Saturday 5th, July 2025
canara news

ಸೈಂಟ್ ಜೋನ್ ಕೊಂಕಣಿ ಸಮುದಾಯ ಮರೋಲ್ ಸಂಸ್ಥೆಯಿಂದ ಬಾಂದ್ರಾ ಪೂರ್ವದಲ್ಲಿನ ಬಿಇಸಿಸಿ ಅನಾಥಾಶ್ರಮಕ್ಕೆ ಭೇಟಿ

Published On : 04 Jan 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಸೈಂಟ್ ಜೋನ್ ಎವಂಜಲಿಸ್ಟ್ ಚರ್ಚ್ ಇದರ ಸೈಂಟ್ ಜೋನ್ ಕೊಂಕಣಿ ಸಮುದಾಯವು ಬಾಂದ್ರಾ ಪೂರ್ವದಲ್ಲಿನ ಬಿಇಸಿಸಿ ಅನಾಥಾಶ್ರಮಕ್ಕೆ ಭೇಟಿ ಅಲ್ಲಿನ ಅನಾಥ ಮಕ್ಕಳೊಂದಿಗೆ ನೂತನ ವರ್ಷಾಚರಣೆ ಸಂಭ್ರಮಿಸಿತು.

ತೆರೆಮರೆಯ ನಿಷ್ಠಾವಂತ ಸಮಾಜ ಸೇವಕ, ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಲ್ಲೋರ್ವರಾದ ಕ್ಲೋಡಿ ಮೊಂತೇರೊ ಮೊಡಂಕಾಪು ನೇತೃತ್ವದಲ್ಲಿ ಕಳೆದ ಸೋಮವಾರ ಹೊಸವರ್ಷದ ದಿನ ಸಮುದಾಯದ ಪದಾಧಿಕಾರಿಗಳು ಮತ್ತು ಸದಸ್ಯರು ಬಾಂದ್ರಾ ಈಸ್ಟ್ ಕಮ್ಯೂನಿಟಿ ಸೆಂಟರ್‍ಗೆ ತೆರಳಿ ಅಕ್ಕಿ, ಸಕ್ಕರೆ, ಚಾಹುಡಿ, ಬಿಸ್ಕೇಟ್, ಸಾಬೂನು ಅಲ್ಲದೆ ಇನ್ನಿತರ ಆಹಾರವಸ್ತುಗಳನ್ನು ನೀಡಿದರು ಹಾಗೂ ಅಲ್ಲಿನ ಮಕ್ಕಳೊಡನೆ ಸಂಗೀತಮಯವಾಗಿ ಸಮಯ ಕಳೆಯುತ್ತಾ ಮಕ್ಕಳ ಮನಗಳಿಗೆ ಮುದವನ್ನಿತ್ತರು. ಬಿಇಸಿಸಿ ನಿರ್ದೇಶಕ ಫಾ| ಪ್ರೇಮ್ ಆರೋಕ್ಯನ್ ಸುಖಾಗಮನ ಬಯಸಿ ಮಕ್ಕಳ ಮೇಲಿನ ದಯಾಧೋರಣೆಗಾಗಿ ವಂದಿಸಿ ಹರಸಿದರು.

ಈ ಸಂದರ್ಭದಲ್ಲಿ ಕೊಂಕಣಿ ಸಮುದಾಯದ ಕಾರ್ಯದರ್ಶಿ ಮೇರಿ ಫೆರ್ನಾಂಡಿಸ್, ಕೋಶಾಧಿಕಾರಿ ಜೇಮ್ಸ್ ಡೆ'ಸಾ, ಸದಸ್ಯರುಗಳಾದ ತೆಲ್ಮಾ ಡೆಸಾ, ಕ್ಲೋಡಿ ಮೊಂತೇರೊ, ಜಯವೀರ ಪಾಲಡ್ಕ, ಹಿಲ್ಡಾ ಪಿರೇರ, ಗ್ರೆಟ್ಟಾ ಡಿ'ಸಿಲ್ವಾ, ಆಲಿಸ್ ಡಿ'ಸೋಜಾ, ಡೆನಿಸ್ ಡಿ'ಸಿಲ್ವಾ, ಗ್ರೇಸಿ ದಾಂತಿಸ್, ರೆಜಿನಾ ಡಿ'ಸಿಲ್ವಾ, ಲಿಡ್ವಿನ್ ಮಿನೇಜಸ್ ಪೆÇವಾಯಿ ಮತ್ತಿತರು ಉಪಸ್ಥಿತರಿದ್ದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here