ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆದ ಬಳಿಕ ಪ್ರಕ್ಷುಬ್ದಗೊಂಡಿದ್ದ ಪರಿಸ್ಥಿತಿ ಇದೀಗ ಶಾಂತವಾಗಿದೆ.
ಅಂಗಡಿ ಮುಂಗಟ್ಟು ತೆರೆದಿದ್ದು ಕಾರ್ಯಾಚರಿಸುತ್ತಿದೆ.ಆರೋಪಿಗಳ ಸುಳಿವು ಪತ್ತೆಯಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಡಿ 27 ರ ಮಂಗಳವಾರ ರಾತ್ರಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿದ್ದರು.ಈ ಘಟನೆಯಲ್ಲಿ ಕೇಶವ ವೀರಕಂಬ ಎಂಬಾತ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ .ಗಾಯಗೊಂಡ ಕೇಶವ ಜಲೀಲ್ ಕೊರೋಪಾಡಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಈತ ಒಂದು ತಿಂಗಳ ಹಿಂದೆಯಷ್ಟೇ ಮೇಲ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಈ ಘಟನೆಯ ಬಳಿಕ ಕಲ್ಲಡ್ಕದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕಿಡಿಗೇಡಿಗಳು ಸರಕಾರಿ ಬಸ್ ಗಳಿಗೆ ಕಲ್ಲು ತೂರಾಟ ಮಾಡಿದ್ದರು .ಆದರೆ ಇದೀಗ ಕಲ್ಲಡ್ಕದಲ್ಲಿ ಪರಿಸ್ಥಿತಿ ಶಾಂತವಾಗಿದೆ .ಅಂಗಡಿ ಮುಂಗಟ್ಟು ತೆರೆದಿದ್ದು ಜನ ಸಂಚಾರ ಎಂದಿನಂತಿದೆ.ವಾಹನ ಸಂಚಾರ ಮಾಮೂಲಿನಂತಿದೆ.ಕಲ್ಲಡ್ಕದಲ್ಲಿ ಬಿಗಿ ಪೊಲೀಸ್ ಮಾಡಲಾಗಿದೆ.ತನಿಖೆಗೆ 4 ಪೊಲೀಸ್ ತಂಡ ರಚಿಸಲಾಗಿದೆ.ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ .