Sunday 11th, May 2025
canara news

ಎಸ್.ಡಿ.ಎಂ. ಕಾಲೇಜಿನ “ಮಾರಿಕಾಡು” ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Published On : 02 Jan 2018   |  Reported By : Rons Bantwal


ಉಜಿರೆ: ಚೆನ್ನೈನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಅಂತರ ವಿ.ವಿ. ಯುವಜನೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ “ಮಾರಿಕಾಡು” ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಡಾ. ಚಂದ್ರಶೇಖರ ಕಂಬಾರ ರಚಿಸಿದ “ಮಾರಿಕಾಡು” ನಾಟಕ ಮೂಲತಃ ವಿಲಿಯಂ ಶೇಕ್ಸ್‍ಪಿಯರ್‍ನ ಮ್ಯಾಕ್‍ಬೆತ್ ನಾಟಕದ ಕನ್ನಡ ರೂಪಾಂತರವಾಗಿದೆ.

ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಶಂಕರ್ ಮಾರ್ಗದರ್ಶನದಲ್ಲಿ 13 ವಿದ್ಯಾರ್ಥಿಗಳ ತಂಡ ನಾಟಕ ಪ್ರದರ್ಶನ ನೀಡಿದೆ. ವಿದ್ಯಾರ್ಥಿಗಳಾದ ಅನ್ವಿತ್ ಗೌಡ, ಅಂಕಿತ್ ಆಚಾರ್ಯ, ಶಶಿಪ್ರಭಾ, ಸಂಪದ ಎಸ್. ಭಾಗವತ್, ಚೇತನಾ ಡಿ., ಪದ್ಮರೇಖಾ ಕೆ. ಭಟ್, ನಿಶಾ ಭಟ್, ಅರ್ಚನಾ, ಶಿಲ್ಪಶ್ರೀ, ಶರಣ್ ಕುಮಾರ್, ಸಿಂಧುಲಕ್ಷ್ಮೀ, ಆದಿತ್ಯಾ ಪಾತ್ರಧಾರಿಗಳಾಗಿ ಉತ್ತಮ ನಿರ್ವಹಣೆ ಮಾಡಿದ್ದಾರೆ.

 

ಎಸ್.ಡಿ.ಎಂ. ವಸತಿ ಕಾಲೇಜು: ರಾಜ್ಯಮಟ್ಟದಲ್ಲಿ ಪ್ರಥಮ



ಉಜಿರೆ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ. ವಸತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಹರ್ಷಿತ್ ಬಿ. ನಾಯರ್ ಪ್ರಥಮ ಸ್ಥಾನ ಪಡೆದಿದ್ದಾರೆ.


ಅಭಿನಂದನೆ

ಉಜಿರೆ: ಮಲೇಶ್ಯಾದಲ್ಲಿ ಇತ್ತೀಚೆಗೆ ನಡೆದ ಏಶಿಯನ್ ನೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ತಂಡದ ಉಪನಾಯಕ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಎಂ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿ ನಿತಿನ್ ಮಂಗಳವಾರ ಧರ್ಮಸ್ಥಳದಲ್ಲಿ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಆತನ ಸಾಧನೆಗೆ ಅಭಿನಂದಿಸಿ ಹೆಗ್ಗಡೆಯವರು ಉಜ್ವಲ ಭವಿಷ್ಯವನ್ನು ಹಾರೈಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here