Sunday 11th, May 2025
canara news

29ರ ಹರೆಯದ ಈ ಯುವಕ ಬಾಲಿವುಡ್ ತಾರೆ ಐಶ್ವರ್ಯಾ ರೈ ಮಗನಂತೆ!

Published On : 31 Dec 2017   |  Reported By : Canaranews network


ಮಂಗಳೂರು: ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿ ಸಂಚಲನ ಮೂಡಿಸಿದ್ದಾನೆ .

ಆಂದ್ರದ ವಿಶಾಖಪಟ್ಟಣಂ ಮೂಲದ 29 ವರ್ಷದ ಯುವಕ ತಾನು ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಅವರ ಮಗನೆಂದು ಹೇಳಿಕೊಂಡು ಹೊಸ ಬಾಂಬ್ ಸಿಡಿಸಿದ್ದಾನೆ. ಸಂಗೀತ್ ಕುಮಾರ್ ರೈ ಹೆಸರಿನ ಈ ಯುವಕ ಮಂಗಳೂರಿಗೆ ಬಂದು ಮಾಧ್ಯಮಗಳ ಎದುರು ಈ ಹೇಳಿಕೆ ನೀಡಿದ್ದಾನೆ. ಈತ ಹೇಳುವ ಪ್ರಕಾರ 1988ರಲ್ಲಿ ಈತನ ಜನನವಾಗಿದ್ದು, ಐಶ್ವರ್ಯ ಕೃಷ್ಣರಾಜ ರೈ ತನ್ನ ತಾಯಿ ಎಂದು ಹೇಳುತ್ತಿದ್ದಾನೆ.

ಐಶ್ವರ್ಯ ರೈಯ ಇಡೀ ಕುಟುಂಬ ಬಗ್ಗೆ ಹಾಗೂ ಐಶ್ವರ್ಯ ರೈ ಯಾವ ವರ್ಷದಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ಆಕೆ ನಟಿಸಿದ ಚಿತ್ರಗಳ ಬಗ್ಗೆಯೂ ಈತ ಮಾಹಿತಿ ಹೊಂದಿದ್ದಾನೆ. ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು, ಐಶ್ವರ್ಯಾ ರೈ ಹಾಗೂ ತನ್ನ ತಂದೆ ಐ.ವಿ.ಎಫ್ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು.

ಪದ್ಮಜಾ ಅವರು ನನ್ನ ಮಲತಾಯಿಯಾಗಿದ್ದಾರೆ. ನನ್ನ ಜನನ ಲಂಡನ್ ನಲ್ಲಿ ಆಗಿದೆ. ತನ್ನ ತಾಯಿ ಐಶ್ವರ್ಯ ರೈ ಇದೀಗ ಅಭಿಷೇಕ್ ಬಚ್ಚನ್ ಅನ್ನು ಮದುವೆಯಾಗಿದ್ದು, ಆರಾಧ್ಯ ಕೂಡಾ ಐವಿಎಫ್ ಮೆಥಡ್ ಮೂಲಕವೇ ಹುಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ತಾನು ಹುಟ್ಟಿದ ಆರಂಭದ ಎರಡು ವರ್ಷ ಐಶ್ವರ್ಯಾ ಕುಟುಂಬದ ಜೊತೆಗಿದ್ದೆ. ಆನಂತರ ಸುರಕ್ಷತೆಯ ದೃಷ್ಠಿಯಿಂದ ತನ್ನನ್ನು ತಂದೆ ವಿಶಾಖಪಟ್ಟಣಂಗೆ ತಂದು ಸಾಕಿದರು ಅಂತ ಹೇಳುತ್ತಾನೆ ಸಂಗೀತ್ ಕುಮಾರ್. ತಾನು ಆಕೆಯ ಮಗನೆಂದು ಹೇಳಿಕೊಳ್ಳಲು ಯಾವುದೇ ದಾಖಲೆ ತನ್ನಲ್ಲಿ ಇಲ್ಲ. ಎಲ್ಲಾ ದಾಖಲೆಗಳು ಐಶ್ವರ್ಯಾ ರೈ ತಾಯಿಯ ಬಳಿಯಿದೆ. ಐಶ್ವರ್ಯಾ ರೈ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳುತ್ತಾನೆ. ಈತನ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here