Sunday 11th, May 2025
canara news

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ

Published On : 02 Jan 2018   |  Reported By : Gurudatt Somayaji


ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ ನಾಲ್ಕು ದಿನಗಳ ಬೋಧಕರ ಅಭಿವೃದ್ಧಿ ಕಾರ್ಯಕ್ರಮವು ಜನವರಿ 16 ರಿಂದ 19 ರವರೆಗೆ ಜರುಗಲಿದೆ .

ಎಲೆಕ್ಟ್ರೋ ಸಿಸ್ಟಮ್ಸ್ ಅಸೋಸಿಯೇಟ್ಸ್ ಪ್ರೈ.ಲಿ. , ಬೆಂಗಳೂರು ಇದರ ಸಹಯೋಗದಲ್ಲಿ "ಎಂಬೆಡೆಡ್ ಕಂಟ್ರೋಲರ್ ಪ್ರೋಗ್ರಾಮಿಂಗ್ ವಿತ್ ಹ್ಯಾಂಡ್ಸ್- ಆನ್ ಯೂಸಿಂಗ್ ಕಾರ್ಟೆಕ್ಸ್ M3 " ಎಂಬ ವಿಷಯದಲ್ಲಿ ಬೋಧನಾಭಿವೃದ್ಧಿ ಕಾರ್ಯಾಗಾರವು ಜರುಗಲಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಇ ಎಸ್ ಎ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳನ್ನು ಮಾನ್ಯತೆ ಮಾಡಿದೆ .

ಈ ಕಾರ್ಯಾಗಾರದಲ್ಲಿ ಎ ಆರ್ ಎಂ ಕಾರ್ಟೆಕ್ಸ್ M3 ಪರಿಚಯ , ಕೇಯ್ಲ್ MDKARM ಸಾಫ್ಟ್ ವೇರ್ ಪರಿಚಯ , ವಿವಿಧ ಕಿಟ್ ಗಳು ಮತ್ತು ಉತ್ಪನ್ನಗಳ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ತರಬೇತಿಗಳು ನಡೆಯುತ್ತವೆ . ಈ ಕಾರ್ಯಕ್ರಮವು ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರಿಗೆ, ಸಂಶೋಧನಾ ನಿರತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ .

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಆಯೋಜಕರಾದ ಪ್ರೊ ತಾನಿಯಾ ಮೆಂಡಿಸ್ ಮತ್ತು ಪ್ರೊ ದೀಪಕ್ ರಾಜ್ ಇವರನ್ನು ಸಂಪರ್ಕಿಸಲು ಕೋರಲಾಗಿದೆ .




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here