Monday 12th, May 2025
canara news

ದೀಪಕ್ ರಾವ್ ಕೊಲೆ ಪ್ರಕರಣ: ರೈ-ಶೋಭಾ ನಡುವೆ ವಾಗ್ವಾದ

Published On : 05 Jan 2018   |  Reported By : canaranews network


ಮಂಗಳೂರು: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ನಡೆದ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಕೀಯ ನಾಯಕರು ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದಾರೆ. ರಾಜಕೀಯ ಆರೋಪ-ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದರ ಫೋನ್ ಇನ್ ಕಾರ್ಯಕ್ರಮವೊಂದರಲ್ಲಿ ಶೋಭಾ ಕರಂದ್ಲಾಜೆ ಹಾಗೂ ರಮನಾಥ ರೈ ಅವರ ನಡುವೆ ವಾಗ್ವಾದ ನಡೆದಿದ್ದು, ಸುದ್ದಿಯಾಗಿದೆ.

ಜಿಹಾದಿ ಮನಸ್ಥಿತಿಯ ಸಂಘಟನೆಗಳಾದ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ ಎಂಬ ಶೋಭಾ ಕರಂದ್ಲಾಜೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳು ಅಸ್ತಿತ್ವದಲ್ಲಿತ್ತು, ಆಗ ಏಕೆ ಅವರು ನಿಷೇಧಿಸಲಿಲ್ಲ, ಆ ಸಂಘಟನೆಗಳು ಕರ್ನಾಟದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆ ಇವೆ ಮೋದಿ ಅವರೇ ಸಂಘಟನೆಗಳ ಮೇಲೆ ನಿಷೇಧ ಹೇರಲಿ ಎಂದರು.ಬಲಪಂಥೀಯ ಸಂಘಟನೆಗಳಿಂದಲೂ ಹತ್ಯೆಗಳು ನಡೆದಿವೆ ಎಂದ ರಮಾನಾಥ ರೈ ಅವರು, ಭಜರಂಗದಳವನ್ನೂ ನಿಷೇಧಿಸಬೇಕಿದೆ ಎಂದರು.

ಇದಕ್ಕೆ ಕೆರಳಿದ ಶೋಭಾ ಕರಂದ್ಲಾಜೆ ಅವರು ನಿಮಗೆ ತಾಕತ್ತಿದ್ದರೆ ಭಜರಂಗದಳ ಸಂಘಟನೆಯನ್ನು ನಿಷೇಧಿಸಿ ಎಂದು ಸವಾಲು ಹಾಕಿದರು.ನೀವು ಪಿಎಫ್ಐ ಸಂಘಟನೆಗೆ ಬೆಂಬಲ ಕೊಡುತ್ತಿದ್ದೀರಿ ಎಂದು ಶೋಭಾ ಕರಂದ್ಲಾಜೆ ಅವರು ರಮಾನಾಥ ರೈ ವಿರುದ್ಧ ಆರೋಪ ಮಾಡಿದರು, ಇದಕ್ಕೆ ಉತ್ತರಿಸಿದ ಸಚಿವರು ಪಿಎಫ್ಐ ನನ್ನ ವಿರುದ್ಧ ಮೂರು ಬಾರಿ ಚುನಾವಣೆಗೆ ನಿಂತಿದೆ, ಆ ಸಂಘಟನೆಗೆ ನಾನು ಬೆಂಬಲ ಕೊಡುತ್ತಿಲ್ಲ, ನಿಮ್ಮ ಪಕ್ಷದವರು ಪಿಎಫ್ಐ ಗೆ ಹಣ ನೀಡಿ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದೀರಿ ನನ್ನ ಬಳಿ ಸಾಕ್ಷಿ ಇದೆ ಎಂದು ಅಬ್ಬರಿಸಿದರು.

ನೀವು ಜಿಲ್ಲೆಯ ಎಸ್ಪಿ ಅವರ ಜೊತೆ ಸೇರಿಕೊಂಡು ರೌಡಿ ಶೀಟರ್ ಅನ್ನು ಜೊತೆಗೆ ಕೂರಿಸಿಕೊಂಡು ಸಭೆ ಮಾಡಿದ್ದೀರಿ ಎಂದು ಶೋಭಾ ಕರಂದ್ಲಾಜೆ ಏರಿದ ಧ್ವನಿಯಲ್ಲಿ ಅಬ್ಬರಿಸಿದರು. ಇದಕ್ಕೆ ಕೆರಳಿದ ರಮಾನಾಥ ರೈ ಅವರು, ನಿಮಗೆ ತಾಕತ್ತಿದ್ದರೆ ಅದನ್ನು ಸಾಬೀತು ಮಾಡಿ ಎಂದು ಸವಾಲೆಸೆದರು. ಇದರಿಂದ ಬೇಸರಗೊಂಡ ಶೋಭಾ ಅವರು ನಿಮ್ಮ ಮಟ್ಟಕ್ಕೆ ನಾನು ಮಾತನಾಡಲು ಸಾಧ್ಯವಿಲ್ಲ ನಾನು ಕರೆ ಅಂತ್ಯಗೊಳಿಸುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here