ ಕ್ರಿಸ್ಮಸ್ ಹಬ್ಬಕ್ಕೆ ಇನ್ನಷ್ಠು ಮೆರುಗು ನೀಡಿತ್ತು.