Monday 12th, May 2025
canara news

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಮುಂಬಯಿ ನೇಮಕ

Published On : 04 Jan 2018   |  Reported By : Rons Bantwal


ಮುಂಬಯಿ, ಜ.04: ಎಐಸಿಐ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರು ಇಂದಿಲ್ಲಿ ಬೆಂಗಳೂರು ಸದಾಶಿವ ನಗರದಲ್ಲಿನ ರಾಷ್ಟ್ರೀಯ ಕಾಂಗ್ರೇಸ್ ಐ) ಪಕ್ಷದ ರಾಜ್ಯಧ್ಯಕ್ಷರ ಅಧಿಕೃತ ನಿವಾಸಕ್ಕೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಅವರಿಗೆ ಪುಷ್ಪಗುಪ್ಛವನ್ನಿತ್ತು ಅಭಿವಂದಿಸಿದರು.

ಇತ್ತೀಚೆಗಷ್ಟೇ ತನ್ನ ಬೆಂಗಲಿಗ ಪಡೆಯೊಂದಿಗೆ ಡಾ| ರಾಜಶೇಖರ್ ಅವರು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೇಸ್ ಪಕ್ಷ ಸೇರಿದ್ದು, ವಿಶ್ವದಾದ್ಯಂತ ಸೇವಾ ನಿರತ ಬಿಲ್ಲವ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸಾಂಘಿಕತ್ವದಲ್ಲಿ ಮೂಲ್ಕಿಯಲ್ಲಿ ಬಿಲ್ಲವ ಕ್ರೀಡಾ ಸಮಿತಿ ಮುಖೇನ ಆಯೋಜಿಸಿದ್ದ ಎರಡು ದಿನಗಳ ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ನಂತರ ಭಾರೀ ಪ್ರಸಿದ್ಧಿಗೆ ಬಂದಿರುವ ಸರಳ ಸಜ್ಜನಿಕಾ, ನಿಷ್ಠಾವಂತ ಯುವ ನಾಯಕರಾಗಿ ಇದೀಗ ಸಕ್ರೀಯ ರಾಜಕೀಯಕ್ಕೆ ಪ್ರವೇಶಗೈದಿದ್ದಾರೆ. ಇವರ ಸೇವಾನಿಷ್ಠೆಯನ್ನು ತಿಳಿದ ಅಭಿಮಾನಿ ಬಳಗವು ಕಳೆದ ಡಿ.09ರಂದು ಮಂಗಳೂರುನ ಡಾ| ಟಿ.ಎಂ.ಎ ಪೈ ಸಭಾಗೃಹದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಏರ್ಪಡಿಸಿ ಅಭಿನಂದಿಸಿ ಡಾ| ರಾಜಶೇಖರ್‍ಗೆ ಭವ್ಯ ರಾಜಕೀಯ ಭವಿಷ್ಯವನ್ನು ಹಾರೈಸಿತ್ತು.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‍ವುಡ್ ನಟ, ನಿರ್ಮಾಪಕÀ, ನಿರ್ದೇಶಕ, ಡಾ| ರಾಜಶೇಖರ ಕೋಟ್ಯಾನ್ ಮುಂಬಯಿನ ಯುವ ಹೊಟೇಲು ಉದ್ಯಮಿ ಆಗಿ, ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದ ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್'ನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here