Saturday 5th, July 2025
canara news

ಬ್ರಹ್ಮಶ್ರೀ ನಾರಾಯಣಾ ಗುರು ಮಂದಿರ- ನಾಸಿಕ್

Published On : 29 Dec 2017   |  Reported By : Rons Bantwal


ಮೂರ್ತಿ ಪ್ರಾಣ ಪ್ರತಿಷ್ಥಾಪನಾ ವಾರ್ಷಿಕೋತ್ಸವ ಆಚರಣೆ

ಮುಂಬಯಿ ಡಿ.29: : ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಿಪಿ ಫಾರ್ಮ್ ಗಿರ್ನಾರ, ನಾಸಿಕ್ ಇದರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ 5ನೇ ವಾರ್ಷಿಕ ಸಮಾರಂಭವು ಇತ್ತೀಚಿಗೆ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಹಾಗಣಪತಿ ಹೋಮ, ಮೂರ್ತಿ ಅಭಿಷೇಕ, ಹಾಗೂ ಮಹಾಪೂಜೆಯ ವಿಧಿ ವಿಧಾನಗಳನ್ನು ಮಂಗಳೂರಿನ ಶ್ರೀಯುತ ಲೋಕೇಶ್ ಕಾಂತಿ ಮತ್ತು ತಂಡದವರು ಅಚ್ಚುಕಟ್ಟಾಗಿ ನೆರವೇರಿಸಿದರು. ಎಸ್‍ಎಸ್‍ಜಿ ಟ್ರಸ್ಟ್ ವಡಾಲ, ನಾಸಿಕ್ ಇವರಿಂದ ಗುರು ಆರಾಧನೆ, ದುರ್ಗಾ ಪರಮೇಶ್ವರಿ ಭಜನಾ ಮಂಡಳಿ, ಸಾತ್‍ಪುರ ಹಾಗೂ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು.

ಯುವ ವಾಹಿನಿ ಕೇಂದ್ರ ಸಮಿತಿ, ಮಂಗಳೂರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರನ್ನು ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು ಹಾಗೂ ಅಧ್ಯಕ್ಷರು ಗಂಗಾಧರ ಅಮೀನ್ ಶಾಲು ಹೊದಿಸಿ, ಹೂಗುಚ್ಚ ನೀಡಿ ಸತ್ಕರಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಯಶವಂತ ಪೂಜಾರಿ ಹಾಗೂ ಉಪಾಧ್ಯಕ್ಷ ನರೇಶ್ ಕುಮಾರ್, ಸಸಿಹಿತ್ಲು ಇವರು ಸಮಾರಂಭದಲ್ಲಿ ಮಾತನಾಡಿ, ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಸಮಾಜಕ್ಕಾಗಿ ನಿಸ್ವಾರ್ಥತೆಯಿಂದ ದುಡಿಯುವ ಅಗತ್ಯವಿದೆ ಎಂದು ತಿಳಿ ಹೇಳಿದರು.

ಅಪರಾಹ್ನ ಮಹಾ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಅನ್ನ ಪ್ರಸಾದ ಸಂತರ್ಪಣೆ ಮಾಡಲಾಯಿತು. ಸಮಾರಂಭದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ನುರಿತ ವೈಧ್ಯರ ತಂಡದಿಂದ ಇಓಖಿ ಹಾಗೂ ಸ್ತ್ರೀರೋಗ ಕಾರ್ಯಕ್ರಮವನ್ನು ಉಚಿತವಾಗಿ ಏರ್ಪಡಿಸಲಾಗಿತ್ತು. ಸೇರಿದ ಭಕ್ತಾಭಿಮಾನಿಗಳು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದರು ಹಾಗೂ ಇದರ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದರು.

ಕಾರ್ಯಕ್ರಮದ ಯಶಸ್ವಿಗೆ ಜನಾರ್ಧನ ಪೂಜಾರಿ, ರಘು ಅಮೀನ್, ಬಾಲಚಂದ್ರ ಕೋಟ್ಯಾನ್, ದಾಮೋದರ ಪೂಜಾರಿ, ಭಾಸ್ಕರ ಪೂಜಾರಿ, ರಮೇಶ್ ಕರ್ಕೆರ, ರತನ್ ಕುಮಾರ್, ಮೋಹನ್ ಕರ್ಕೆರ, ಲಕ್ಷ್ಮಣ್ ಅಮೀನ್, ಮಹಾಬಲ ಪೂಜಾರಿ, ರಾಮಕೃಷ್ಣ ಪೂಜಾರಿ, ಭಾಸ್ಕರ ಸಾಲ್ಯಾನ್, ಗಿರಿಧರ ಅಮೀನ್, ನಾಗೇಶ್ ಪೂಜಾರಿ, ಉದಯ ಪೂಜಾರಿ, ನಿತಿನ್ ಪೂಜಾರಿ, ಕುಶಲ ಪೂಜಾರಿ, ದೀಪಕ್ ಸಾಲ್ಯಾನ್, ಗೋಪಾಲ ಪೂಜಾರಿ, ಅನಿಲ್ ಪೂಜಾರಿ, ಶ್ರೀನಿವಾಸ್ ಕೊಟ್ಯಾನ್ ಹಾಗೂ ಮಹಿಳಾ ವಿಭಾಗದ ಸಮಸ್ಯೆಯರು ಶ್ರಮಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here