Sunday 11th, May 2025
canara news

ಕುಂದಾಪುರ ಸಂತ ಜೋಸೆಫ್ ಶಾಲಾ ವಾರ್ಷಿಕೋತ್ಸವ

Published On : 21 Dec 2017   |  Reported By : Bernard D'Costa


ಕುಂದಾಪುರ,ಡಿ.20: ಕುಂದಾಪುರದ ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲೆಯ ವಾರ್ಷಿಕೋತ್ಸವವು ಶಾಲಾ ಮೈದಾನದಲ್ಲಿ ನೆಡೆಯಿತು. ಇದರ ಉದ್ಘಾಟನೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಡಿಸೋಜಾ ದೀಪ ಬೆಳಗಿಸಿ ಉದ್ಘಾಟಿಸಿ ‘ಈ ಶಾಲೆ 87 ವರ್ಷದಿಂದ ಎಳೆಯ ಮುಗ್ದ ಮಕ್ಕಳಿಗೆ ಜ್ಞಾನರ್ಧನೆಯನ್ನು ನೀಡುತ್ತಾ ಬಂದಿದ್ದಾರೆಅವರನ್ನು ತಿದ್ದಿ ಬುದ್ದಿ ಹೇಳಿ, ಗುಣ ಮಟ್ಟದ ಶಿಕ್ಷಣ ನೀಡಿ ಉತ್ತಮ ನಾಗರಿಕನನ್ನಾಗಿ ಮಾಡುತಿದ್ದಾರೆ, ಹೆತ್ತವರು ಮಕ್ಕಳನ್ನು ಪ್ರೀತಿಸಿ ಅವರನ್ನು ಸ್ನೇಹಿತರಂತೆ ಕಾಣ ಬೇಕೆಂದು ಆಶಿರ್ವವಚ ನೀಡಿದರು.

ಅಧ್ಯಕ್ಷತೆಯನ್ನು ಕಾರ್ಮೆಲ್ ಶಿಕ್ಶಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ವಾಯ್ಲೆಟ್ ತಾವ್ರೊ ಜ್ಞಾನಾರ್ಧನೆಯನ್ನು ಪಡೆದರೆ ಮಾನವ ವಿಕಾಸಗೊಳ್ಳುತ್ತಾನೆ, ಆದರಿಂದ ಮಾನವನಿಗೆ ವಿಧ್ಯೆ ಜ್ಞಾನ ಅಗತ್ಯವಾಗಿ ಬೇಕಾಗಿದೆ’ ಎಂದು ಅವರು ನುಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಪುರಸಭೆ ಸದಸ್ಯೆ ಗುಣರತ್ನ ‘ ಮಕ್ಕಳನ್ನು ಹೆತ್ತವರು ಕೇವಲ ಶಾಲೆಯಲ್ಲಿ ಸೇರಿಸಿದರೆ ಮಾತ್ರ ಸಲ್ಲದು, ಅವರ ಬಗ್ಗೆ ಕಾಳಜಿ ವಹಿಸಿ, ಶಾಲೆಗೆ ಭೇಟಿ ನೀಡಿ ಅವರ ಬಗ್ಗೆ ತಿಳಿದುಕೊಳ್ಳಿ, ಎಲ್ಲ ರೀತಿಯ ಎಲೆಗಳಲ್ಲಿ ಒಷಧಿಗಳ ಗುಣ ಇದೆಯೋ ಅದೇ ರೀತಿ ಎಲ್ಲ ಮಕ್ಕಳಲ್ಲು ವಿಬಿಧ ರೀತಿಯ ಪ್ರತಿಭೆಗಳು ಇರುತ್ತವೆ, ಆದರಿಂದ ಯಾರೂ ಮಕ್ಕಳನ್ನು ಕೀಳರಿಮೆಯಿಂದ ಕಾಣಬಾರದು’ ಸಂದೇಶ ನೀಡಿದರು.

ಶಾಲ ಶಿಕ್ಷಕ ರಕ್ಷಕ ಸಂಘ ಇದರ ಅಧ್ಯಕ್ಷ ಹರೀಶ್ ಭಂಡಾರಿ ಶುಭ ಹಾರೈಸಿದರು, ಸಿಸ್ಟರ್ ಕೀರ್ತನ ಶಾಲಾ ವರದಿಯನ್ನು ವಾಚಿಸಿದರು. ಸಿಸ್ಟರ್ ನಮಿತಾ ಸ್ವಾಗತವನ್ನು ಕೋರಿದರು ಶಿಕ್ಷಕಿ ವನಿತಾ ಬಾರೆಟ್ಟೊ ಧನ್ಯವಾದಗಳನ್ನು ಅರ್ಪಿಸಿದರು. ಶಿಕ್ಷಕ ಅನಿಲ್ ಪಾಯ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.ನಂತರ ಮಕ್ಕಳಿಂದ ನ್ರತ್ಯ, ಕಿರು ನಾಟಕ, ಪ್ರದರ್ಶನ ನೆಡೆಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here