Sunday 11th, May 2025
canara news

15ನೇ ವಾರ್ಷಿಕೋತ್ಸವ ಸಂಭ್ರಮಿಸಿದ ತೀಯಾ ಸಮಾಜದ ಮುಖವಾಣಿ `ತೀಯಾ ಬೆಳಕು'

Published On : 26 Dec 2017   |  Reported By : Rons Bantwal


ಪತ್ರಿಕೆಗಳು ಸಮನ್ವಯ ಸಾಧಿಸುವ ಶಕ್ತಿಗಳಾಗಿವೆ : ಡಾ| ಅಂಕುಷ್ ಗುಜರನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.26: ಪತ್ರಿಕೆಗಳು ಸಮನ್ವಯ ಸಾಧಿಸುವ ಶಕ್ತಿಗಳಾಗಿವೆ. ಆದುದರಿಂದ ಮಾಧ್ಯಮಗಳಿಂದ ಸಾಮಾಜಿಕ ವಿಕಾಸನ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೊಸ ಅವಿಷ್ಕಾರಗಳಿಗೆ ಹೆಚ್ಚು ಒತ್ತು ನೀಡಿ ಸಮುದಾಯವನ್ನು ಬೆಳೆಸುವಲ್ಲಿ ತೀಯಾ ಬೆಳಕು ಪೂರಕವಾಗಲಿ. ನನ್ನ ಸಮಾಜದವರಿಗೆ ನನ್ನ ಕೈಯಿಂದಾಗುವ ಸಹಾಯ ನೀಡುತ್ತೇನೆ.ತೀಯಾ ಸಮಾಜ ಇನ್ನಷ್ಟು ಬೆಳಯಲಿ ಎಂದು ದೆಹಲಿಯ ಸತ್ಯವಾದಿ ರಾಜ ಹರಿಶ್ಚಂದ್ರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಅಂಕುಷ್ ಗುಜರನ್ ತಿಳಿಸಿದರು.

ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸಂಜೆ ತೀಯಾ ಸಮಾಜ ಮುಂಬಯಿ ತನ್ನ ಮುಖವಾಣಿ `ತೀಯಾ ಬೆಳಕು' ಸಂಭ್ರಮಿಸಿದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಡಾ| ಅಂಕುಷ್ ಮಾತನಾಡಿದರು.

ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡÀ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ತೀಯಾ ಸಮಾಜ ಮುಂಬಯಿ ಇದರ ವಿಶ್ವಸ್ಥ ಕಾರ್ಯಧ್ಯಕ್ಷ ರೋಹಿದಾಸ್ ಎಸ್. ಬಂಗೇರ, ವೈದ್ಯಾಧಿಕಾರಿ ಡಾ| ದಯಾನಂದ ಕೆ.ಕುಂಬ್ಲ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಸಸಿಹಿತ್ಲು ಭಗವತೀ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಪಾಲನ್, ಹೊಟೇಲು ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ಸಂಸ್ಥೆಯ ಗೌ| ಕೋಶಾಧಿಕಾರಿ ಹಾಗೂ ಜೊತೆ ಸಂಪಾದಕ, ರಮೇಶ್ ಎನ್.ಉಳ್ಳಾಲ್ ಉಪಸ್ಥಿತರಿದ್ದು `ತೀಯಾ ಬೆಳಕು ವಾರ್ಷಿಕ ಕ್ಯಾಲೆಂಡರ್' ಮತ್ತು `ತೀಯಾ ಬೆಳಕು' ವಿಶೇಷ ಸಂಚಿಕೆ ಬಿಡುಗಡೆ ಬಿಡುಗಡೆ ಗೊಳಿಸಿದರು.

ಸಮಾರಂಭದಲ್ಲಿ ತೀಯಾ ಸಮಾಜದ ಮಾಸಿಕದ ಮಾಜಿ ಸಂಪಾದಕರುಗಳಾದ ರೂಪೇಶ್ ವೈ.ರಾವ್, ವಿಶ್ವನಾಥ್ ಯು.ಕೆ., ಉಮೇಶ್ ಬಿ.ಮಂಜೇಶ್ವರ, ಈಶ್ವರ್ ಎಂ.ಐಲ್ ಮತ್ತು ತೀಯಾ ಬೆಳಕು ಮಾಸಿಕದ ಪ್ರಸಕ್ತ ಸಂಪಾದಕ ಶ್ರೀಧರ್ ಎಸ್.ಸುವರ್ಣ ಅವರನ್ನು ಅತಿಥಿüಗಳು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಪುಷ್ಫಗುಪ್ಛ, ಸ್ಮರಣಿಕೆಯನ್ನಿತ್ತು ಸನ್ಮಾನಿಸಿ ಅಭಿನಂದಿಸಿದರು.

