Monday 12th, May 2025
canara news

ಹರಿಕೃಷ್ಣ ಬಂಟ್ವಾಳರನ್ನು ತರಾಟೆಗೆ ತೆಗೆದುಕೊಂಡ ಪತ್ರಕರ್ತರು

Published On : 03 Jan 2018   |  Reported By : canaranews network


ಮಂಗಳೂರು: ಕಾಂಗ್ರೆಸ್ ಪಕ್ಷ ತೊರೆದು ಬಿಜಿಪಿಗೆ ಸೇರ್ಪಡೆಗೊಂಡ ಹರಿಕೃಷ್ಣ ಬಂಟ್ವಾಳರನ್ನು ಮಾದ್ಯಮದವರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಹರಿಕೃಷ್ಣ ಬಂಟ್ವಾಳ ಎಂದಿನಂತೆ ರೈ ವಿರುದ್ಧ ಬ್ಯಾಟಿಂಗ್ ಆರಂಭಿಸಿದ್ದರು.ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳುಗಳ ಹಿಂದೆ ಜನಾರ್ದನ ಪೂಜಾರಿಯವರಿಗೆ ಆಡಿದ ನಿಂದನೆಯ ಮಾತುಗಳು ಅವರ ಕಣ್ಣೀರಿಗೆ ಕಾರಣ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದರು. ಈ ಬಗ್ಗೆ ಅವರು ಇದೇ ವಿಷಯವನ್ನಿಟ್ಟುಕೊಂಡು ಈ ಹಿಂದೆಯೂ ಪತ್ರಿಕಾಗೋಷ್ಟಿಗಳನ್ನು ನಡೆಸಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈಯವರು ಕಣ್ಣೀರಿಟ್ಟು ತಾನು ಪೂಜಾರಿಯವರಿಗೆ ಯಾವುದೇ ಮಾತುಗಳಿಂದ ನಿಂದಿಸಲಿಲ್ಲ. ಈ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆಗೂ ಸಿದ್ಧನಿದ್ದೇನೆ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.


ಇದೇ ವಿಚಾರವನ್ನು ಇಟ್ಟುಕೊಂಡು ಹರಿಕೃಷ್ಣ ಬಂಟ್ವಾಳ್ ಮತ್ತೆ ಮಾಧ್ಯಮದ ಮುಂದೆ ರೈ ವಿರುದ್ಧ ವಾಗ್ದಾಳಿಗೆ ಮುಂದಾಗಿದ್ದರು.ಮಾಧ್ಯಮಗಳಿಗೆ ಎಲ್ಲಾ ವಿವರಣೆಯ ನೀಡಿದ ಬಳಿಕ ಪತ್ರಕರ್ತರು ನೇರವಾಗಿ ಹರಿಕೃಷ್ಣ ಬಂಟ್ವಾಳ್ ಅವರನ್ನು ತರಾಟೆಗೆ ತೆಗೆದುಕೊಂಡು, ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ಮದ್ಯೆ ಎದ್ದಿರುವ ಈ ವಿವಾದವನ್ನು ನೀವೆ ಮತ್ತೆ ಮತ್ತೆ ಪ್ರಸ್ತಾಪಿಸಿ ವಿವಾದ ತಣ್ಣಾಗಾಗಲು ಬಿಡುತ್ತಿಲ್ಲ ಏಕೆ ಎಂದು ಕಿಡಿಕಾರಿದರು."ನೀವು ಕಾಂಗ್ರೆಸ್ ನಲ್ಲಿರುವಾಗ, ನಿಮಗೆ ರೈ ವಿರುದ್ದ ಯಾವುದೇ ತಕರಾರು ಇರಲಿಲ್ಲ, ಇದೀಗ ಬಿಜೆಪಿ ಸೇರ್ಪಡೆಗೊಂಡ ನಂತರ, ನೀವು ಅದನ್ನು ಸ್ಫೋಟಿಸುತ್ತಿದ್ದೀರಿ. ಇದು ಎರಡು ಕಾಂಗ್ರೆಸ್ ಮುಖಂಡರ ನಡುವಿನ ಸಮಸ್ಯೆ ಮಾತ್ರವೇ? "ಅವರು ಕೇಳಿದರು. ಪತ್ರಕರ್ತರ ತೀಕ್ಷ್ನ ಪ್ರಶ್ನೆಗಳನ್ನು ತಪ್ಪಿಸಲು ಹರಿಕೃಷ್ಣ ಸಮಧಾನಕರ ಉತ್ತರ ನೀಡಲು ಪ್ರಯತ್ನವನ್ನು ಮಾಡಿದರು, ಆದರೆ ಮಾಧ್ಯಮದವರು ಧರ್ಮಸ್ಥಳದಲ್ಲಿ ಶಪಥ ಮಾಡುವ ವಿಚಾರವನ್ನು ತೆಗೆದುಕೊಂಡು ತನ್ನ ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಉಪಯೋಗಿಸುವುದನ್ನು ನಿಲ್ಲಿಸಬೇಕೆಂದು ಪತ್ರಕರ್ತರು ಒತ್ತಾಯಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here