Tuesday 5th, August 2025
canara news

ಐಕಳ : ಕೊಲೆ ದರೋಡೆ?

Published On : 31 Dec 2017   |  Reported By : Roshan Kinnigoli


ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ, ಕೊಲೆಗೀಡಾದ ಮಹಿಳೆಯನ್ನು ಐಕಳ ಬಿರ್ಕಿಲ್ ಮನೆ ವಸಂತಿ ಶೆಟ್ಟಿ (58) ಎಂದು ಗುರುತಿಸಲಾಗಿದೆ. ವಸಂತಿ ಶೆಟ್ಟಿ ಅವರ ಕುತ್ತಿಗೆ ಮತ್ತು ಕೈಯಲ್ಲಿರುವ ಬಂಗಾರದ ಅಭರಣಗಳನ್ನು ಕೊಲೆಗಡುಕರು ದೋಚಿದ್ದಾರೆ. ಇನ್ನೊಂದು ಕೊಣೆಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ, ಮೃತ ದೇಹದ ಕುತ್ತಿಗೆ ಬಾಗದಲ್ಲಿ ಆಳವಾದ ಗಾಯವಾಗಿದ್ದು ಮನೆಯ ಮುಂಭಾಗದ ಕೋಣೆ ಮತ್ತು ಮನೆಯ ಹೊರಗಡೆಯ ಗೋಡೆ ಮತ್ತು ನೆಲದಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಮನೆಯ ಹೊರ ಬಾಗದಲ್ಲಿ ವಸಂತಿ ಶೆಟ್ಟಿಯ್ತವರ ಮೊಬೈಲ್ ಸಿಕ್ಕಿದೆ, ಮೃತ ದೇಹದ ಸಮೀಪದಲ್ಲೇ ಸೋಪದ ಅಡಿಯಲ್ಲಿ ಸ್ಟೀಲ್ ಚೂರಿ ಬಿದ್ದಿತ್ತು. ಸ್ಥಳಕ್ಕೆ ಆಗಮಿಸಿದ ಶ್ವಾನ ಮನೆಯ ಹಿಂಬಾಗದ ಮೂಲಕ ಮುಂಬಾಗಕ್ಕೆ ಬಂದು, ಅನತಿ ದೂರ ಸಾಗಿ ವಾಪಾಸಾಗಿದೆ.

ಮನೆಯಲ್ಲಿ ವಸಂತಿ ಶೆಟ್ಟಿ ಮತ್ತು ಪತಿ ಸುದಾಮ ಶೆಟ್ಟಿ ಇಬ್ಬರು ವಾಸಿಸುತ್ತಿದ್ದು, ಸುಧಾಮ ಶೆಟ್ಟಿಯವರು ಎಲ್.ಐ.ಸಿ ಏಜೆಂಟ್ ಆಗಿದ್ದು ಪ್ರತೀ ದಿನ ಬೆಳಿಗ್ಗೆ ಹೊರಟವರು ಮದ್ಯಾಹ್ನ ಸುಮಾರು 3 ಗಂಟೆಗೆ ವಾಪಾಗುತ್ತಿದ್ದರು. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಸುಧಾಮ ಶೆಟ್ಟಿಯವರ ಮೊಬೈಗೆ ಪತ್ನಿ ವಸಂತಿಯವರ ಕರೆ ಬಂದಿದ್ದು ಕೂಡಲೇ ಕರೆ ಕಟ್ ಆಗಿದೆ, ಸುಧಾಮ ಶೆಟ್ಟಿ ವಾಪಾಸ್ ಕರೆ ಮಾಡುವಾಗ ಯಾರೂ ಸ್ವೀಕರಿಸದೆ ಇದ್ದ ಕಾರಣ ಕಿನ್ನಿಗೋಳಿಯ ತಮ್ಮ ಗೆಳೆಯರೊಬ್ಬರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ. ಈ ಸಂದರ್ಭ ವಸಂತಿ ಶೆಟ್ಟಿ ಅವರು ತಮ್ಮ ಮನೆಯ ಮುಂಬಾಗದ ಕೊಣೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಕೊಲೆ ಮಾಡಿದವರು ಚಿನ್ನದ ಅಭರಣಕ್ಕಾಗಿ ಕೊಲೆ ಮಾಡಿರುವ ಸಾದ್ಯತೆ ಇದೆ ಎಂದು ಶಂಕಿಸಲಾಗಿದೆ.

ಕೈಂ ಡಿ.ಸಿ.ಪಿ ಉಮಾ ಪ್ರಶಾಂತ್, ಪಣಂಬೂರು ಎ.ಸಿ.ಪಿ ರಾಜೇಂದ್ರ, ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ, ಮೂಡಬಿದ್ರೆ ಠಾಣಾಧಿಕಾರಿ ರಾಮಚಂದ್ರ ನಾಯಕ್, ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದವರು ಭೇಟಿ ನೀಡಿ ತನುಖೆ ನಡೆಸುತ್ತಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here