ಇದೇ ಶುಭಾವಸರದಲ್ಲಿ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಸುಧಾಕರ ದೊಡ್ದ ಅತಾರ್, ಉಳ್ಳಾಲ ಚೀರುಂಭ ಶ್ರೀ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನಾವರ್, ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಸಂತೋಷ್ ದಂಡ ಅತಾರ್ ಮತ್ತು ಪುರುಷೋತ್ತಮ ಗುರಿಕಾರ, ನಗರದ ಪತ್ರಕರ್ತರಾದ ಹೇಮ್‍ರಾಜ್ ಕರ್ಕೇರ (ಮುಂಬಯಿ ನ್ಯೂಸ್), ಅಶೋಕ್ ಎಸ್.ಸುವರ್ಣ (ಮೊಗವೀರ), ಕರುಣಾಕರ್ ವಿ.ಶೆಟ್ಟಿ (ನಮ್ಮ ಟಿವಿ), ಆರತಿ ಪ್ರಿಂಟರ್ಸ್‍ನ ಮಾಲಿಕ ಜಯರಾಜ್ ಪಿ.ಸಾಲ್ಯಾನ್ ಅವರನ್ನು ಅತಿಥಿüಗಳು ಗೌರವಿಸಿ ಶುಭಾರೈಸಿದರು.

ಡಾ| ಕುಂಬ್ಳೆ ಮಾತನಾಡಿ ಹಲವಾರು ವರ್ಷಗಳಿಂದ ತೀಯಾ ಸಮುದಾಯದ ಈ ಪತ್ರಿಕೆ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದೆ. ತೀಯಾ ಬೆಳಕು ಪತ್ರಿಕೆಗೆ 15ರ ಸಂಭ್ರಮ ಅಭಿನಂದನೀಯ ಎಂದರು.

ತೀಯಾ ಬೆಳಕು ಪತ್ರಿಕೆ ಬಹಳ ಸುಂದರವಾದ ಪತ್ರಿಕೆ. ಈ ಪತ್ರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳಗಲಿ ಜೊತೆಗೆ ತೀಯಾ ಸಮಾಜವನ್ನೂ ಇನ್ನಷ್ಟು ಬೆಳಗಿಸಲಿಲಿ ಎಂದು ನಿತ್ಯಾನಂದ ಕೋಟ್ಯಾನ್ ಶುಭಾರೈಸಿದರು.

ಚಂದ್ರಶೇಖರ್ ಬೆಳ್ಚಡ ಅಧ್ಯಕ್ಷೀಯ ನುಡಿಗಳನ್ನಾಡಿ ಇವತ್ತು ನಮಗೆಲ್ಲರಿಗೂ ತೀಯಾ ಬೆಳಕಿನ ಸಂಭ್ರಮ. ಈ ಪತ್ರಿಕೆಯಿಂದ ನಮ್ಮ ಸಮಾಜದ ವಿಚಾರಗಳು ಅನಾವರಣ ಗೊಳ್ಳುತ್ತಿವೆ. ನಮಗೆ ಎಲ್ಲಾ ಕಡೆಯ ವರದಿಗಳು ದೊರೆಯುತ್ತವೆ. ತೀಯ ಬಂಧುಗಳು ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸುವ ಜೊತೆಗೆ ಪತ್ರಿಕೆಯನ್ನೂ ಬೆಳಗಿಸೋಣ ಎಂದರು.

ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ ಅಧ್ಯಕ್ಷತೆ ಹಾಗೂ ಸಹ ಸಂಪಾದಕ ಕೃಷ್ಣಪ್ಪ ಬಿಲ್ಲವ ಉಪಸ್ಥಿತಿ ಹಾಗೂ ಯಲ್ಲಿ ವಾರ್ಷಿಕೋತ್ಸವ ನಿಮಿತ್ತ `ಪತ್ರಿಕಾ ಉದ್ಯಮ ವರ್ತಮಾನ ಸ್ಥಿತಿಗತಿ' ಬಗ್ಗೆ ವಿಚಾರ ಗೋಷ್ಠಿ ನಡೆಸಲಾಗಿದ್ದು ನಗರದಲ್ಲಿನ ಹಿರಿಯ ಪತ್ರಕರ್ತರುಗಳಾದ ಡಾ| ಈಶ್ವರ ಅಲೆವೂರು, ದಯಾಸಾಗರ್ ಚೌಟ, ಶ್ರೀನಿವಾಸ ಜೋಕಟ್ಟೆ ಮತ್ತು ವಾಮನ್ ಇಡ್ಯಾ ಮಾಹಿತಿ ನೀಡಿದರು. ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್ ಉಪಸ್ಥಿತಿಯಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕವಿಗೋಷ್ಠಿಯಲ್ಲಿ ಡಾ| ವಾಣಿ ಉಚ್ಚಿಲ್ಕರ್, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಪೆÇಳಲಿ ಮಹೇಶ್ ಹೆಗ್ಡೆ, ಶಾರದಾ ಅಂಚನ್ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಹೇಮಾ ಸದಾನಂದ ಅವಿೂನ್ ಕವಿಗೋಷ್ಠಿ ನಡೆಸಿದರು.

ಕಾರ್ಯಕ್ರಮದಲ್ಲಿ ತೀಯಾ ಸಮಾಜ ಸಂಸ್ಥೆಯ ವಿಶ್ವಸ್ಥ ಸದಸ್ಯ ಜಯ ಸಿ.ಸಾಲ್ಯಾನ್, ಪೂರ್ವ ವಲಯದ ಕಾರ್ಯಧ್ಯಕ್ಷ ಮೋಹನ್ ಬಿ.ಎಂ, ಪಶ್ಚಿಮ ವಲಯದ ಕಾರ್ಯಧ್ಯಕ್ಷ ಬಾಬು ಕೆ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಸಮಾಜದ ಮುಂದಾಳುಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಆಚಾರಪಟ್ಟ ಗುರಿಕಾರರು ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆಯನ್ನಿತ್ತು ಅನುಗ್ರಹಿಸಿದರು. ಶ್ರೀಧರ್ ಎಸ್.ಸುವರ್ಣ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜೊತೆ ಕಾರ್ಯದರ್ಶಿ ನ್ಯಾ| ನಾರಾಯಣ ಬಿ.ಸುವ ರ್ಣ, ಆರೋಗ್ಯನಿಧಿ ಸಮಿತಿ ಕಾರ್ಯಾಧ್ಯಕ್ಷೆ ದಿವ್ಯಾ ರಾಮಚಂದ್ರ ಕೋಟ್ಯಾನ್, ಜೊತೆ ಸಂಪಾದಕ ಸುರೇಶ್ ಬಂಗೇರ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ದಿವಿಜಾ ಚಂದ್ರಶೇಖರ್ ಅತಿಥಿüಗಳನ್ನು ಪರಿಚಯಿಸಿದರು. ಸಂಸ್ಥೆಯ ಗೌ| ಪ್ರ| ಕಾರ್ಯದರ್ಶಿ ಈಶ್ವರ್ ಎಂ.ಐಲ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಕು| ನಿಖಿತಾ ಎಸ್.ಅವಿೂನ್ ಮತ್ತು ಬಳಗದ ಸ್ವಾಗತ ನೃತ್ಯದೊಂದಿಗೆ ಆದಿಗೊಂಡ ವಾರ್ಷಿಕೋತ್ಸವದಲ್ಲಿ ಅಸಲ್ಫಾದ ಗೀತಾಂಬಿಕಾ ದೇವಸ್ಥಾನದ ನೃತ್ಯಾಭಿನಯ ಕಲಾಕ್ಷೇತ್ರ ತಂಡವು ಸಾಂಸ್ಕೃತಿಕ ನೃತ್ಯ ಪ್ರಸ್ತುತ ಪಡಿಸಿದರು. ಅಭಿನಯ ಮಂಟಪ ಮುಂಬಯಿ ಕಲಾವಿದರು `ಪುರ್ಸೊತ್ತಿಜ್ಜಿ' ತುಳು ಹಾಸ್ಯ ನಾಟಕ ಪ್ರದರ್ಶಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here